Advertisement

ಸಮಾಜದ ಶ್ರೇಯಸ್ಸಿಗೆ ಶ್ರಮಿಸಿದ ನಾಯಕ ಹೇರೂರ

05:09 PM Dec 04, 2017 | |

ಶಹಾಪುರ: ದಿ. ವಿಠ್ಠಲ್‌ ಹೇರೂರ ಕೋಲಿ ಕಬ್ಬಲಿಗ ಸಮಾಜದ ಏಳ್ಗೆಗಾಗಿ ಅವಿರತ ಶ್ರಮವಹಿಸಿದ್ದಾರೆ. ಅವರ ತತ್ವಾದರ್ಶದ ಮೇಲೆ ಸಮಾಜವನ್ನು ಸಂಘಟನಾತ್ಮಕವಾಗಿ ಬೆಳೆಸಬೇಕಿದೆ ಎಂದು ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಅಯ್ಯಣ್ಣ ಕನ್ಯಾಕೋಳೂರ ಹೇಳಿದರು.

Advertisement

ನಗರದ ಹಳಿಸಗರ ವಿಭಾಗದ ನಿಜಶರಣ ಅಂಬಿಗರ ಚೌಡಯ್ಯನವರ ಮಠದಲ್ಲಿ ನಡೆದ ದಿ. ವಿಠ್ಠಲ್‌ ಹೇರೂರ ಅವರ ನಾಲ್ಕನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹೇರೂರ ಅವರು ಶೈಕ್ಷಣಿಕ, ರಾಜಕೀಯ, ಸಾಮಾಜಿಕವಾಗಿ ಸಬಲರಾಗಬೇಕು ಎಂಬ ನಿಟ್ಟಿನಲ್ಲಿ ಹಗಲಿರುಳು ದುಡಿದ ಸಮಾಜದ ಚೇತನವಾಗಿದ್ದಾರೆ. ಅಷ್ಟೇ ಅಲ್ಲದೆ ಇತರೆ ದಲಿತ, ಶೋಷಿತ ವರ್ಗಗಳ ಏಳ್ಗೆಗೂ ಸಹ ಅವರು ಶ್ರಮಿಸಿದ್ದಾರೆ. ಅಂತಹ ಮಹಾನ್‌ ವ್ಯಕ್ತಿ ನಮ್ಮ ಸಮಾಜದ ಶಕ್ತಿ ಆಗಿದ್ದರು ಎಂದು ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಸಣ್ಣ ನಿಂಗಣ್ಣ ನಾಯ್ಕೋಡಿ ಮಾತನಾಡಿದರು. ಶಿಕ್ಷಕ ಮೌನೇಶ ಹೈಯ್ನಾಳಕರ, ಈ ಸಂದರ್ಭದಲ್ಲಿ ಭೀಮರಾಯ ಮಮದಾಪುರ, ರಾಮಣ್ಣ ನಾಯ್ಕೋಡಿ, ಮರೆಪ್ಪ ಚಂಡು, ರವೀಂದ್ರನಾಥ ನರಸನಾಯಕ, ಸಾಯಬಣ್ಣ ಪೂಜಾರಿ,
ರಾಮಾಂಜನೇಯ ಬೊನೇರ, ಯಲ್ಲಪ್ಪ ನಾಯ್ಕೋಡಿ, ಮಲ್ಲರಡ್ಡಿ ವಿಭೂತಿಹಳ್ಳಿ, ಮೌನೇಶ ಹೈಯ್ನಾಳಕರ, ಮಾನಯ್ಯ ಹಾದಿಮನಿ, ಗೋಪಾಲ ಸುರಪುರ, ರಮೇಶ ಇಟಗಿ, ನಾಗಪ್ಪ ತಹಶೀಲ್ದಾರ, ಈಶ್ವರಪ್ಪ ಮಿಲಿ, ಮಲ್ಲಪ್ಪ ಮಣಿಗಿರಿ, ಭೀಮರಾಯ ಹೆಡಿಗಿಮದ್ರಿ, ವೆಂಕಟೇಶ ಮೂಲಿಮನಿ ಇತರರು ಇದ್ದರು.

ಕಮಕನೂರ ವಿರುದ್ಧ ಆಕ್ರೋಶ ರವಿವಾರ ನಡೆದ ದಿ. ವಿಠಲ್‌ ಹೇರೂರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಿಂದ ಕಲಬುರಗಿ ತಿಪ್ಪಣಪ್ಪ ಕಮಕನೂರ ನೀಡಿದ ಹೇಳಿಕೆಗೆ ಖಂಡನೆ ವ್ಯಕ್ತವಾದ ಘಟನೆ ಜರುಗಿತು.
ಸಮಾಜದ ಹಿರಿಯ ಮಾಜಿ ಸಚಿವ, ಹಾಲಿ ಶಾಸಕ ಬಾಬುರಾವ್‌ ಚಿಂಚನಸೂರ ವಿರುದ್ಧ ಸಮಾಜದ ಮುಖಂಡ ತಿಪ್ಪಣಪ್ಪ ಕಮಕನೂರ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಸಭೆಯಲ್ಲಿ ಖಂಡಿಸುವ ಮೂಲಕ ಆಕ್ರೋಶ ವ್ಯಕ್ತವಾಯಿತು. ಮುಂದಿನ ದಿನಗಳಲ್ಲಿ ಜವಾಬ್ದಾರಿ ಅರಿತು ನಡೆದುಕೊಳ್ಳದಿದ್ದರೆ ತಿಪ್ಪಣ್ಣಪ್ಪ ಕಮಕನೂರು ವಿರುದ್ಧ ಇಡಿ ಸಮಾಜ ಸಿಡಿದೇಳಲಿದೆ ಎಂದು ಎಚ್ಚರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next