Advertisement

ಮಕ್ಕಳನ್ನು ಕಳ್ಳರನ್ನಾಗಿಸಲು ಗುತ್ತಿಗೆ!

03:45 AM Jul 05, 2017 | Harsha Rao |

ನವದೆಹಲಿ: ಮಕ್ಕಳನ್ನು ಕಳ್ಳತನದ ದಂಧೆಗೆ ದೂಡಲು ಕ್ರಿಮಿನಲ್‌ ಗ್ಯಾಂಗ್‌ಗಳ ಜತೆ ಹೆತ್ತವರೇ ವಾರ್ಷಿಕ ಒಪ್ಪಂದ ಮಾಡಿಕೊಳ್ಳುತ್ತಿದ್ದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.

Advertisement

ರಾಜಧಾನಿ ದೆಹಲಿಯ ಪ್ರತಿಷ್ಠಿತ ವಿವಾಹವೊಂದರಲ್ಲಿ ದೊಡ್ಡ ಮಟ್ಟದಲ್ಲಿ ಕಳವು ನಡೆದಿತ್ತು. ಈ ಪ್ರಕರಣ ಭೇದಿಸಿದ ದೆಹಲಿ ಪೊಲೀಸರು, ರಾಕ (32) ಎಂಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದರು. ಈತನ ವಿಚಾರಣೆ ನಡೆಸಿದಾಗ ದೆಹಲಿ ಪೊಲೀಸರು ಅಕ್ಷರಶಃ ದಂಗಾದರು. ಕಾರಣ ಈತ ವಿವಾಹ ಸಮಾರಂಭಗಳಲ್ಲಿ ಕಳವು ಮಾಡಲು ಮಕ್ಕಳನ್ನು ಬಳಸುತ್ತಿದ್ದ. ಹಾಗೇ ಈ ಮಕ್ಕಳನ್ನು ಮಧ್ಯಪ್ರದೇಶದ 3 ಗ್ರಾಮಗಳಿಂದ ಗುತ್ತಿಗೆ ಆಧಾರದ ಮೇಲೆ ಕರೆತರುತ್ತಿದ್ದ!

ಮಧ್ಯಪ್ರದೇಶದ ರಾಜ್‌ಗಡ ಜಿಲ್ಲೆಯಲ್ಲಿ ಗುಲ್‌ಖೇರಿ, ಸುಲ್‌ಖೇರಿ ಮತ್ತು ಕಾದಿಯಾ ಎಂಬ ಗ್ರಾಮಗಳಿವೆ. ಇಲ್ಲಿನ 9ರಿಂದ 15 ವರ್ಷದೊಳಗಿನ ಮಕ್ಕಳನ್ನು “ಬ್ಯಾಂಡ್‌ ಬಾಜಾ ಬಾರಾತ್‌’ ಎಂಬ ಕಳ್ಳರ ಗ್ಯಾಂಗ್‌ಗೆ ಒಪ್ಪಿಸಿ, ಒಪ್ಪಂದ ಮಾಡಿಕೊಂಡು ವರ್ಷಕ್ಕೆ ಇಂತಿಷ್ಟು ಹಣ ಪಡೆಯುವುದು ಇಲ್ಲಿನ ನಿವಾಸಿಗಳ ದಂಧೆ! ಗ್ರಾಮಗಳಿಂದ ಮಕ್ಕಳನ್ನು ಕರೆದೊಯ್ಯುವ ಕಳ್ಳರ ಗುಂಪು, ಅವರಿಗೆ ಬೆಲೆ ಬಾಳುವ ವಸ್ತುಗಳನ್ನು ಕದಿಯುವುದು ಹೇಗೆ ಎಂಬ ಬಗ್ಗೆ ವಿಶೇಷ ತರಬೇತಿ ನೀಡುತ್ತಿತ್ತು. ನಂತರ 12ರಿಂದ 15 ಮಕ್ಕಳ ಗುಂಪು ರಚಿಸಿ ದೆಹಲಿಯಲ್ಲಿ ನಡೆಯುವ ಅದ್ಧೂರಿ ವಿವಾಹಗಳಿಗೆ ಕಳುಹಿಸಿ ಅವರ ಮೂಲಕ ಕಳವು ಮಾಡಿಸಲಾಗುತ್ತಿತ್ತು. ಮೂರೂ ಗ್ರಾಮಗಳ ಜನರಿಗೆ ಈ “ಕಾಂಟ್ರಾಕ್ಟ್ ಕಳವು’ ಜೀವನಾಧಾರವಾಗಿದ್ದು, ಗ್ರಾಮಗಳ ಮುಖ್ಯಸ್ಥರೇ ಗ್ಯಾಂಗ್‌ ಜತೆ ಒಪ್ಪಂದ ಮಾಡಿಕೊಂಡು ಮಕ್ಕಳನ್ನು ಕಳಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next