Advertisement
ಬಿಎಸ್ಸಿ ಮತ್ತು ಬಿಎ ಸೈಕಾಲಜಿ ಕೋರ್ಸ್‌ಗಳಲ್ಲಿ ಪಠ್ಯವು ಒಂದೇ ಆಗಿರುವುದರಿಂದ ಅಂಡರ್ ಗ್ರಾಜುವೇಟ್ ಹಂತದಲ್ಲಿ ಎರಡೂ ವಿಭಾಗದ ವಿದ್ಯಾರ್ಥಿಗಳಿಗೆ ಸೈಕಾಲಜಿ ವಿಭಾಗದಲ್ಲಿ ಸಾಕಷ್ಟು ಜ್ಞಾನವನ್ನು ಈ ಕೋರ್ಸ್ ಒದಗಿಸಲು ನೆರವಾಗುತ್ತದೆ. ಹಾಗೆಯೇ ಬಹುತೇಕ ವಿದ್ಯಾರ್ಥಿಗಳಿಗೆ ಬಿಎ ಇನ್ ಸೈಕಾಲಜಿ ಮತ್ತು ಬ್ಯಾಚುಲರ್ ಆಫ್ ಸೈನ್ಸ್ ಇನ್ ಟೆಕ್ನಾಲಜಿ ಬಗ್ಗೆ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತದೆ.
Related Articles
ಬಿಎ ಅಥವಾ ಬಿಎಸ್ಸಿ ಇನ್ ಸೈಕಾಲಜಿ ಮಾಡಿದವರಿಗೆ ಸಾಕಷ್ಟು ಉದ್ಯೋಗವಾಕಾಶಗಳು ಸಿಗುತ್ತದೆ, ಅದರಲ್ಲೂ ಮುಖ್ಯವಾಗಿ ಖಾಸಗಿ ಆಸ್ಪತ್ರೆ, ಸರಕಾರಿ ಆಸ್ಪತ್ರೆ ಮತ್ತು ಇನ್ನಿತರ ಸಂಸ್ಥೆಗಳಲ್ಲಿ ಇವರ ಅವಶ್ಯಕತೆ ಹೆಚ್ಚಿದೆ. ಪ್ರಮಾಣಿಕೃತ ಸೈಕಲಾಜಿಸ್ಟ್ ಅಥವಾ ಸೈಕಾಲಾಜಿಕಲ್ ಕೌನ್ಸೆಲರ್ ಆಗಿ ಕೆಲಸ ಮಾಡಬೇಕಾದರೆ ಈ ವಿಭಾಗದಲ್ಲಿ ಮಾಸ್ಟರ್ಸ್ ಡಿಗ್ರಿ ಅವಶ್ಯಕವಾಗಿದೆ. ಇನ್ನೂ ಸೈಕಾಲಜಿಯಲ್ಲಿ ಹಲವಾರು ವಿಭಾಗಗಳಿವೆ. ಅವುಗಳಲ್ಲಿ ಕಾಗ್ನಿಟಿವ್ ಸೈಕಾಲಜಿ, ಡೆವಲಪ್ಮೆಂಟಲ್ ಸೈಕಾಲಜಿ ಇತ್ಯಾದಿ. ಆದೂದರಿಂದ ಸೂಕ್ತ ಉದ್ಯೋಗಾವಕಾಶಕ್ಕೆ ಸ್ನಾತಕೋತ್ತರ ಹಂತದಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಪ್ರತಿ ಆಯ್ಕೆಯಲ್ಲಿಯೂ ಕೂಡ ಸ್ಪೆಶಲೈಸೇಶನ್ ಗೆ ಆದ್ಯತೆ ನಿಡುವುದರ ಕುರಿತು ಗಮನ ಹರಿಸಿದರೆ ಮುಂದಿನ ಉದ್ಯೋಗ ಭವಿಷ್ಯ ಉತ್ತಮವಾಗಿರುತ್ತದೆ.
Advertisement