Advertisement
ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗಕ್ಕೆ ಮಂಜೂರಾದ, ಭಡ್ತಿ ಹೊಂದಿದ ಮತ್ತು ಖಾಲಿ ಇರುವ ಚಾಲಕ, ನಿರ್ವಾಹಕ ಮತ್ತು ಇತರ ಸಿಬಂದಿ ಸಂಖ್ಯೆ ಎಷ್ಟು ಎಂದು ಪ್ರಶ್ನಿಸಿದ ಶಾಸಕಿ, ಸುಳ್ಯ, ಕಡಬ ತಾಲೂಕುಗಳ ಗ್ರಾಮೀಣ ಪ್ರದೇಶಗಳಿಗೆ ಅಗತ್ಯವಿರುವಷ್ಟು ಬಸ್‌ಗಳು ಸಂಚರಿಸದೆ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದರು.
ಸರಕಾರದಿಂದ ಹೈನುಗಾರಿಕೆ ಪ್ರತೀ ಲೀಟರ್ ಹಾಲಿಗೆ ನೀಡಲಾಗುವ ಪ್ರೋತ್ಸಾಹಧನದ ಬಗೆಗಿನ ಪ್ರಶ್ನೆಗೆ ಪ್ರತೀ ಲೀಟರ್ ಗುಣಮಟ್ಟದ ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡಲಾಗಿದೆ ಎಂದು ಉತ್ತರ ನೀಡಲಾಗಿದೆ. ಹೈನುಗಾರರಿಗೆ ಪಾವತಿಸಬೇಕಾದ ಪ್ರೋತ್ಸಾಹಧನ ಮೊತ್ತದಲ್ಲಿ ಸುಳ್ಯ ಮತ್ತು ಕಡಬ ತಾಲೂಕಿಗೆ ಪಾವತಿಸಬೇಕಾದ ಬಾಕಿಯ ಕುರಿತು ಶಾಸಕರು ವಿವರ ಕೇಳಿದಾಗ ಉಭಯ ತಾಲೂಕುಗಳಲ್ಲಿ 4.33 ಕೋಟಿ ರೂ. ಪ್ರೋತ್ಸಾಹಧನ ವಿತರಣೆಗೆ ಬಾಕಿ ಇದೆ; ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನೆ ಸಚಿವರು ಉತ್ತರಿಸಿದರು.
Related Articles
Advertisement
ಸುಳ್ಯ ತಾಲೂಕಿನಲ್ಲಿ 10 ಮತ್ತು ಕಡಬ ತಾಲೂಕಿನಲ್ಲಿ 8 ಮಂದಿ ಪರವಾನಿಯುಳ್ಳ ಭೂಮಾಪಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಲಾಗಿದೆ.