Advertisement

Karnataka: ಆನ್‌ಲೈನ್‌ ಬೆಟ್ಟಿಂಗ್‌ ಕಡಿವಾಣಕ್ಕೆ ಕಾನೂನು: ಡಾ| ಜಿ. ಪರಮೇಶ್ವರ್‌

11:27 PM Feb 13, 2024 | Pranav MS |

ಬೆಂಗಳೂರು: ಆನ್‌ಲೈನ್‌ ಬೆಟ್ಟಿಂಗ್‌ ದಂಧೆಗೆ ಕಡಿವಾಣ ಹಾಕಲು ರಾಜ್ಯದಲ್ಲಿ ಶೀಘ್ರವೇ ಕಾನೂನು ರೂಪಿಸಲಾಗುವುದು ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.

Advertisement

ಶಾಸಕ ರವಿಕುಮಾರಗೌಡ ಗಣಿಗ ಅವರ ಗಮನ ಸೆಳೆಯುವ ಪ್ರಶ್ನೆ ಹಾಗೂ ಪಕ್ಷಾತೀತವಾಗಿ ಹಲವು ಶಾಸಕರು ಬೆಟ್ಟಿಂಗ್‌ ದಂಧೆ ಬಗ್ಗೆ ವ್ಯಕ್ತಪಡಿಸಿದ ಆತಂಕಕ್ಕೆ ಧ್ವನಿಗೂಡಿಸಿದ ಗೃಹ ಸಚಿವರು, ರಾಜ್ಯ ಸರಕಾರವು ಬೆಟ್ಟಿಂಗ್‌ ದಂಧೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಈ ದಂಧೆಗೆ ಕಡಿವಾಣ ಹಾಕಲು ಬದ್ಧವಾಗಿದೆ ಎಂದು ಹೇಳಿದರು.

ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರಕಾರ ಸಹ ಸೂಕ್ತ ಕಾನೂನು ತರುವ ಅಗತ್ಯವಿದೆ. ಶೇ.28ರಷ್ಟು ಜಿಎಸ್‌ಟಿ ಸಿಗುತ್ತದೆ ಎಂಬ ಕಾರಣಕ್ಕೆ ಆನ್‌ಲೈನ್‌ ಬೆಟ್ಟಿಂಗ್‌ ನಿಯಂತ್ರಣಕ್ಕೆ ಕಠಿನ ಕಾನೂನು ರೂಪಿಸದಿರುವುದು ಸರಿಯಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರ ಸೇರಿ ಈ ದಂಧೆಯನ್ನು ನಿಯಂತ್ರಿಸಬೇಕೆಂದು ಪರಮೇಶ್ವರ್‌ ಅಭಿಪ್ರಾಯಪಟ್ಟರು.

ಕ್ರಿಕೆಟ್‌ ಬೆಟ್ಟಿಂಗ್‌, ಆನ್‌ಲೈನ್‌ ಮನಿ ಗೇಮಿಂಗ್‌ ದಂಧೆ ರಾಜ್ಯಾದ್ಯಂತ ನಡೆಯುತ್ತಿದೆ. ಇದರಲ್ಲಿ ಸಾವಿರಾರು ಕೋಟಿ ರೂ. ಹಣದ ವ್ಯವಹಾರ ನಡೆಯುತ್ತಿದೆ. ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಪರಮೇಶ್ವರ್‌ ತಿಳಿಸಿದರು. ಬೆಟ್ಟಿಂಗ್‌ ವಿಷಯ ಗಮನ ಸೆಳೆಯುವ ಸೂಚನೆಯಡಿ ಬಂದಿದ್ದರೂ ಹಲವು ಶಾಸಕರು ಈ ದಂಧೆಯಿಂದ ಆಗುತ್ತಿರುವ ಅನಾಹುತದ ಬಗ್ಗೆ ಬೆಳಕು ಚೆಲ್ಲಲು ಮುಂದಾದ ಹಿನ್ನೆಲೆಯಲ್ಲಿ ಕಲಾಪದಲ್ಲಿ ಸಣ್ಣ ಮಟ್ಟಿನ ಚರ್ಚೆಯೇ ನಡೆಯಿತು.

ಬುಕ್ಕಿಗಳಿಗೆ ಶಾಸಕರ ವಕಾಲತ್ತು!
ವಿಪಕ್ಷ ನಾಯಕ ಆರ್‌. ಅಶೋಕ್‌ ಮಾತನಾಡಿ, ಒಂದು ಅಂದಾಜಿನಂತೆ ಐಪಿಎಲ್‌ ರೀತಿಯ ಕ್ರೀಡಾಕೂಟದಲ್ಲಿ ಒಂದು ಪಂದ್ಯಕ್ಕೆ 1 ಸಾವಿರ ಕೋಟಿ ರೂ. ಬೆಟ್ಟಿಂಗ್‌ ನಡೆಯುತ್ತದೆ. ಆ ಹಣವೆಲ್ಲ ಹವಾಲ ಮೂಲಕ ರವಾನೆಯಾಗುತ್ತದೆ. ಈ ಬುಕ್ಕಿಗಳು ರಾಜ್ಯ ಪೊಲೀಸರಿಗೆಲ್ಲ ಬಗ್ಗುವುದಿಲ್ಲ. ಒಂದು ವೇಳೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಹೋದರೆ ಸದನದ ಸದಸ್ಯರೇ ಅವರ ಪರವಾಗಿ ನಿಲ್ಲುತ್ತಾರೆ. ನಾನು ಗೃಹ ಸಚಿವನಾಗಿ¨ªಾಗಲೂ, ಸದನದ ಕೆಲವು ಸದಸ್ಯರು ಬುಕ್ಕಿಗಳ ಪರವಾಗಿ ನನ್ನ ಬಳಿ ವಕಾಲತ್ತು ವಹಿಸಿದ್ದರು ಎಂದರು.

Advertisement

ವರ್ಷದಲ್ಲಿ ಡ್ರಗ್ಸ್‌ ಮುಕ್ತ ಕರ್ನಾಟಕ
ರಾಜ್ಯದಲ್ಲಿ ಡ್ರಗ್ಸ್‌ ಹಾವಳಿ ತಡೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಪರಮಾಧಿಕಾರ ನೀಡಿದ್ದು, ಮುಂದಿನ ಒಂದು ವರ್ಷದಲ್ಲಿ ಕರ್ನಾಟಕವನ್ನು ಡ್ರಗ್ಸ್‌ ಮುಕ್ತ ರಾಜ್ಯವನ್ನಾಗಿ ಮಾಡಲಾಗುವುದು. ನಮ್ಮ ಸರಕಾರ ಡ್ರಗ್ಸ್‌ ವಿರುದ್ಧ ಸಮರ ಸಾರಿದೆ ಎಂದು ಗೃಹ ಸಚಿವರು ಭರವಸೆ ನೀಡಿದ್ದಾರೆ. ಚರ್ಚೆ ವೇಳೆ ಬಿಜೆಪಿಯ ರವಿ ಸುಬ್ರಹ್ಮಣ್ಯ,ಬೆಂಗಳೂರು ನಗರದಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿ, ಡ್ರಗ್ಸ್‌ ವಹಿವಾಟಿಗೆ ಕಡಿವಾಣ ಹಾಕಲು ಸರಕಾರ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಆನ್‌ಲೈನ್‌ ಗೇಮಿಂಗ್‌ನಿಂದ ಜಿಎಸ್‌ಟಿ ರೂಪದಲ್ಲಿಯೇ 2024ರಿಂದ 2028ರವರೆಗೆ 74 ಸಾವಿರ ಕೋಟಿ ರೂ. ಆದಾಯ ಗಳಿಸುವ ಗುರಿಯನ್ನು ಕೇಂದ್ರ ಹೊಂದಿದೆ. ಕೇಂದ್ರ ಸರಕಾರ ಈ ರೀತಿಯ ಆದಾಯವನ್ನು ಬದಿಗಿಟ್ಟು ಕಠಿನ ಕಾನೂನು ಕ್ರಮ ಜರಗಿಸಲು ಮುಂದಾಗಬೇಕು.
-ಪ್ರಿಯಾಂಕ್‌ ಖರ್ಗೆ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next