Advertisement

ಗ್ರಾಮಕ್ಕೆ ಬಂದ ಶಾಸಕರು ರಸ್ತೆ ನೋಡದೇ ವಾಪಸ್‌!

11:53 AM Oct 21, 2021 | Team Udayavani |

ನೆಲಮಂಗಲ: ಗ್ರಾಮಸ್ಥರ ಪ್ರತಿಭಟನೆ ನಂತರ ಗ್ರಾಮಕ್ಕೆ ಬಂದ ಶಾಸಕ ಡಾ.ಕೆ. ಶ್ರೀನಿವಾಸಮೂ ರ್ತಿ ಅವರು, ವರದಿ ಮಾಡಿದ್ದ ಪತ್ರಿಕಾಮಾಧ್ಯಮದವರು ಹಾಗೂ ಪ್ರತಿಭಟನೆ ಮಾಡಿ ಮನವಿ ಮಾಡಿದ್ದ ಗ್ರಾಮಸ್ಥರ ವಿರುದ್ಧ ಕಿಡಿಕಾರಿ ಸಂಪೂರ್ಣ ರಸ್ತೆ ಪರಿಶೀಲನೆ ಮಾಡದೆ ಅರ್ಧಕ್ಕೆ ವಾಪಸ್‌ ಹೋಗಿದ್ದಾರೆ.

Advertisement

ತಾಲೂಕಿನ ಶ್ರೀನಿವಾಸಪುರ ಗ್ರಾಪಂ ವ್ಯಾಪ್ತಿಯ ತೊರೆಪಾಳ್ಯ ಗ್ರಾಮಕ್ಕೆ ಸ್ವಾತಂತ್ರ ಬಂದು 75 ವರ್ಷಗಳಾದರೂ, ಪ್ರತಿನಿತ್ಯ ಕೆಸರುಗದ್ದೆಯಂತಹ ಹಾಗೂ ಗುಂಡಿಗಳಿರುವ ರಸ್ತೆಯಲ್ಲಿ ಸಂಚರಿಸುವ ದುಸ್ಥಿತಿ ನೋಡಿ ಬೇಸತ್ತು ಗ್ರಾಮಸ್ಥರು ಪ್ರತಿ ಭಟನೆ ಮಾಡಿದ್ದರು. ಸಮಸ್ಯೆ ವಾಸ್ತವತೆ ಕಂಡ ಮಾಧ್ಯಮಗಳು ವರದಿ ಮಾಡಿದ್ದವು.

ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕಾಮಗಾರಿ ಆರಂಭ ಮಾಡಿದ್ದಾರೆ. ಆದರೆ, 8 ವರ್ಷದ ನಂತರ ಗ್ರಾಮಕ್ಕೆ ಬಂದ ಶಾಸಕರು ಗ್ರಾಮದ ಜನರ ಸಮಸ್ಯೆ ಆಲಿಸದೇ ಪ್ರತಿಭಟನೆ ಮಾಡಿದ ಜನರ ಮೇಲೆ ವಾಗ್ಧಾಳಿ ನಡೆಸಿ ಮಾಧ್ಯಮದವರ ಮೇಲೆ ಕಿಡಿಕಾರಿ ಹೋಗಿರುವುದು ಸಾರ್ವಜನಿಕ ವಲ ಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ;- ಸಮಾಜಕ್ಕೆ  ವಾಲ್ಮೀಕಿ ಕೊಡುಗೆ ಅಪಾರ: ಅಜಯ್‌

ಶಾಸಕರ ಮೇಲೆ ಅನುಮಾನ: 2 ತಿಂಗಳ ಹಿಂದೆಯೇ ರಸ್ತೆ ಕಾಮಗಾರಿಗೆ ಬಗ್ಗೆ ಸಚಿವ ಈಶ್ವರಪ್ಪ ಅವರಿಗೆ ಮನವಿ ಮಾಡಲಾಗಿದೆ ಎಂದು ಶಾಸಕರು, ಪತ್ರ ಪ್ರತಿಯನ್ನು ಗ್ರಾಮಸ್ಥರಿಗೆ ತೋರಿಸಿದರು. ಪತ್ರದ ಪ್ರತಿಯಲ್ಲಿ ದಿನಾಂಕ ಹಾಗೂ ಶಾಸಕರ ಸಹಿ ಇಲ್ಲ. ರಾತ್ರೋರಾತ್ರಿ ತರಾತುರಿಯಲ್ಲಿ ಸಿದ್ಧವಾದ ಪಟ್ಟಿಯನ್ನು ತಂದು ಜನರು ಹಾಗೂ ಮಾಧ್ಯಮಕ್ಕೆ ತೋರಿಸಿರುವುದು ಹಲವು ಅನುಮಾನ ವ್ಯಕ್ತವಾಗಿದೆ.

Advertisement

ಅಕ್ರಮ ರೆಸಾರ್ಟ್‌ನಲ್ಲಿ ಭರ್ಜರಿ ಭೋಜನ: ತೊರೆಪಾಳ್ಯ ಗ್ರಾಮಕ್ಕೆ ಭೇಟಿ ನೀಡುವ ಮೊದಲು ಬೈರಸಂದ್ರ ಗ್ರಾಮದಲ್ಲಿರುವ ಅಕ್ರಮ ರೆಸಾರ್ಟ್‌ ನಲ್ಲಿ ಕೆಲವು ಸದಸ್ಯರ ಜತೆ ಗೌಪ್ಯ ಮಾತುಕತೆ ಮಾಡಿದ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಅವರು, ಭರ್ಜರಿ ಭೋಜನ ಮಾಡಿ ಕಾರಿನಲ್ಲಿ ಕುಳಿತು ರಸ್ತೆ ಪರಿಶೀಲನೆ ಮಾಡಿದ್ದಾರೆ. ಅಕ್ರಮ ರೆಸಾರ್ಟ್‌ಗಳಿಗೆ ಶಾಸಕರು, ಸದಸ್ಯರು ಹೋದರೆ ಮಾಲೀಕರು ಸಕ್ರಮ ಮಾಡಿಕೊಳ್ಳಲು ಮನಸ್ಸು ಎಲ್ಲಿ ಮಾಡುತ್ತಾರೆ ಎಂಬ ಪ್ರಶ್ನೆ ಸ್ಥಳೀಯರು ಮಾಡಿದ್ದು, ಶಾಸಕರ ತರಾತುರಿ ಭೇಟಿ ಟೀಕೆಗೆ ಗುರಿಯಾಗಿದೆ.

 ಪತ್ರಿಕಾಮಾಧ್ಯಮಗಳ ವಿರುದ್ಧ ಆಕ್ರೋಶ: ಗ್ರಾಮದ ರಸ್ತೆ ಸಮಸ್ಯೆಯ ಬಗ್ಗೆ ವರದಿ ಮಾಡಿದ್ದ ಪತ್ರಿಕಾಮಾಧ್ಯಮದವರೇ ರಸ್ತೆ ಮಾಡಿಸಲಿದ್ದಾರೆ ಬಿಡಿ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಅವರು, ಗ್ರಾಮದ ಭೇಟಿ ಮಾಡಿದ ಸಂದರ್ಭದಲ್ಲಿ ಮಾಧ್ಯಮದವರ ಮೇಲೆ ಕಿಡಿಕಾರಿ ಶಾಸಕರನ್ನು ಪ್ರಶ್ನೆಯೇ ಮಾಡಬಾರದು. ನಮಗೆ ಸಮಸ್ಯೆ ಬಗೆಹರಿಸುವುದು ಗೊತ್ತು ಎಂದು ಟಾರ್ಗೆಟ್‌ ಮಾಡಿ ಮಾತನಾಡಿದ್ದಾರೆ.

ರಸ್ತೆ ವಾಸ್ತವ ಅರಿಯದ ಶಾಸಕ

ಗ್ರಾಮಕ್ಕೆ ಬರುವ ಮುಖ್ಯರಸ್ತೆ 800 ಮೀ. ಉದ್ದವಿದ್ದು, ಗುಂಡಿಬಿದ್ದು ಸಂಪೂರ್ಣ ಹಾಳಾಗಿದೆ. ಗ್ರಾಮಸ್ಥರು ಪಕ್ಕದ ಗ್ರಾಮದಲ್ಲಿ ಪಡಿತರ ತರಲು ಹೋಗುತ್ತಾರೆ. ಗ್ರಾಮಸ್ಥರ ಸಮಸ್ಯೆ, ರಸ್ತೆ ವಾಸ್ತವ ಅರಿಯದೇ ಶಾಸಕರು ಅವರ ಆಪ್ತರ ತೋಟದ ಮನೆಗೆ ಭೇಟಿ ನೀಡಿ ಗ್ರಾಮಸ್ಥರ ಮೇಲೆ ಕಿಡಿಕಾರಿ ಮುಖ್ಯರಸ್ತೆ ಪರಿಶೀಲನೆ ಮಾಡದೆ ವಾಪಸ್‌ ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next