Advertisement

ದೀನ-ದುರ್ಬಲರಿಗೆ ಕಾನೂನು ನೆರವು ಉಚಿತ

11:33 AM Oct 22, 2021 | Team Udayavani |

ಆಳಂದ: ದೀನ-ದುರ್ಬಲರು, ಬಡವರು, ಮಹಿಳೆಯರು ಕಾನೂನು ಸೇವಾ ಪ್ರಾಧಿಕಾರದಿಂದ ಇರುವ ಉಚಿತ ಕಾನೂನಿನ ನೆರವು ಪಡೆದುಕೊಳ್ಳಲು ಮುಂದಾಗಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧಿಧೀಶ ಎಂ.ಸಿ. ನಾಡಗೌಡ ಹೇಳಿದರು.

Advertisement

ತಾಲೂಕಿನ ಆಳಂಗಾ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಭಾರತ ಅಮೃತ ಮಹೋತ್ಸವ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ 25ನೇ ವರ್ಷದ ಆಚರಣೆ ಸಂಭ್ರಮದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಸೌಲಭ್ಯ ವಂಚಿತರಾದರೆ ಮತ್ತು ಶೋಷಣೆ, ಅತ್ಯಾಚಾರ, ದೌರ್ಜನ್ಯಕ್ಕೆ ಒಳಗಾಗಿ ನೊಂದ ಬಡವರಿಗೆ ಉಚಿತವಾಗಿ ನ್ಯಾಯ ಒದಗಿಸಲು ಸೇವಾ ಪ್ರಾಧಿಕಾರ ಬದ್ಧವಾಗಿದ್ದು, ಆಳಂದನ ಉಚಿತ ಕಾನೂನು ಸೇವಾ ಸಮಿತಿಗೆ ಅರ್ಜಿ ಸಲ್ಲಿಸಿ ನ್ಯಾಯ ಪಡೆಯಲು ಮುಂದಾಗಬೇಕು ಎಂದು ಹೇಳಿದರು.

ಇದನ್ನೂ ಓದಿ: ಕಳೆದ ಬಾರಿ ಸೋತರೂ ನುಡಿದಂತೆ ನಡೆದಿದ್ದೇನೆ: ಶ್ರೀನಿವಾಸ ಮಾನೆ

ನ್ಯಾಯವಾದಿ ಸಂಘದ ಅಧ್ಯಕ್ಷ ನಾಗೇಶ ರೆಡ್ಡಿ ಮಾತನಾಡಿ, ಗ್ರಾಮೀಣ ಜನರಲ್ಲಿ ಕಾನೂನು ತಿಳಿವಳಿಕೆ ತಂದುಕೊಳ್ಳುವುದು ಅಗತ್ಯವಾಗಿದೆ. ದೈನಂದಿನ ಜೀವನಕ್ಕೆ ಕಾನೂನು ಅರಿವು ಇಲ್ಲದೆ ಇದ್ದರೇ ಜೀವನ ಸಂಕಷ್ಟಕ್ಕೆ ಸಿಲುಕುತ್ತದೆ. ಪ್ರತಿಯೊಬ್ಬರು ಶಿಕ್ಷಣದ ಜೊತೆಗೆ ಕಾನೂನು ತಿಳಿದುಕೊಂಡು ವ್ಯವಹರಿಸಬೇಕು ಎಂದು ಸಲಹೆ ನೀಡಿದರು.

Advertisement

ಪ್ರಧಾನ ಕಿರಿಯ ಶ್ರೇಣಿ ನ್ಯಾಯಾಧೀಶ ಚಂದ್ರಕಾಂತ, ನ್ಯಾಯವಾದಿ ಸರ್ಕಾರಿ ವಕೀಲ ಜ್ಯೋತಿ ಬಂಡಿ ಮತ್ತು ಸುಭಾಶ್ರೀ ಬಡಿಗೇರ ಮಾತನಾಡಿದರು. ಆಸ್ತಿ ನೋಂದಣಿ, ಪಹಣಿ ಪತ್ರಿಕೆ ಮತ್ತು ಹಿರಿಯ ನಾಗರಿಕರ ಹಕ್ಕುಗಳ ಕುರಿತು ಹಿರಿಯ ನ್ಯಾಯವಾದಿ ಎಸ್‌.ಎ. ಪಾಟೀಲ, ಕಂದಾಯ ಕಾಯ್ದೆ ಕುರಿತು ಎಂ.ವಿ. ಏಕಬೋಟೆ, ಮಹಿಳಾ ಕಾನೂನು ಕುರಿತು ಜ್ಯೋತಿ ಹಂಚಾಟೆ ಮಾಹಿತಿ ನೀಡಿದರು.

ಗ್ರಾಮದ ರಾಜೇಂದ್ರ ಸೋನಕಾಂಬಳೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಜ್ಞಾನೇಶ್ವರ ಚವ್ಹಾಣ, ಮುಖಂಡ ಶ್ರೀಧರ ಬೋಸಣೆ, ಸುಭಾಷ ಕಲಶೆಟ್ಟಿ, ಸುಭಾಷ ಕಾರಬಾರಿ, ಅಭಿವೃದ್ಧಿ ಅಧಿಕಾರಿ ಅಭಿನಂದ ಕಾಸರ, ನ್ಯಾಯವಾದಿ ಎ.ಸಿ.ತೋಳೆ, ಬಿ.ವೈ. ಶಿರೋಳೆ, ದೇವಾನಂದ ಹೋದಲೂರಕರ್‌, ದೀಪಾರಾಣಿ ಕುಲಕರ್ಣಿ, ಎಸ್‌.ಡಿ.ಬೋಸಗೆ, ಉಮಹೇ ಇನಾಮದಾರ ಮತ್ತಿತರರು ಇದ್ದರು. ನ್ಯಾಯವಾದಿಗಳಾದ ಬಿ.ಜಿ. ಬೀಳಗಿ ನಿರೂಪಿಸಿದರು, ಶಿವಶಂಕರ ಮುನೋಳಿ ಸ್ವಾಗತಿಸಿದರು, ಬಿ.ಟಿ. ಸಿಂಧೆ ವಂದಿಸಿದರು. ತಡೋಳಾ ಗ್ರಾಪಂನಲ್ಲಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ನ್ಯಾಯಾ ಧೀಶರು, ವಕೀಲರು ಪಾಲ್ಗೊಂಡಿ ದ್ದರು. ಗ್ರಾಪಂ ಅಧ್ಯಕ್ಷ ಮೈಲಾರಿ ಜೋಗೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪೂಜಾ ಪ್ರವೀಣ ಕಾಂಬಳೆ, ಅಭಿವೃದ್ಧಿ ಅ ಧಿಕಾರಿ ಶರಣಬಸಪ್ಪ ಕಡಗಂಚಿ, ಹೋರಾಟಗಾರ ಮೌಲಾ ಮುಲ್ಲಾ, ಕಮಲೇಶ ಅವುಟೆ, ಆಶಾ ಕ್‌ ಮುಲ್ಲಾ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next