Advertisement
ಅವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ತಾ| ಘಟಕ ಮತ್ತು ಜ್ಞಾನಗಂಗಾ ಪುಸ್ತಕ ಮಳಿಗೆ ಇವರ ಆಶ್ರಯದಲ್ಲಿ ನಗರದ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸಾಹಿತ್ಯ ಸೌರಭ-ಪುಸ್ತಕ ಹಬ್ಬದಲ್ಲಿ ಸಂತ ಫಿಲೋಮಿನಾ ಕಾಲೇಜಿನ ವಜ್ರ ಮಹೋತ್ಸವದ ಅಂಗವಾಗಿ ಕಾಲೇಜಿನ ಕನ್ನಡ ಸಂಘವು ಆಯೋಜಿಸಿದ್ದ ‘ಉಗ್ರಾಣ ಮಂಗೇಶ ರಾವ್ ನೆನಪು’ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಆರ್ಥಿಕ ಅನನುಕೂಲತೆಯಿಂದ ಪ್ರೌಢಶಾಲೆ ಹಂತದ ತನಕ ಓದಿದ್ದರೂ, ಅವರ ಜ್ಞಾನಸಂಪತ್ತು ಎಲ್ಲ ಪದವಿಗಳನ್ನು ಮೀರಿದ್ದು. ವಿಶ್ವ ವಿದ್ಯಾನಿಲಯದ ಉಪನ್ಯಾಸಕರು ಕೂಡ ಕನ್ನಡ ಪದಗಳ ಬಗ್ಗೆ ಅನುಮಾನಗಳಿದ್ದಲ್ಲಿ, ಉಗ್ರಾಣ ಅವರನ್ನು ಸಂಪರ್ಕಿಸುತ್ತಿದ್ದರು ಎಂದು ಅವರು ಉಗ್ರಾಣರ ಪಾಂಡಿತ್ಯವನ್ನು ಉಲ್ಲೇಖೀಸಿದರು. ಅಧ್ಯಕ್ಷತೆ ವಹಿಸಿದ ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾದ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ಸಮಾಜದಲ್ಲಿ ಪದನಿಮಿತ್ತವಾಗಿ ದೊರಕುವ ಗೌರವಕ್ಕಿಂತ ಸ್ವಯಂ ಆರ್ಜಿತ ಪ್ರತಿಭೆಯೇ ಶ್ರೇಷ್ಠವಾದುದು ಎಂದರು.
Related Articles
Advertisement
ಸುಬ್ರಹ್ಮಣ್ಯ ಶಾಸ್ತ್ರೀ ಪ್ರಾರ್ಥಿಸಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ| ವಿಜಯ ಕುಮಾರ ಮೊಳೆಯಾರ ಸ್ವಾಗತಿಸಿ ದರು. ತಾ| ಕಸಾಪ ಘಟಕದ ಗೌರವ ಕಾರ್ಯದರ್ಶಿ ಡಾ| ಎಚ್.ಜಿ. ಶ್ರೀಧರ್ ಅವರು ವಂದಿಸಿದರು. ಉಪನ್ಯಾಸಕ ಡಾ| ಬಸ್ತ್ಯಾಂ ಪಾಯಸ್ ಕಾರ್ಯಕ್ರಮನಿರೂಪಿಸಿದರು. ಬರೆಹಗಳು ಸದ್ಬಳಕೆಯಾಗಲಿ
ಮೌಲ್ಯಯುತ ಸಂಗತಿ ಹೊತ್ತಿರುತ್ತಿದ್ದ ಪಠ್ಯ ಪುಸ್ತಕಗಳು ಈಗ, ಜಾತಿ ಸಿದ್ಧಾಂತಗಳ ಅಡಿಯಲ್ಲಿ ನಲುಗುತ್ತಿರುವುದು ವಿಷಾದದ ಸಂಗತಿ. ವಿದ್ಯಾರ್ಥಿಗಳ ಜ್ಞಾನಕ್ಕೆ ಪೂರಕವಾಗಿ ಉಗ್ರಾಣ ಮಂಗೇಶ ರಾವ್ ಅವರ ಚಿಂತನೆ ಗಳು, ಬರೆಹಗಳು ಸದ್ಬಳಕೆಯಾಗಬೇಕು ಎಂದು ಡಾ|ಸುಬ್ರಹ್ಮಣ್ಯ ಕೆ. ಹೇಳಿದರು.