Advertisement
ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಒತ್ತುನೀಡಿ ಸ್ಥಳೀಯರ ಮನವಿ ಮೇರೆಗೆ ಕಳೆದ 10 ವರ್ಷದ ಹಿಂದೆ ತಾಲೂಕಿನ ರತ್ನಪುರಿ ಪ.ಪೂ ಕಾಲೇಜಿಗೆ ಕಲಾ ವಿಭಾಗ, ನಾಲ್ಕು ವರ್ಷಗಳ ನಂತರ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ವಿಜ್ಞಾನ ವಿಭಾಗ ತೆರೆಯಲಾಗಿತ್ತು.
Related Articles
Advertisement
ಕಾಯಂಮಾತಿಯೇ ಆಗಿಲ್ಲ ಆಗಲೇ ನಿಯೋಜನೆ ಭಾಗ್ಯ: ಈ ಇಬ್ಬರು ಉಪನ್ಯಾಸಕಿಯರು ಕಳೆದ ನಾಲ್ಕುವರ್ಷಗಳ ಹಿಂದಷ್ಟೆ ಸೇವೆಗೆ ಸೇರಿದ್ದು, ಹುದ್ದೆಯೇ ಕಾಯಂ ಆಗಿಲ್ಲವಾದರೂ ಪ್ರತಿ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆ ಪ್ರಭಾವ ಬೀರಿ ತಮಗಿಷ್ಟವಾದ ಸ್ಥಳಕ್ಕೆ ನಿಯೋಜನೆ ಮೇಲೆ ತೆರಳುತ್ತಿದ್ದಾರೆ. ಮತ್ತೆ ಮಾರ್ಚ್‌ನಲ್ಲಿ ಕಾಲೇಜಿಗೆ ಬಂದು ವರದಿ ಮಾಡಿಕೊಳ್ಳುತ್ತಿದ್ದು, ಈ ಕಾಲೇಜಿನಿಂದ ಸಂಬಳ, ಸವಲತ್ತುಗಳನ್ನು ಪಡೆದು ಬೇರೆಡೆ ಕೆಲಸ ಮಾಡುವುದಾದರೂ ಏಕೆ ಅಲ್ಲಿಗೆ ವರ್ಗಮಾಡಿಸಿಕೊಂಡು ಹೋಗಲಿ, ನಮ್ಮ ಮಕ್ಕಳನ್ನು ಬೇರೆಡೆಯಾದರೂ ಓದಿಸುತ್ತೇವೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ನಿಯೋಜನೆಗೆ ನಿಯಮ: ನೇಮಕಗೊಂಡಿರುವ ಶಾಲಾ-ಕಾಲೇಜಿನಿಂದ 18 ಕಿ.ಮೀದೂರದ ಕಾಲೇಜಿಗೆ ಮಾತ್ರ ನಿಯೋಜನೆ ಮಾಡಬೇಕು ಹಾಗೂ ವಾರದಲ್ಲಿ ಮೂರುದಿನ ಮರಳಿ ಕಾಲೇಜಿಗೆ ಬಂದು ಪಾಠ ಮಾಡಬೇಕೆಂಬ ನಿಯಮವಿದೆ ಆದರಿಲ್ಲಿ ರಾಜಕೀಯ ಪ್ರಭಾವಬೀರಿ 400 ಕಿ.ಮೀ ದೂರದ ಶ್ರೀನಿವಾಸಪುರ ತಾಲೂಕಿಗೆ ನಿಯೋಜನೆಗೊಳಿಸಿರುವುದು ಇಲಾಖೆಯಲ್ಲೇ ಚರ್ಚಾಗ್ರಾಸವಾಗಿದೆ. ಇದೀಗ ಈ ಕಾಲೇಜಿಗೆ ಸೇರುವುದೋ ಬೇಡವೋ ಎಂಬ ಜಿಜ್ಞಾಸೆ ವಿದ್ಯಾರ್ಥಿಗಳದ್ದಾಗಿದೆ.
ನಗರದಲ್ಲೂ ಗಣಿತ ಉಪನ್ಯಾಸಕರಿಲ್ಲ: ಹುಣಸೂರು ಬಾಲಕಿಯರ ಕಾಲೇಜಿನಲ್ಲಿದ್ದ ಏಕೈಕ ಗಣಿತ ಉಪನ್ಯಾಸಕ ಮಂಜೇಗೌಡ ಸಹ ವರ್ಗಾವಣೆ ಕೋರಿದ್ದರು. ಇದೀಗ ಕಾಲೇಜು ಶಿಕ್ಷಣ ಇಲಾಖೆ ಹುದ್ದೆ ಸಹಿತ ಮೈಸೂರಿನ ಮಹಾರಾಣಿ ಕಾಲೇಜಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಈಗಾಗಲೇ ಬಿಡುಗಡೆ ಹೊಂದಿ ಅವರು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು. ಇಲ್ಲಿನ ಕಾಲೇಜಿನಲ್ಲಿ ಗಣಿತ ವಿಷಯ ಉಪನ್ಯಾಸಕರು ಮತ್ತೆ ಆ ಹುದ್ದೆಯೊಂದಿಗೆ ಬರಬೇಕು ಅಲ್ಲಿಯವರೆಗೆ ಇಲ್ಲಿನ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
ಪ್ರತಿಭಟನೆ: ಕಾಲೇಜು ಆವರಣದಲ್ಲಿ ಜಮಾವಣೆಗೊಂಡಿದ್ದ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ಹಾದಿ ಹಿಡಿಯುತ್ತಿರುವುದನ್ನು ಶಾಸಕ ಮಂಜುನಾಥ್ ಗಮನಕ್ಕೆ ತಂದ ವೇಳೆ ತಾವು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಶಿಖಾ ಅವರ ಗಮನಕ್ಕೆ ವಿಷಯ ತಂದು ಉನ್ಯಾಸಕಿಯರ ನಿಯೋಜನೆ ರದ್ದುಗೊಳಿಸುವ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಟ್ಟಿದ್ದಾರೆ.
ಶಿಕ್ಷಣ ಸಚಿವರ ತವರಲ್ಲೇ ಈ ಸ್ಥಿತಿ?: ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ತನ್ವೀರ್ ಸೇs…, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪರ ತವರು ಜಿಲ್ಲೆಯಲ್ಲೇ ಈ ಪರಿಸ್ಥಿತಿಯಾದರೆ ಉಳಿದೆಡೆಗಳಲ್ಲಿ ಇನ್ಯಾವ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿ ಇದ್ದರೂ ಮತ್ತಷ್ಟು ಶಾಲಾ-ಕಾಲೇಜು ತೆರೆಯಲು ಹೊರಟಿರುವ ಶಿಕ್ಷಣ ಇಲಾಖೆ ಕಾಲೇಜುಗಳನ್ನು ತೆರೆಯುವ ಮೊದಲು ಸಮರ್ಪಕ ಮೂಲಭೂತ ಸೌಲಭ್ಯ ಕಲ್ಪಿಸಿ ನಂತರವೇ ಕಾಲೇಜುಗಳನ್ನು ತೆರೆಯುವಂತಾಗಲಿ ಎಂಬುದು ಪೋಷಕರ ಆಶಯವಾಗಿದೆ.
ಕಾಯಂ ಉಪನ್ಯಾಸಕರ ನೇಮಕವಾಗುವವರೆಗೆ ಕಾಲೇಜಿನ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಬೇರೆ ಕಾಲೇಜಿನ ಉಪನ್ಯಾಸಕರನ್ನು ವಾರಕ್ಕೆ ಮೂರುದಿನ ನಿಯೋಜನೆ ಮಾಡಲು ಕೋರಲಾಗುವುದು ಅಥವಾ ಸಿಡಿಸಿ ಸಮಿತಿ ವತಿಯಿಂದ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುವುದು.-ಚೆಲುವಯ್ಯ, ಪ್ರಾಚಾರ್ಯ ಬಾಲಕಿಯರ ಪಪೂ ಕಾಲೇಜು * ಸಂಪತ್‌ಕುಮಾರ್