Advertisement

ಗೋದಾಮು ಕಟ್ಟಡಕ್ಕೆ ಶಿಲಾನ್ಯಾಸ

10:49 AM Jan 05, 2018 | Team Udayavani |

ಪಡುಪಣಂಬೂರು: ಮೂಲಸೌಕರ್ಯಕ್ಕೆ ಅಗತ್ಯವಿದ್ದಂತೆ ಪಂಚಾಯತ್‌ಗಳು ತನ್ನ ಆರ್ಥಿಕ ಕ್ರೋಢೀಕರಣಕ್ಕೆ ವಿಶೇಷ ಯೋಜನೆ ರೂಪಿಸಿದರೆ, ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ
ಸಾವಂತರು ಹೇಳಿದರು.

Advertisement

ಪಡುಪಣಂಬೂರು ಗ್ರಾ.ಪಂ. ಆವರಣದಲ್ಲಿ ಬುಧವಾರ ಮಹಾತ್ಮಾಗಾಂಧಿ  ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ 14 ಲಕ್ಷ ರೂ. ವೆಚ್ಚದ ಗೋದಾಮು ಕಟ್ಟಡಕ್ಕೆ ಅವರು ಶಿಲಾನ್ಯಾಸ ನೆರವೇರಿಸಿದರು. ಪಡುಪಣಂಬೂರು ಗ್ರಾ.ಪಂ.ಅಧ್ಯಕ್ಷ ಮೋಹನ್‌ದಾಸ್‌ ಅಧ್ಯಕ್ಷತೆ ವಹಿಸಿದ್ದರು.

ಜಿ.ಪಂ. ಸದಸ್ಯ ವಿನೋದ್‌ ಕುಮಾರ್‌ ಬೊಳ್ಳೂರು ಮಾತನಾಡಿ, ನರೇಗಾ ಯೋಜನೆಯು ಗ್ರಾಮದ ಸಂಜೀವಿನಿ
ಇದ್ದಂತೆ. ಇದರಲ್ಲಿ ಮುಕ್ತವಾಗಿ ಯೋಜನೆಗಳನ್ನು ರೂಪಿಸಿದಲ್ಲಿ ಗ್ರಾಮೀಣ ಭಾಗದ ಜನರು ಸಹ ಇದರ ಫಲಾನುಭವಿಗಳಾಗಬಹುದು ಇದಕ್ಕೆ ಗ್ರಾ.ಪಂ. ಸದಸ್ಯರು ಹೆಚ್ಚಿನ ಮುತುವರ್ಜಿವಹಿಸಬೇಕು ಎಂದರು.

ತಾ.ಪಂ. ಸದಸ್ಯರಾದ ದಿವಾಕರ ಕರ್ಕೇರಾ ಕಿನ್ನಿಗೋಳಿ, ಜೀವನ್‌ ಪ್ರಕಾಶ್‌ ಕಾಮೆರೊಟ್ಟು, ಮೂಲ್ಕಿ ಅರಮನೆಯ
ಗೌತಮ್‌ ಜೈನ್‌ ಶುಭ ಹಾರೈಸಿದರು. ಹೊಗೆಗುಡ್ಡೆ ಉಮಾಮಹೇಶ್ವರೀ ದೇಗುಲದ ಅರ್ಚಕ ರಂಗನಾಥ ಭಟ್‌ ಮತ್ತು ರಾಜು ಭಟ್‌ ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.ಪಡುಪಣಂಬೂರು ಗ್ರಾ.ಪಂ. ಉಪಾಧ್ಯಕ್ಷೆ ಸುರೇಖಾ ಕರುಣಾಕರ್‌, ಸದಸ್ಯರಾದ ವನಜಾ, ಪುಷ್ಪಾವತಿ, ಹೇಮನಾಥ ಅಮೀನ್‌ ತೋಕೂರು, ಸಂಪಾವತಿ, ಮಂಜುಳಾ, ನರೇಗಾ ಯೋಜನೆಯ ಎಂಜಿನಿಯರ್‌ ಅಜಿತ್‌, ಗ್ರಾಮಸ್ಥರು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪಿಡಿಒ ಅರುಣ್‌ ಪ್ರದೀಪ್‌ ಡಿ’ಸೋಜಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next