ನವದೆಹಲಿ: ಸರ್ಕಾರಿ ಆಸ್ತಿಯ ಮೂಲಕ 6 ಲಕ್ಷ ಕೋಟಿ ರೂ. ಮೊತ್ತದ ಸಂಪತ್ತು ಕ್ರೋಡೀಕರಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಖಾಸಗಿಯವರಿಗೆ ಸರ್ಕಾರಿ ಆಸ್ತಿಯನ್ನು ವಹಿಸುವ ಮೂಲಕ “ಕೇಂದ್ರ ಸರ್ಕಾರ ಸಂಘಟಿತ ಲೂಟಿ ಮತ್ತು ವ್ಯವ ಸ್ತಿತ ಸುಲಿಗೆಗೆ ಮುಂದಾಗಿದೆ’ ಎಂದು ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಟೀಕಿಸಿದ್ದಾರೆ.
ದಶಕಗಳ ಪರಿಶ್ರಮ, ದುಡಿಮೆಯಿಂದ ನಿರ್ಮಾಣಗೊಂಡ ಬೆಲೆ ಕಟ್ಟಲಾಗದ ಸರ್ಕಾರಿ ಆಸ್ತಿಯನ್ನು ಈಗ ಕೇಂದ್ರ ಸರ್ಕಾರ ತನ್ನ ಸಿರಿವಂತ ಸ್ನೇಹಿತರಿಗೆ ನೀಡುತ್ತಿದೆ. ನೋಟು ಅಮಾನ್ಯ ಅದಕ್ಕೆ ಮೊದಲ ಮೊದಲ ಉದಾಹರಣೆ. ಆದನ್ನು ಟೀಕಿಸಿದ್ದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಸಂಘಟಿತ ಲೂಟಿ ಮತ್ತು ಕಾನೂನುಬದ್ಧ ಅಪರಾಧ ಎಂದು ಬಣ್ಣಿಸಿದ್ದರು.
ಇದನ್ನೂ ಓದಿ:ಲವ್ ಯೂ ರಚ್ಚು ಚಿತ್ರದ ನಟಿ ರಚಿತಾ ರಾಮ್ ಬಿಡದಿ ಪೊಲೀಸ್ ಠಾಣೆಗೆ ಭೇಟಿ
ಈಗ ಆಸ್ತಿಯ ಮೂಲಕ ಸಂಪತ್ತು ಕ್ರೋಡೀಕರಿಸುವ ಮತ್ತೊಂದು ಯೋಜನೆಯನ್ನು ಸರ್ಕಾರ ಜಾರಿಗೊಳಿಸುತ್ತಿದೆ ಎಂದು ಜೈರಾಂ ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ಪ್ರಿಯಾಂಕ ವಾದ್ರಾ, ರಣದೀಪ್ ಸುರ್ಜೇವಾಲ ಕೂಡ ಸರ್ಕಾರ ಸಂಪತ್ತು ಕ್ರೋಡೀಕರಣ ಯೋಜನೆಯನ್ನು ಖಂಡಿಸಿದ್ದಾರೆ.
ದೇಶದಲ್ಲಿ ಕಳೆದ 70 ವರ್ಷಗಳಲ್ಲಿ ಏನೂ ಆಗಲಿಲ್ಲ ಎಂದು ಬಿಜೆಪಿ ಹೇಳುತ್ತಾ ಬಂದಿದೆ. ಆದರೆ, ಈಗ ಅದೇ 70 ವರ್ಷಗಳಲ್ಲಿ ನಿರ್ಮಿಸಲಾದ ಆಸ್ತಿ ಪಾಸ್ತಿಗಳನ್ನು ಮಾರಾಟ ಮಾಡುತ್ತಿದೆ.
– ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ