Advertisement

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಶ್ರೀಕಂಠೇಗೌಡರಿಗೇ ಜೆಡಿಎಸ್‌ ಟಿಕೆಟ್‌?

11:23 PM May 13, 2024 | Team Udayavani |

ಬೆಂಗಳೂರು: ನೈಋತ್ಯ ಶಿಕ್ಷಕರ ಕ್ಷೇತ್ರದ ಹಾಲಿ ಸದಸ್ಯರೂ ಆಗಿರುವ ಎಸ್‌.ಎಲ್‌. ಭೋಜೇಗೌಡ ಮರು ಆಯ್ಕೆ ಬಯಸಿ ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಿದ್ದು, ಬಿಜೆಪಿ ಬಿಟ್ಟುಕೊಟ್ಟಿರುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ.

Advertisement

ಮೈತ್ರಿ ಮರೆತು ಗೊಂದಲ ಮಾಡಿ ಕೊಂಡಿದ್ದ ಬಿಜೆಪಿ, ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಇ.ಸಿ. ನಿಂಗರಾಜು ಅವರ ಹೆಸರನ್ನು ಘೋಷಣೆ ಮಾಡಿತ್ತು. ರವಿವಾರ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹಾಗೂ ಬಿಜೆಪಿ ನೇತಾರ ಜೆ.ಪಿ. ನಡ್ಡಾ ಮತ್ತು ಅಮಿತ್‌ ಶಾ ನಡುವೆ ಮಾತುಕತೆಯಿಂದ ಗೊಂದಲ ಬಗೆಹರಿದಿದೆ.

ಈ ಮಾತುಕತೆ ವೇಳೆ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ ಶ್ರೀಕಂಠೇಗೌಡ ಕೂಡ ಇದ್ದರು. ಆದರೆ ಜೆಡಿಎಸ್‌ನಿಂದ ಸ್ಪರ್ಧಿಸುವ ಅಭ್ಯರ್ಥಿ ಯಾರು ಎಂಬುದನ್ನು ಪಕ್ಷ ಅಧಿಕೃತವಾಗಿ ಘೋಷಿಸಿಲ್ಲ. ಹೀಗಾಗಿ ವಿವೇಕಾನಂದ ಕೂಡ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇದೆಲ್ಲದರ ನಡುವೆ ಮೇಲ್ಮನೆಯ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅವರ ಹೆಸರೇ ಅಂತಿಮಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ದಕ್ಷಿಣ ಪದವೀಧರ ಕ್ಷೇತ್ರದಿಂದ 2 ಬಾರಿ ಆಯ್ಕೆಯಾಗಿದ್ದ ಶ್ರೀಕಂಠೇ ಗೌಡರು ಮೈಸೂರು, ಮಂಡ್ಯ, ಹಾಸನ ವ್ಯಾಪ್ತಿಯ ಪದವೀಧರ ಕ್ಷೇತ್ರದಲ್ಲಿ ಜೆಡಿಎಸ್‌ ನೆಲೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದರು. ವಿಧಾನಪರಿಷತ್ತಿನಲ್ಲಿ ಜೆಡಿಎಸ್‌ ಉಪನಾಯಕರು, ಪಕ್ಷದ ವಕ್ತಾರರಾಗಿದ್ದ ಶ್ರೀಕಂಠೇಗೌಡ, ಪದವೀಧರ ಕ್ಷೇತ್ರದಿಂದ ಗೆದ್ದಿದ್ದರೂ ಶಿಕ್ಷಕರ ಬಗ್ಗೆಯೂ ಕಾಳಜಿ ವಹಿಸಿದ್ದರು. ಈಗ ಇದೇ ಮೊದಲ ಬಾರಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next