Advertisement

ಗಂಗಾವತಿ: ಆನೆಗೊಂದಿ ಬೆಟ್ಟದಲ್ಲಿ ಮತ್ತೆ ಪ್ರತ್ಯಕ್ಷವಾದ ಚಿರತೆ!

11:23 AM Oct 16, 2020 | keerthan |

ಗಂಗಾವತಿ: ತಾಲೂಕಿನ ಆನೆಗೊಂದಿ ಬೆಟ್ಟಪ್ರದೇಶದ ಗ್ರಾಮಗಳಲ್ಲಿ ಚಿರತೆ ಹಾಗೂ ಕರಡಿ ಹಾವಳಿ‌ ಮುಂದುವರಿದ್ದು ಗುರುವಾರ ಸಂಜೆ ಆನೆಗೊಂದಿ ತಳವಾರ ಘಟ್ಟ ಗುಡ್ಡದ ಗವಿಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಜನರಲ್ಲಿ ಭಯವುಂಟು ಮಾಡಿದೆ.

Advertisement

ಕಳೆದ ಒಂದು ವಾರದಿಂದ ಆನೆಗೊಂದಿ ಸಾಣಾಪೂರ ಮಲ್ಲಾಪೂರ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳ ಹತ್ತಿರ ಇರುವ ಬೆಟ್ಟ ಗುಡ್ಡ ಪ್ರದೇಶದಲ್ಲಿ ಚಿರತ ಮತ್ತು ಕರಡಿಗಳು ನಿತ್ಯವೂ ಪ್ರತ್ಯಕ್ಷವಾಗುತ್ತಿದ್ದು ಇದರಿಂದ ಜನರು ಗ್ರಾಮ ಬಿಟ್ಟು ಹೊರಗೆ ಬಾರದ ಸ್ಥಿತಿಯುಂಟಾಗಿದೆ. ಜಂಗ್ಲಿ ರಂಗಾಪೂರ ಗ್ರಾಮದ ಆಂಜನೇಯ ಸ್ವಾಮಿ ದೇಗುಲಕ್ಕೆ ಕರಡಿಗಳು ಆಗಮಿಸಿ ಬಾಗಿಲು ಮುರಿದು ಒಳಗಿದ್ದ ದೀಪದ ಎಣ್ಣೆ ಕುಡಿದು ಹೋಗಿವೆ. ಆದರೆ ಜನ ಜಾನುವಾರುಗಳಿಗೆ ತೊಂದರೆ ಕೊಟ್ಟಿಲ್ಲ. ಆನೆಗೊಂದಿ ತುಂಗಭದ್ರಾ ನದಿ ಹತ್ತಿರ ತಳವಾರ ಘಟ್ಟ ಬೆಟ್ಟದ ಗುಹೆಯಲ್ಲಿ ಚಿರತೆಯೊಂದು ಎರಡು ದಿನಗಳಿಂದ ವಾಸವಾಗಿದ್ದು ಅಗಾಗ ಗುಹೆಯಿಂದ ಹೊರಗೆ ಆಗಮಿಸಿ ಸಮೀಪದ ಕಲ್ಲು ಬಂಡೆಯ‌ ಮೇಲೆ ಮಲಗುತ್ತಿದೆ.

ತಳವಾರ ಘಟ್ಟ ಬೆಟ್ಟದ ಗುಹೆ ಹತ್ತಿರ ಬೋನ್ ಇಟ್ಟು ಚಿರತೆ ಸೆರೆ ಹಿಡಿಯುವಂತೆ ಜನರು ಒತ್ತಾಯಿಸಿದ್ದಾರೆ.

ವಾಲಿಕೀಲ್ಲಾ ಆದಿಶಕ್ತಿ ದೇಗುಲದ ಬಳಿ‌ ಗುರುವಾರ ಬೆಳಗಿನ ಜಾವ ಅರಣ್ಯ ಇಲಾಖೆಯ ಬೋನಿಗೆ 04 ವರ್ಷದ ಚಿರತೆ ಬಿದ್ದಿತ್ತು. ಈ ಮಧ್ಯೆ ತಳವಾರ ಘಟ್ಟ ಬೆಟ್ಟದಲ್ಲಿ ಚಿರತೆ ಕಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next