Advertisement

ಎಡಪದವು ವಿಶೇಷ ಗ್ರಾಮಸಭೆ

02:15 PM Nov 17, 2017 | |

ಎಡಪದವು: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಸರಕಾರದ ಸವಲತ್ತು ತೆಗದುಕೊಂಡು ಅದಕ್ಕೆ ಫಲಕ ಹಾಕಲು ಕೆಲವರಿಗೆ ಮುಜುಗರವಾಗುತ್ತಿದೆ ಎಂದು ಯೋಜನೆಯ ತಾಲೂಕು ಸಂಯೋಜಕಿ ಪವಿತ್ರಾ ಹೇಳಿದರು.

Advertisement

ಅವರು ಗುರುವಾರ ಎಡಪದವು ಗ್ರಾ.ಪಂ. ಕಚೇರಿಯಲ್ಲಿ ಎಡಪದವು ಗ್ರಾ.ಪಂ.ನ 2017-18ನೇ ಸಾಲಿನ ದ್ವಿತೀಯ ಹಂತದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನಾ ವಿಶೇಷ ಗ್ರಾಮ ಸಭೆಯಲ್ಲಿ ಯೋಜನೆಯ ಬಗ್ಗೆ ಮಾತನಾಡಿದರು.

ಯೋಜನೆಯಡಿ ಪೂರ್ಣಗೊಂಡ 30 ಕಾಮಗಾರಿಯಲ್ಲಿ ಕೇವಲ 4 ಕಡೆಗಳಲ್ಲಿ ಮಾತ್ರ ನಾಮಫಲಕ ಹಾಕಿದ್ದಾರೆ. ಕೆಲವೆಡೆ ಮನೆಯಲ್ಲಿಟ್ಟಿದ್ದಾರೆ ಎಂದು ಸಂಯೋಜಕಿ ಪವಿತ್ರಾ ತಿಳಿಸಿದರು.

ಗ್ರಾಮ ಪಂಚಾಯತ್‌ನಲ್ಲಿ 6,248 ಜನಸಂಖ್ಯೆ ಇದ್ದು, 279 ಸಕ್ರಿಯ ಉದ್ಯೋಗ ಚೀಟನ್ನು ಹೊಂದಿದ್ದಾರೆ. 279 ಕುಟುಂಬ
ನೋಂದಣಿಯಾಗಿದ್ದು, 31 ಕಾಮಗಾರಿ ನಡೆದಿದೆ. ಇದರಲ್ಲಿ 30 ವೈಯಕ್ತಿಕ 1 ಸಾರ್ವಜನಿಕ ಕಾಮಗಾರಿಯಾಗಿದೆ. 7 ಕಾಮಗಾರಿಗಳು ಮುಕ್ತಾಯಗೊಂಡಿದೆ. 30 ಕಾಮಗಾರಿಗಳು ಉತ್ತಮ ರೀತಿಯಲ್ಲಿ ಕಡತ ನಿರ್ವಹಣೆ ಮಾಡಿವೆ. ಕ್ರಿಯಾ ಯೋಜನೆ ತಯಾರಿಗೆ ತಾಲೂಕಿನ ಅನುಮೋದನೆ ಆಗಿಲ್ಲ. ಬ್ರಿಂಡೇಲು ಎಂಬಲ್ಲಿ ದನಹಟ್ಟಿ ರಚನೆ ಸಮರ್ಪಕವಾಗಿಲ್ಲ ಎಂದರು.

ಎಂಜಿನಿಯರ್‌ ಜಯಪ್ರಸಾದ್‌ ಮಾತನಾಡಿ, ಇಂಗುಗುಂಡಿ, ಎರೆಹುಳ ಗೊಬ್ಬರ ತಯಾರಿ, ಹಟ್ಟಿ ರಚನೆ, ಸರಕಾರಿ ಬಾವಿ, ಕಾಂಕ್ರಿಟ್‌ ರಸ್ತೆ, ಕಾಂಪೌಂಡ್‌, ಅಂಗನವಾಡಿ, ಕಿಂಡಿ ಅಣೆಕಟ್ಟುಗಳನ್ನು ನರೇಗಾ ಯೋಜನೆಯಡಿ ಮಾಡಬಹುದು ಎಂದು ಮಾಹಿತಿ ನೀಡಿದರು.

Advertisement

ಕೃಷಿ ಹೊಂಡ ಮಹತ್ವ ನೀಡಿ
ಕೃಷಿ ಹೊಂಡಕ್ಕೆ ರೈತರು ಹೆಚ್ಚು ಮಹತ್ವ ನೀಡಬೇಕು ಎಂದು ಕೃಷಿ ಸಹಾಯಕ ಅಧಿಕಾರಿ ಎಸ್‌.ಕುಲಕರ್ಣಿ ಮಾಹಿತಿ ನೀಡಿದರು. ನೋಡಲ್‌ ಅಧಿಕಾರಿಯಾಗಿ ಆಗಮಿಸಿದ್ದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್‌ ಮಾತನಾಡಿ, ಸರಕಾರಿ ಯೋಜನೆಗಳನ್ನು ಸದುಪಯೋಗಿಸಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷೆ ಮಾಲತಿ, ಈ ಯೋಜನೆಯಡಿಯಲ್ಲಿ ಸಾರ್ವಜನಿಕ ಕಾಮಗಾರಿಯ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕು ಇದರಿಂದ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದರು. ಗ್ರಾಮ ಸಂಪನ್ಮೂಲ ವ್ಯಕ್ತಿ ಉಷಾರಾಣಿ, ಗ್ರಾಮ ಪಂಚಾಯತ್‌ ಸದಸ್ಯ ಸುಕುಮಾರ್‌, ಎಪಿಎಂಸಿ ಸದಸ್ಯ ರುಕ್ಮಯ ನಾಯ್ಕ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್‌ ಆಭಿವೃದ್ಧಿ ಅಧಿಕಾರಿ ಭೋಗ ಮಲ್ಲಣ್ಣ ಸ್ವಾಗತಿಸಿದರು. ಗ್ರಾಮ ಸಂಪನ್ಮೂಲ ವ್ಯಕ್ತಿ ಸುನೀತಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next