Advertisement

ಭಾರತದ ಮಾಜಿ ಕ್ರಿಕೆಟಿಗ ಸುನೀಲ್‌ ಗಾವಸ್ಕರ್‌ಗೆ ಮಾತೃವಿಯೋಗ

11:05 PM Dec 26, 2022 | Team Udayavani |

ಮುಂಬಯಿ: ಭಾರತದ ಮಾಜಿ ಕ್ರಿಕೆಟಿಗ ಸುನೀಲ್‌ ಗಾವಸ್ಕರ್‌ ಅವರ ತಾಯಿ ಮೀನಾ ಗಾವಸ್ಕರ್‌ ಕ್ರಿಸ್ಮಸ್‌ ದಿನ ನಿಧನ ಹೊಂದಿದರು (95).

Advertisement

ಈ ಸುದ್ದಿ ತಿಳಿಯುವಾಗ ಸುನೀಲ್‌ ಗಾವಸ್ಕರ್‌ ಢಾಕಾದಲ್ಲಿ ಭಾರತ- ಬಾಂಗ್ಲಾದೇಶ ನಡುವಿನ ದ್ವಿತೀಯ ಟೆಸ್ಟ್‌ ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿದ್ದರು.

ಮೀನಾ ಅವರು ಮಕ್ಕಳಾದ ಸುನೀಲ್‌, ನೂತನ್‌ ಮತ್ತು ಕವಿತಾ, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.

ಸುನೀಲ್‌ ಅವರ ಕ್ರಿಕೆಟ್‌ ಹುಚ್ಚನ್ನು ಬಾಲ್ಯದಿಂದಲೇ ಗುರುತಿ ಸಿದ್ದ ಮೀನಾ, ಮಗನಿಗಾಗಿ ಬ್ಯಾಟ್‌, ಬಾಲ್‌ ತಂದುಕೊಟ್ಟು ಪ್ರೋತ್ಸಾಹಿಸಿ ದ್ದರು. ಮಗನ ಕ್ರಿಕೆಟ್‌ ಬೆಳವಣಿಗೆ ಯಲ್ಲಿ ಮೀನಾ ಪಾತ್ರ ಮಹತ್ವದ್ದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next