Advertisement

ದುಶ್ಚಟ ಬಿಟ್ಟು ನೆಮ್ಮದಿಯಿಂದ ಕುಟುಂಬ ಮುನ್ನಡೆಸಿ: ಅಂಗಾರ

01:45 PM Jan 29, 2018 | Team Udayavani |

ಬೆಳ್ಳಾರೆ: ಮದ್ಯಪಾನದ ದುಶ್ಚಟವನ್ನು ತ್ಯಜಿಸಿರುವ ಎಲ್ಲರೂ ನೆಮ್ಮದಿಯಿಂದ ಕುಟುಂಬ ಮುನ್ನಡೆಸುವಂತೆ ಶಾಸಕ ಅಂಗಾರ ಮನವಿ ಮಾಡಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು, ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಅರಂತೋಡು, ತೆಕ್ಕಿಲ್‌ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಅರಂತೋಡು, ಪ್ರಗತಿ ಬಂಧು ಸ್ವಸಹಾಯಗಳ ಒಕ್ಕೂಟ ಮತ್ತು ನವಜೀವನ ಸಮಿತಿಗಳು ಸಂಪಾಜೆ ವಲಯ ವತಿಯಿಂದ ಅರಂತೋಡು ತೆಕ್ಕಿಲ್‌ ಕಮ್ಯೂನಿಟಿ ಹಾಲ್‌ ನಲ್ಲಿ ನಡೆದ 1185ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಕುಟುಂಬ ಜೀವನದಲ್ಲಿ ಸಾಕಷ್ಟು ನೊಂದು, ಕಷ್ಟದಲ್ಲಿ ಬದುಕುತ್ತಿರಬಹುದು. ಆದರೆ, ಮುಂದೆ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಿ ಎಂದು ಕರೆ ನೀಡಿದರು.

ಜಿ.ಪಂ. ಸದಸ್ಯ ಹರೀಶ್‌ ಕಂಜಿಪಿಲಿ, ತಾ.ಪಂ. ಸದಸ್ಯೆ ಪುಷ್ಪಾ ಮೇದಪ್ಪ, ಬೆಳ್ತಂಗಡಿಯ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್‌ ವಿನ್ಸೆಂಟ್‌ ಪಾಯಿಸ್‌, ಅರಂತೋಡು ಮದ್ಯವರ್ಜನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಂತೋಷ್‌ ಕುತ್ತಮೊಟ್ಟೆ, ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಪಿ.ಸಿ. ಜಯರಾಮ್‌, ಜನಜಾಗೃತಿ ವೇದಿಕೆ ಸಂಪಾಜೆ ವಲಯ ಅಧ್ಯಕ್ಷ ಜಗನ್ಮೋಹನ ರೈ, ಶ್ರೀ ಕ್ಷೇ.ಧ. ಗ್ರಾ. ಯೋಜನೆ ಸುಳ್ಯ ಯೋಜನಾಧಿಕಾರಿ ಸಂತೋಷ್‌ಕುಮಾರ್‌ ರೈ, ಎ.ಪಿ.ಎಂ.ಸಿ. ಸದಸ್ಯ ದೀಪಕ್‌ ಕುತ್ತಮೊಟ್ಟೆ, ಮದ್ಯವರ್ಜನ ಶಿಬಿರದ ಜತೆ ಕಾರ್ಯದರ್ಶಿ ಪುರುಷೋತ್ತಮ ಉಳುವಾರು, ಬೂಡು ರಾಧಾಕೃಷ್ಣ ರೈ, ಡಾ| ಹರ್ಷವರ್ಧನ, ಸಿರೀಲ್‌ ಪಾಯಿಸ್‌, ಗಣೇಶ್‌ ಉಪಸ್ಥಿತರಿದ್ದರು. ಬಾಲಕೃಷ್ಣ ಬಲ್ಲಾಯ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next