Advertisement

Legislative Council ಇಂದು ವಿಪಕ್ಷ ನಾಯಕರ ಆಯ್ಕೆ: ರವಿಕುಮಾರ್‌ಗೆ ಮೇಲ್ಮನೆ ಸಾರಥ್ಯ?

11:19 PM Jul 13, 2024 | Team Udayavani |

ಬೆಂಗಳೂರು: ವಿಧಾನ ಪರಿಷತ್‌ ವಿಪಕ್ಷ ನಾಯಕನ ಆಯ್ಕೆ ವಿಚಾರ ರವಿವಾರ ಸಾಯಂಕಾಲದ ವೇಳೆಗೆ ಅಂತಿಮಗೊಳ್ಳುವ ಸಾಧ್ಯತೆ ಇದ್ದು ಎನ್‌. ರವಿಕುಮಾರ್‌ ನೇಮಕ ಸಾಧ್ಯತೆ ದಟ್ಟವಾಗಿದೆ.

Advertisement

ಕಳೆದ ವಾರ ನಡೆದ ಬಿಜೆಪಿ ಸರಣಿ ಸಭೆ ಸಂದರ್ಭದಲ್ಲಿ ವಿಪಕ್ಷ ನಾಯಕನ ಆಯ್ಕೆ ವಿಚಾರದ ಬಗ್ಗೆ ಚರ್ಚೆಯಾಗಿದೆ. ಹಿಂದುಳಿದ ವರ್ಗದಿಂದ ಎನ್‌.ರವಿಕುಮಾರ್‌, ಪರಿಶಿಷ್ಟ ಜಾತಿಯಿಂದ ಛಲವಾದಿ ನಾರಾಯಣ ಸ್ವಾಮಿ ಹಾಗೂ ಒಕ್ಕಲಿಗ ಸಮುದಾಯದಿಂದ ಸಿ.ಟಿ. ರವಿ ಹೆಸರನ್ನು ದಿಲ್ಲಿಗೆ ಕಳುಹಿಸಲಾಗಿದೆ.

ಸಿ.ಟಿ. ರವಿ ಅವರಿಗೆ ವಿಪಕ್ಷ ನಾಯಕ ಸ್ಥಾನ ಕೊಟ್ಟರೆ ವಿಧಾನಸಭೆಯಲ್ಲಿ ಜಾತಿ ಸಮೀಕರಣ ಬದಲಿಸಬೇಕಾಗುವ ಸನ್ನಿವೇಶ ನಿರ್ಮಾಣವಾಗಲಿದೆ. ಜತೆಗೆ ಈ ಆಯ್ಕೆಗೆ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಕೆಲ ನಾಯಕರ ಆಕ್ಷೇಪವಿದೆ ಎನ್ನಲಾಗಿದೆ. ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿಗೆ ಆಯಕಟ್ಟಿನ ಹುದ್ದೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ದೊರಕದೇ ಇರುವ ಕಾರಣಕ್ಕೆ ರವಿಕುಮಾರ್‌ ಅಥವಾ ಛಲವಾದಿ ಆಯ್ಕೆ ಸಾಧ್ಯತೆ ಹೆಚ್ಚಿದೆ.

ಆದರೆ ಆಯಕಟ್ಟಿನ ಹುದ್ದೆಗಳಿಗೆ ಅನ್ಯ ಪಕ್ಷದಿಂದ ಬಂದವರಿಗೆ ಆದ್ಯತೆ ನೀಡುವ ಬದಲು ಸಂಘಟನೆ ವ್ಯಕ್ತಿಗಳನ್ನೇ ನೇಮಿಸಿ ಎಂಬ ವಾದ ಪ್ರಬಲವಾಗಿದೆ. ರಾಜ್ಯ ಉಸ್ತುವಾರಿ ಡಾ.ಅಗರ್ವಾಲ್‌ ಕೂಡ ಇದೇ ಅಭಿಪ್ರಾಯ ಹೊಂದಿದ್ದು, ವರಿಷ್ಠರು ರವಿಕುಮಾರ್‌ಗೆ ಆದ್ಯತೆ ನೀಡುವ ಸಾಧ್ಯತೆ ಹೆಚ್ಚಿದೆ ಎಂಬ ಮಾತು ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next