Advertisement

ಕಲಬುರಗಿ:ಮಹನೀಯರ ಇತಿಹಾಸ ಅರಿಯಿರಿ

05:49 PM Apr 15, 2021 | Team Udayavani |

ಕಲಬುರಗಿ:ಸಂವಿಧಾನ ರಚಿಸುವ ಮೂಲಕ ಡಾ|ಅಂಬೇಡ್ಕರ್‌ ಹಾಗೂ ಆಹಾರ ಧಾನ್ಯ ಉತ್ಪಾದನೆಗೆ ಹೆಚ್ಚು ಒತ್ತು ನೀಡುವ ಮೂಲಕ ಡಾ|ಬಾಬು ಜಗಜೀವನರಾಂ ದೇಶಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಶರಣಬಸವ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವ ಡಾ| ಲಿಂಗರಾಜ ಶಾಸ್ತ್ರೀ ಹೇಳಿದರು.

Advertisement

ನಗರದ ಆರಾಧನಾ ಪಿಯು ಕಾಲೇಜಿನಲ್ಲಿ ಎಚ್‌. ಶಿವರಾಮೇಗೌಡರ ಬಣದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಬುಧವಾರ ಹಮ್ಮಿಕೊಂಡಿದ್ದ
“ವಿಚಾರ ಕ್ರಾಂತಿ ಸಪ್ತಾಹ’ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ದೇಶದ ನಿರ್ಮಾಣದಲ್ಲಿ ಹಲವಾರು ಮಹನೀಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಹೋರಾಟದ ಇತಿಹಾಸ ಅರಿತು ಮುನ್ನಡೆಯಬೇಕು. ಅಂದಾಗ ಮಾತ್ರ ನಾವು ಅವರಂತೆ ಇತಿಹಾಸ ಸೃಷ್ಟಿಸಲು
ಸಾಧ್ಯವಾಗುತ್ತದೆ ಎಂದರು.

ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಮಾತನಾಡಿ, ಎಲ್ಲರಿಗೂ ಸಮಾನತೆ, ಸಾಮಾಜಿಕ ನ್ಯಾಯ ದೊರೆಯಬೇಕು. ಆರ್ಥಿಕ ಸಮಾನತೆಯಿಂದ ಬದುಕಬೇಕು. ಜಾತಿ ವ್ಯವಸ್ಥೆ ಸಂಪೂರ್ಣ ನಾಶವಾಗಬೇಕು ಎನ್ನುವುದು ಅಂಬೇಡ್ಕರ್‌ ಗುರಿಯಾಗಿತ್ತು. ಆದರೆ, ರಾಜಕೀಯ ನಾಯಕರು ಮತದ ಆಸೆಗಾಗಿ ಅದನ್ನು ಇನ್ನೂ ಜೀವಂತವಾಗಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪತ್ರಕರ್ತ ಸುಭಾಷ ಬಣಗಾರ್‌ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ಎಲ್ಲ ಜನಾಂಗದವರನ್ನು ಸೇರಿಸಿ, ಅಶ್ಪ್ರಶ್ಯತೆ ವಿರುದ್ಧ ಹೋರಾಡಿದರು.
ಅವೆರಲ್ಲರೂ ಶರಣರಾದರು. ಅದೇ ರೀತಿ ಬಾಬೂಜಿ, ಅಂಬೇಡ್ಕರ್‌ ಅಶ್ಪ್ರಶ್ಯತೆ ವಿರುದ್ಧ ಹೋರಾಡಿ ಅವರೂ ಶರಣರಾಗಿದ್ದಾರೆ ಎಂದು ಅಭಿಪ್ರಾಯ
ವ್ಯಕ್ತಪಡಿಸಿದರು.ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಮಂಜುನಾಥ ನಾಲವಾರಕರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರಾಚಾರ್ಯ ಚೇತನಕುಮಾರ ಅಧ್ಯಕ್ಷತೆ ವಹಿಸಿದ್ದರು.ನಾಗರಾಜ ಸಾದಿ, ಆರತಿ, ಸುನೀಲ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next