Advertisement

Law: ಮೃತದೇಹಗಳ ಮೇಲೆ ಅತ್ಯಾಚಾರವೆಸಗುವವರಿಗೆ ಶಿಕ್ಷೆ: ಕಾನೂನು ತಿದ್ದುಪಡಿಗೆ ಶಿಫಾರಸು

12:05 AM Jun 01, 2023 | Team Udayavani |

ಬೆಂಗಳೂರು: ಮೃತ ದೇಹಗಳ ಮೇಲೆ ಲೈಂಗಿಕ ಕ್ರಿಯೆಗಳನ್ನು ನಡೆಸುವಂತಹ ಅಪ ರಾಧಿಗಳಿಗೆ ಶಿಕ್ಷೆ ವಿಧಿಸು ವುದಕ್ಕಾಗಿ ಕಾನೂನಿಗೆ ಅಗತ್ಯ ತಿದ್ದುಪಡಿ ತರುವ ಆವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ಐಪಿಸಿಯ ಕೆಲವು ನಿಬಂಧನೆಗಳನ್ನು ತಿದ್ದುಪಡಿ ಮಾಡುವುದು ಅಥವಾ ಹೊಸ ನಿಬಂಧನೆಗಳನ್ನು ಜಾರಿ ಮಾಡುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿ ಹೈಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ.

Advertisement

ಕೊಲೆ ಮತ್ತು ಮೃತದೇಹದ ಮೇಲೆ ಅತ್ಯಾಚಾರವೆಸಗಿದ್ದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗುಲ್ಲಿಗೇನಹಳ್ಳಿಯ ರಂಗರಾಜು ಅಲಿಯಾಸ್‌ ವಾಜಪೇಯಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿರುವ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾ| ಟಿ. ವೆಂಕಟೇಶ್‌ ನಾಯಕ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಕೇಂದ್ರ ಸರಕಾರಕ್ಕೆ ಈ ಮಹತ್ವದ ಶಿಫಾರಸು ಮಾಡಿದೆ.

ಮಹಿಳೆಯೊಬ್ಬರನ್ನು ಕೊಲೆ ಮಾಡಿ ಅತ್ಯಾಚಾರವೆಸಗಿದ್ದ ಆರೋಪಿಗೆ ಕೊಲೆ ಆರೋಪ (ಸೆಕ್ಷನ್‌ 302)ದ ಅಡಿ ಪ್ರಕರಣದಲ್ಲಿ ಮಾತ್ರ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ.ಗಳನ್ನು ದಂಡ ವಿಧಿಸಿದ ವಿಚಾರಣ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿರುವ ಹೈಕೋರ್ಟ್‌, ಮೃತದೇಹದ ಮೇಲೆ ಅತ್ಯಾಚಾರ ನಡೆದಿರುವುದರಿಂದ ಐಪಿಸಿ ಸೆಕ್ಷನ್‌ 376ರಡಿ ಅತ್ಯಾಚಾರ ಆರೋಪಕ್ಕೆ ಶಿಕ್ಷೆ ವಿಧಿಸಲು ಅವಕಾಶವಿಲ್ಲ. ಹಾಗಾಗಿ, ಅತ್ಯಾಚಾರ ಆರೋಪ ಪ್ರಕರಣದಲ್ಲಿ ಅರೋಪಿಯನ್ನು ಖುಲಾಸೆಗೊಳಿಸುವಂತಾಗಿದೆ ಎಂದು ಹೇಳಿದೆ.

ಹಾಗಾಗಿ, ಮೃತದೇಹಗಳ ಮೇಲೆ ಅತ್ಯಾಚಾರವೆಸಗುವವರಿಗೆ ಶಿಕ್ಷೆ ವಿಧಿಸುವುದಕ್ಕಾಗಿ ಐಪಿಸಿ ಸೆಕ್ಷನ್‌ಗಳಿಗೆ ಅಗತ್ಯ ತಿದ್ದುಪಡಿ ಅಥವ ಹೊಸ ನಿಬಂಧನೆಗಳನ್ನು ಸೇರ್ಪಡೆ ಮಾಡಬೇಕು ಎಂದು ನ್ಯಾಯಪೀಠ ಶಿಫಾರಸು ಮಾಡಿದೆ. ಆರೋಪಿಯು ಮೃತದೇಹದ ಮೇಲೆ ಅತ್ಯಾಚಾರವೆಸಗಿರುವುದನ್ನು ಒಪ್ಪಿಕೊಂಡಿ¨ªಾರೆ. ಈ ಆರೋಪ ಐಪಿಸಿ 375 ಅಥವಾ 377 ಅಡಿಯಲ್ಲಿ ಬರಲಿದಿಯೇ? ಈ ಎರಡೂ ಸೆಕ್ಷನ್‌ಗಳ ಅಡಿಯಲ್ಲಿ ಮೃತದೇಹವನ್ನು ಮನುಷ್ಯ ಅಥವಾ ವ್ಯಕ್ತಿ ಎಂಬುದಾಗಿ ಪರಿಗಣಿಸಲಾಗುವುದಿಲ್ಲ. ಈ ನಿಟ್ಟಿನಲ್ಲಿ ಮೃತದೇಹಗಳ ಮೇಲೆ ಅತ್ಯಾಚಾರವೆಸಗುವ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಅಗತ್ಯ ನಿಬಂಧನೆಗಳನ್ನು ರೂಪಿಸಬೇಕು ಎಂದು ನ್ಯಾಯಪೀಠ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.

ಜತೆಗೆ, ಕೆನಡಾ, ಯುಕೆ, ನ್ಯೂಜಿಲ್ಯಾಂಡ್‌ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಹಲವಾರು ದೇಶಗಳ ಉದಾಹರಣೆಗಳನ್ನು ಉÇÉೇಖೀಸಿರುವ ನ್ಯಾಯಪೀಠ, ಆ ದೇಶಗಳಲ್ಲಿ ಮೃತದೇಹಗಳ ವಿರುದ್ಧದ ಅಪರಾಧವು ಶಿûಾರ್ಹವಾಗಿದೆ. ಅಂತಹ ನಿಬಂಧನೆಗಳನ್ನು ಭಾರತದಲ್ಲಿಯೂ ಪರಿಚಯಿಸಬೇಕು ಎಂದು ನ್ಯಾಯಪೀಠ ಶಿಫಾರಸು ಮಾಡಿದೆ. ಅಲ್ಲದೇ, ಐಪಿಸಿ ಸೆಕ್ಷನ್‌ 377ರ ನಿಬಂಧನೆಗಳನ್ನು ತಿದ್ದುಪಡಿ ಮಾಡುವುದಕ್ಕೆ ಕೇಂದ್ರ ಸರಕಾರಕ್ಕೆ ಇದು ಸೂಕ್ತ ಸಮಯವಾಗಿದೆ. ಈ ನಿಬಂಧನೆಯಲ್ಲಿ ಪುರುಷ, ಮಹಿಳೆ ಮತ್ತು ಪ್ರಾಣಿಗಳ ಮೃತದೇಹವನ್ನು ಸೇರ್ಪಡೆ ಮಾಡಬೇಕು. ಇಲ್ಲವಾದಲ್ಲಿ ಮಹಿಳೆಯ ಮೃತದೇಹವನ್ನು ಸ್ವಾಭಾವಿಕ ಹಾಗೂ ದೈಹಿಕವಾಗಿ ಸಂಭೋಗ ಮಾಡುವ ವ್ಯಕ್ತಿಯ ವಿರುದ್ಧ ಕುರಿತು ಹೊಸ ನಿಬಂಧನೆಯನ್ನು ಸೇರ್ಪಡೆ ಮಾಡಬೇಕು. ಮಹಿಳೆಯ ಮೃತದೇಹವನ್ನು ಒಳಗೊಂಡಂತೆ ಪ್ರಕೃತಿಯ ವಿರುದ್ಧ (ಅನೈಸರ್ಗಿಕ ಲೈಂಗಿಕ ಕ್ರಿಯೆ) ಸಂಭೋಗ ನಡೆಸುವವರಿಗೆ ಜೀವಾವಧಿ ಅಥವಾ 10 ವರ್ಷಗಳ ಕಾಲಕ್ಕೆ ವಿಸ್ತರಿಸಬಹುದಾದ ಶಿಕ್ಷೆ ನೀಡುವಂತಹ ನಿಬಂಧನೆಯನ್ನು ಸೇರ್ಪಡೆ ಮಾಡಬೇಕು ಎಂದು ನ್ಯಾಯಪೀಠ ಶಿಫಾರಸು ಮಾಡಿದೆ. ಅಲ್ಲದೆ, ಮುಂದಿನ ಆರು ತಿಂಗಳಲ್ಲಿ ಎಲ್ಲ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಶವಾಗಾರಗಳಲ್ಲಿ ಸಿಸಿ ಟಿವಿ ಕೆಮರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸೂಚನೆ ನೀಡಿದೆ. ಶವಾಗಾರಗಳಲ್ಲಿ ನೈರ್ಮಲ್ಯ ಕಾಪಾಡುವುದು ಮತ್ತು ಸಿಬಂದಿಗೆ ತರಬೇತಿ ನೀಡಬೇಕಾಗುತ್ತದೆ ಎಂದು ಹೈಕೋರ್ಟ್‌ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next