Advertisement

ಆರೆಸ್ಸೆಸ್‌ ನೋಡಿ ಶಿಸ್ತು ಕಲಿಯಿರಿ ಎಂದ ಕಾಂಗ್ರೆಸ್‌ ನಾಯಕ

07:50 AM Aug 08, 2018 | Karthik A |

ಭೋಪಾಲ್‌: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಶಿಸ್ತು ನೋಡಿ ಕಲಿಯಿರಿ’. ಹೀಗೆಂದು ಹೇಳಿದ್ದು ಕಾಂಗ್ರೆಸ್‌ ನ ನಾಯಕ, ಮಧ್ಯಪ್ರದೇಶ ಉಸ್ತುವಾರಿ ದೀಪಕ್‌ ಬಬಾರಿಯಾ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕುರ್ಚಿಗಾಗಿ ನಡೆಸಿದ ವರ್ತನೆಯ ಬಗ್ಗೆ ಕಿಡಿ ಕಾರಿದ ಅವರು, ನಾಯಕತ್ವ, ಅದಕ್ಕೆ ಬೇಕಾದ ಶಿಸ್ತು ಬೆಳೆಸಿಕೊಳ್ಳುವುದನ್ನು RSS ನೋಡಿ ಕಲಿತುಕೊಳ್ಳಿ ಎಂದು ಹೇಳಿದ್ದಾರೆ. ಇದು ಸುದ್ದಿಯಾಗುತ್ತಲೇ, ಬಬಾರಿಯಾ, ತಮ್ಮಿಂದಾದ ಪ್ರಮಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಉದಾಹರಿಸಲಷ್ಟೇ RSS ಎಂದು ಹೇಳಿದ್ದೇನೆಯೇ ಹೊರತು, ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಈ ಹೇಳಿಕೆಗೆ ಮಹತ್ವವನ್ನೂ ಕೊಡಬೇಕಿಲ್ಲ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next