Advertisement

ಧ್ವಜಸ್ತಂಭವೇ ಕರವೇ ಅಧ್ಯಕ್ಷರ ಬದಲಾವಣೆಗೆ ಕಾರಣವಾಯ್ತ; ಆಕ್ರೋಶ

09:07 PM Oct 15, 2022 | Team Udayavani |

ಕೊರಟಗೆರೆ: ತುಮಕೂರು ಜಿಲ್ಲಾಧ್ಯಕ್ಷ ರಾಜಕೀಯ ಪ್ರೇರಿತವಾಗಿ ಕೊರಟಗೆರೆ ಕರವೇ ಅಧ್ಯಕ್ಷರ ದಿಢೀರ್ ಬದಲಾವಣೆ ಮಾಡಿದ್ದಾರೆ. ಆದೇಶವನ್ನು ಹಿಂದಕ್ಕೆ ಪಡೆಯದಿದ್ದರೇ ಕೊರಟಗೆರೆಯ ಸಾವಿರಾರು ಕರವೇ ಕಾರ್ಯಕರ್ತರು ಸಾಮೂಹಿಕ ರಾಜಿನಾಮೆ ನೀಡಲು ಸಿದ್ದರಿದ್ದೇವೆ ಎಂದು ಕೊರಟಗೆರೆ ಘಟಕದ ಕರವೇ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕಲೀಂವುಲ್ಲಾ ಎಚ್ಚರಿಕೆ ನೀಡಿದ್ದಾರೆ.

Advertisement

ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣ ಗೌಡರ ಬಣ)ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ,ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ತುಮಕೂರು ನಗರದಲ್ಲಿ ಕುಳಿತು ಕೊರಟಗೆರೆಯ ವಿಚಾರದಲ್ಲಿ ಹಿಟ್ಲರ್ ಆದೇಶ ಮಾಡಿದ್ದಾರೆ. ಕೊರಟಗೆರೆಯ ಕರವೇ ಘಟಕದ ಗಮನಕ್ಕೆ ಬರದೇ, ಸಂಘಟನೆಯ ನಿಬಂಧನೆಯ ಗಾಳಿಗೆ ತೂರಿ ರಾಜಕೀಯ ಮತ್ತು ವೈಯಕ್ತಿಕ ದ್ವೇಷದಿಂದ ಅಧ್ಯಕ್ಷರ ಬದಲಾವಣೆ ಮಾಡಿದ್ದಾರೆ. ಸಂಘಟನೆಯಲ್ಲಿ ಸಕ್ರಿಯ ಆಗಿರುವ ವ್ಯಕ್ತಿಗೆ ಅವಕಾಶ ನೀಡಬೇಕಿದೆ. ಇಲ್ಲವಾದ್ರೇ ಎಲ್ಲಾ ಘಟಕದ ಕಾರ್ಯಕರ್ತರು ಸಾಮೂಹಿಕ ರಾಜಿನಾಮೇ ನೀಡುತ್ತೇವೆ ಎಂದರು.

ಕೊರಟಗೆರೆ ಘಟಕದ ಕರವೇ ಗೌರವಧ್ಯಕ್ಷ ಬಿ.ಹೆಚ್.ಪ್ರಸನ್ನಕುಮಾರ್ ಮಾತನಾಡಿ, ಗ್ರಾಮೀಣ ಕಾರ್ಯಕರ್ತರಿಗೆ ತಿಳಿಸದೇ ಕೊರಟಗೆರೆ ಕರವೇ ಅಧ್ಯಕ್ಷರ ಬದಲಾವಣೆ ರಾಜಕೀಯ ಪ್ರೇರಿತ. ಜಿಲ್ಲಾಧ್ಯಕ್ಷ ತುಮಕೂರು ನಗರದಲ್ಲಿ ಕುಳಿತು ಕರವೇಗೆ ಸಂಬಂಧವೇ ಇಲ್ಲದ ವ್ಯಕ್ತಿಗೆ ಅಧ್ಯಕ್ಷ ಮಾಡಿರುವುದೇ ನಮ್ಮೇಲ್ಲರ ದುರ್ದೈವ. ಕನ್ನಡದ ನೆಲ ಜಲ-ಬಾಷೆಯ ಪರವಾಗಿ ಹೋರಾಡುವ ನಟರಾಜ್‌ಗೆ ಜಿಲ್ಲಾಧ್ಯಕ್ಷನಿಂದ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಕೊರಟಗೆರೆ ಸಾಮಾಜಿಕ ಹೋರಾಟಗಾರ ಜೆಟ್ಟಿಅಗ್ರಹಾರ ನಾಗರಾಜು ಮಾತನಾಡಿ, ಕೊರಟಗೆರೆ ಕ್ಷೇತ್ರದ ಪ್ರತಿಹಳ್ಳಿಗೂ ಕನ್ನಡದ ಕಂಪನ್ನು ಹರಿಸಿದ ಕೀರ್ತಿ ಕರವೇ ನಟರಾಜ್‌ಗೆ ಸಲ್ಲಲಿದೆ. ಕನ್ನಡ ನಾಡುನುಡಿ-ನೆಲ ಜಲ-ಭಾಷೆಯ ಜೊತೆ ಕೊರಟಗೆರೆ ಅಭಿವೃದ್ದಿಗೆ ಪೂರಕವಾಗಿ ಯುವಜನತೆಯ ಜೊತೆಗೂಡಿ ನೂರಾರು ಹೋರಾಟ ನಡೆಸಿದ್ದಾರೆ. ತುಮಕೂರು ಜಿಲ್ಲಾಧ್ಯಕ್ಷ ಮಂಜುನಾಥಗೌಡನ ಏಕಪಕ್ಷಿಯ ಹಿಟ್ಲರ್ ರೀತಿಯ ತಿರ್ಮಾನದಿಂದ ಕರವೇ ಕಾರ್ಯಕರ್ತರಿಗೆ ನೋವಾಗಿದೆ. ರಾಜ್ಯಾಧ್ಯಕ್ಷ ನಾರಾಯಣಗೌಡ ತಕ್ಷಣ ಸಮಸ್ಯೆಯನ್ನು ಸರಿಪಡಿಸಬೇಕಿದೆ ಎಂದು ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಕರವೇ ಹೊಳವನಹಳ್ಳಿ ಅಧ್ಯಕ್ಷರಾದ ಮಹೇಶ್, ಸಿ.ಎನ್.ದುರ್ಗ ದಿನೇಶ್, ತುಂಬಾಡಿ ಕೋದಂಡರಾಮು, ಬುಕ್ಕಾಪಟ್ಟಣ ಸುನಿಲ್, ಮುಖಂಡರಾದ ರಮೇಶ್, ಶ್ರೀನಿವಾಸು, ವಿಜಯ್, ಪ್ರೇಮಕುಮಾರ್, ಮಂಜುನಾಥ, ಗಿರೀಶ್, ಲಕ್ಷ್ಮೀಕಾಂತ, ರಕ್ಷಿತ್‌ಗೌಡ್ರು, ರಾಮಮೂರ್ತಿ, ಮಲ್ಲೇಶ್, ಓಬಳರಾಜು ಸೇರಿದಂತೆ ಇತರರು ಇದ್ದರು.

Advertisement

ಅಧ್ಯಕ್ಷ ಸ್ಥಾನಕ್ಕೆ ಧ್ವಜಸ್ತಂಭವೇ ಕಂಟಕವಾಯ್ತ

ಸರಕಾರಿ ಬಸ್ ನಿಲ್ದಾಣದ ಸಮೀಪದ ಮುಖ್ಯರಸ್ತೆಯಲ್ಲಿ ಕಳೆದ ೧೪ತಿಂಗಳ ಹಿಂದೆಯೇ ೫೬ಅಡಿ ಎತ್ತರದ ಕನ್ನಡಧ್ವಜ ಕಂಬ ನಿರ್ಮಾಣವಾಗಿದೆ. ಧ್ವಜಕಂಬದ ವಿಚಾರದಲ್ಲಿ ಸರಕಾರಿ ಅಧಿಕಾರಿವರ್ಗ ಮತ್ತು ಕರವೇ ಕಾರ್ಯಕರ್ತರ ನಡುವೆ ತಿಕ್ಕಾಟ ನಡೆದಿದೆ. ಇದರ ನಡುವೆಯೇ ರಾಜಕೀಯ ಪ್ರೇರಿತ ಮತ್ತು ವೈಯಕ್ತಿಕ ದ್ವೇಷದಿಂದ ತುಮಕೂರು ಜಿಲ್ಲಾಧ್ಯಕ್ಷರು ಕೊರಟಗೆರೆ ಅಧ್ಯಕ್ಷರ ಬದಲಾವಣೆ ಮಾಡಿದ್ದಾರೆ ಎಂದು ಕರವೇ ಪ್ರಧಾನ ಕಾರ್ಯದರ್ಶಿ ಕಲೀಂವುಲ್ಲಾ ಆರೋಪ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next