Advertisement

ಸೌಲಭ್ಯ ಕಲ್ಪಿಸಲು ಪ್ರಥಮ ಆದ್ಯತೆ

05:37 PM Feb 25, 2018 | Team Udayavani |

ಶಹಾಪುರ: ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಾಣದಿಂದ ಕನ್ಯಾಕೋಳೂರ ಗ್ರಾಮ ಸುತ್ತಲಿನ ಅಂದಾಜು 75 ಹೆಕ್ಟೇರ್‌ ಪ್ರದೇಶ ಜಮೀನಿಗೆ ನೀರಿನ ಸೌಲಭ್ಯ ದೊರೆಯಲಿದೆ ಎಂದು ಶಾಸಕ ಗುರು ಪಾಟೀಲ್‌ ಶಿರವಾಳ ಹೇಳಿದರು.

Advertisement

ತಾಲೂಕಿನ ಕನ್ಯಾಕೋಳೂರ ಗ್ರಾಮದ ಸರ್ವೇ ನಂ. 393ರ ಬಳಿ ಸೇತುವೆ ಬಾಂದಾರ ನಿರ್ಮಾಣ ಮತ್ತು ನಿಜಶರಣ
ಅಂಬಿಗರ ಚೌಡಯ್ಯನವರ ಭವನ, ಉರ್ದು ಶಾಲಾ ಕೋಣೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ
ಅವರು ಮಾತನಾಡಿದರು.ಚ ಅಂದಾಜು ಕನ್ಯಾಳೂರ ಗ್ರಾಮ ವ್ಯಾಪ್ತಿ ಜನರಿಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಾಣದಿಂದ ಈ ಭಾಗದ ರೈತಾಪಿ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಜಮೀನಿಗೆ ನೀರು  ಸೇರಿದಂತೆ, ಈ ಭಾಗದ ಅಂತರಜಲ ಮಟ್ಟ ಹೆಚ್ಚಳವಾಗಲಿದೆ. ಅಂದಾಜು 185 ಎಕರೆ ಪ್ರದೇಶ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಸೇತುವೆ ನಿರ್ಮಾಣದಿಂದ ಕನ್ಯಾಕೋಳೂರ, ಅನವಾರ ಹಯ್ನಾಳ (ಕೆ) ಗ್ರಾಮಗಳ ನಡುವೆ ಜನರ ಸಂಪರ್ಕ ಕಲ್ಪಿಸಲು ಈ ಸೇತುವೆ ನೆರವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಮಲ್ಲಣ್ಣ ಮಡ್ಡಿ, ಲಾಲನಸಾಬ ಖುರೇಶಿ, ಅಯ್ಯಣ್ಣ ಕನ್ಯಾಕೋಳೂರ, ಅಂಬಣ್ಣ ನಾಟೇ ಕಾರ, ಮಂಜುನಾಥ, ರಾಚಣ್ಣ ಕರದಳ್ಳಿ, ಮಹಾದೇವಪ್ಪ ಜಗಶಟ್ಟಿ, ಮಹಾಂತಯ್ಯ ಸ್ವಾಮಿ, ಶಂಕರಗೌಡ, ಅಯ್ಯಣ್ಣ, ಬನ್ನಪ್ಪ ನಾಟೇಕಾರ, ಶಾಂತಪ್ಪ, ಶರಣಪ್ಪ ಶಿರವಾಳ, ಶರಣಬಸ್ಸಪ್ಪಗೌಡ, ರಾಜಶೇಖರ ಮಲ್ಹಾರ, ಸುರೇಶ ಹೊಸಮನಿ, ಮಲ್ಲಪ್ಪ ಬೇವಿನಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next