Advertisement
ಜಿಐಎಸ್‌ಎಟಿ-1 ರಾಕೆಟ್‌ನಲ್ಲಿದ್ದ ಕ್ರಯೋಜೆನಿಕ್ ಇಂಜಿನ್‌ನ ಮೇಲ್ಭಾಗದಲ್ಲಿರುವ ಕ್ರಿಟಿಕಲ್ ವಾಲ್Ìನಲ್ಲಿ ಬಿರುಕು ಕಾಣಿಸಿಕೊಂಡಿದ್ದೇ ಉಡಾವಣೆ ವೈಫಲ್ಯಕ್ಕೆ ಕಾರಣ ಎಂದು ಇಸ್ರೋ ರಚಿಸಿದ್ದ ವೈಫಲ್ಯ ವಿಶ್ಲೇಷಣಾ ಸಮಿತಿ (ಎಫ್ಎಸಿ) ತನ್ನ ವರದಿಯಲ್ಲಿ ಹೇಳಿದೆ.
ರಾಕೆಟ್‌ನಲ್ಲಿದ್ದ ಕ್ರಯೋಜೆನಿಕ್‌ನ ಅಪ್ಪರ್ ಸ್ಟೇಜ್ (ಸಿಯುಎಸ್) ಎಂಬುದು ರಾಕೆಟ್‌ನ ಮೇಲ್ಫಾಗದ ಕೋಶ. ರಾಕೆಟ್ ಭೂಮಿಯಿಂದ ಸಾಕಷ್ಟು ಎತ್ತರಕ್ಕೆ ಪ್ರಯಾಣ ಬೆಳೆಸಿದ ನಂತರ ರಾಕೆಟ್ಟನ್ನು ಮತ್ತಷ್ಟು ದೂರಕ್ಕೆ ಕೊಂಡೊಯ್ಯಲು ಸಿಯುಎಸ್‌ನಲ್ಲಿರುವ ದ್ರವೀಕೃತ ಜಲಜನಕ ಹಾಗೂ ದ್ರವೀಕೃತ ಆಮ್ಲಜನಕ ಟ್ಯಾಂಕ್‌ಗಳಿಂದ ಹೇರಳ ಪ್ರಮಾಣದಲ್ಲಿ ದಹಿಸುವ ಮೂಲಕ ರಾಕೆಟ್ ಮತ್ತಷ್ಟು ಮುಂದಕ್ಕೆ ಹೋಗುತ್ತದೆ. ಆದರೆ, ದ್ರವೀಕೃತ ಜಲಜನಕದ ಟ್ಯಾಂಕ್‌ನ ಮೇಲಿದ್ದ ಸಾಫ್ಟ್ ವಾಲ್ ನಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ದ್ರವೀಕೃತ ಜಲಜನಕವಿದ್ದ ಟ್ಯಾಂಕ್‌ನಲ್ಲಿ ಒತ್ತಡ ಕಡಿಮೆಯಾಗಿದೆ. ಇದರಿಂದಾಗಿ, ರಾಕೆಟ್ ಉಡಾವಣೆಗೊಂಡ ನಂತರ 297.3ನೇ ಸೆಕೆಂಡ್‌ನಲ್ಲಿ ರಾಕೆಟ್ ತನ್ನ ಪಥವನ್ನು ಬದಲಿಸಿತು ಎಂದು ವರದಿಯಲ್ಲಿ ಹೇಳಲಾಗಿದೆ.
Related Articles
2021ರ ಆ. 21ರ ಮುಂದಾನೆ 5:43ರ ಸುಮಾರಿಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ನಭಕ್ಕೆ ಚಿಮ್ಮಿದ ಜಿಎಸ್‌ಎಲ್‌ವಿ ಎಫ್-10 ರಾಕೆಟ್, ಉಡಾವಣೆಗೊಂಡ 307 ಸೆಕೆಂಡ್‌ಗಳ ತರುವಾಯ ತನ್ನ ಪಥವನ್ನು ಬದಲಿಸಿ ತನ್ನಲ್ಲಿದ್ದ ಜಿಎಸ್‌ಐಟಿ-1 ಭೂಪರಿವೀಕ್ಷಣಾ ಉಪಗ್ರಹದ ಸಮೇತ ಅಂಡಮಾನ್-ನಿಕೋಬಾರ್ ಸಮುದ್ರಕ್ಕೆ ಹೋಗಿ ಬಿದ್ದಿತ್ತು.
Advertisement