ಮಲ್ಪೆ: ದೇಶದ ಪಶ್ಚಿಮ ಮತ್ತು ಪೂರ್ವ ಕರಾವಳಿಯಲ್ಲಿನ ಆಯಿಲ್ ಸಾರ್ಡಿನ್ ಒಂದು ಪ್ರಮುಖವಾದ ಮೀನುಗಾರಿಕಾ ಸಂಪನ್ಮೂಲವಾಗಿದ್ದು, ಅದರ ಸಂರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಅದಕ್ಕಾಗಿ ನಿಗದಿತ ಗಾತ್ರದ ಆಯಿಲ್ ಸಾರ್ಡಿನ್ ಅನ್ನು ಮಾತ್ರ ಹಿಡಿಯಬೇಕೆಂಬ ಕಾನೂನನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.
ಜು. 27ರಂದು ಕೊಚ್ಚಿಯಲ್ಲಿ ನಡೆದ ಭಾರತೀಯ ಫಿಶ್‌ಮೀಲ್ ಮತ್ತು ಫಿಶ್ ಆಯಿಲ್ ರಪು¤ ದಾರರ ಸಂಘದ ವತಿಯಿಂದ ಇಂಡಿಯನ್ ಆಯಿಲ್ ಸಾರ್ಡಿನ್ ಉತ್ಪಾದನೆಗೆ ಬಳಸುವವರ ಪಾಲು ದಾರರ ಸಮಾಲೋಚನ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳ ಲಾಗಿದೆ. ಆರ್ಥಿಕ ಸುಧಾರಣೆಯ ಗುರಿಯ ಜತೆಗೆ ಮೀನುಗಾರಿಕಾ ವಲಯದ ಸ್ಥಿರತೆಗೆ ಕ್ರಮಬದ್ಧ ಮೀನುಗಾರಿಕಾ ನಿಯಮ ವನ್ನು ಅನುಷ್ಠಾನಗೊಳಿಸುವ ಕುರಿತೂ ತೀರ್ಮಾನಿಸಲಾಯಿತು.
ಐಎಫ್ಎಫ್ ಇಎ ಸಂಸ್ಥೆಯ ಅಧಿಕಾರಿ ಡಾ| ಮೋಹನ್ ಜೋಸೆಫ್ ಮೊಡಾಯಿಲ್ ಅವರು ಮಾತನಾಡಿ, ಮೀನುಗಾರಿಕಾ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸುವಂತಾಗ ಬೇಕು. ಈ ನಿಟ್ಟಿನಲ್ಲಿ ಎಲ್ಲ ಫಿಶ್‌ಮೀಲ್ ಘಟಕಗಳು ಕನಿಷ್ಠ ನಿಯಮಿತ ಗಾತ್ರಕ್ಕಿಂತ ಕಡಿಮೆ ಇರುವ ಆಯಿಲ್ ಸಾರ್ಡಿನನ್ನು ಬಳಸಕೂಡದು. ನಿಗದಿತಗಾತ್ರಕ್ಕಿಂತ ಕಡಿಮೆ ಗಾತ್ರದ ಮೀನನ್ನು ಹಿಡಿದರೆ ಸರಕಾರ ದಂಡ ವಿಧಿಸುವ ಮೂಲಕ ಅದನ್ನು ತಡೆಯುವಂತಾಗ ಬೇಕು ಎಂದರು.
ಫಿಶ್‌ಮೀಲ್ ರಪು¤ದಾರರ ಸಂಘದ ಕಾರ್ಯದರ್ಶಿ ಮಹೇಶ್‌ರಾಜ್ ಮಲ್ಪೆ, ಮೀನುಗಾರಿಕಾ ಸಂಸ್ಥೆಗಳ ಅಧಿಕಾರಿ ಗಳಾದ ಡಾ| ಪ್ರತಿಭಾ ರೋಹಿತ್, ರೋಬ್ ಬ್ರೈಂಟೆಜ್, ಲಿಯಾಸ್ ಸೈಟ್,ಸಿ.ಕೆ. ಮೂರ್ತಿ, ಶಮಿಲಾ ಮೊಂಟೆರಿಯೋ, ಶೌಕತ್ ಶೌರಿ ಮೊದಲಾದವರು ಮಾಹಿತಿ ನೀಡಿದರು.ಸಭೆಯಲ್ಲಿ ಸಿಎಂಎಫ್ಆರ್‌ಐ, ಎಂಪೆಡಾ, ಸಿಐಎಫ್ಟಿ, ಇಐಎ, ಮ್ಯಾಟ್ಸೆಫೆಡ್ ಸಂಸ್ಥೆಗಳ ಪ್ರತಿನಿಧಿ
ಗಳು, ವಿವಿಧ ರಾಜ್ಯದ ಫಿಶ್‌ಮೀಲ್ ಮತ್ತು ಫಿಶ್ ಆಯಿಲ್ ತಯಾರಿಕಾ ಘಟಕದ ಪ್ರತಿನಿಧಿಗಳು, ಮೀನುಗಾರಿಕಾ ಇಲಾಖೆಯ ನಿರ್ದೇ ಶಕರು, ಮೀನುಗಾರ ಮುಖಂಡರು ಪಾಲ್ಗೊಂಡಿದ್ದರು.ರಿಯಾಜ್ ಬಾವಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.