Advertisement

ಡಿಕೆಶಿಗಾಗಿ ಕಾನೂನು ಬದಲಾವಣೆ ಅಸಾಧ್ಯ

11:20 PM Sep 11, 2019 | Team Udayavani |

ಬೆಂಗಳೂರು: “ಸನ್ಮಾನ್ಯ ಡಿ.ಕೆ.ಶಿವಕುಮಾರ್‌ ಅವರಿಗಾಗಿ ದೇಶದ, ನೆಲದ ಕಾನೂನು ಬದಲಾ ಯಿಸಲು ಸಾಧ್ಯವಿಲ್ಲ. ತಪ್ಪನ್ನು ಯಾವ ಜಾತಿಯ ವರು ಮಾಡಿದರೂ ತಪ್ಪೇ. ಇದು ತಪ್ಪು, ಒಪ್ಪಿನ ಪ್ರಶ್ನೆಯೇ ಹೊರತು ಜಾತಿಯ ಪ್ರಶ್ನೆ ಯಲ್ಲ. ಇಂತಹ ವಿಚಾರಗಳಿಗೆ ಪ್ರತಿ ಭಟನೆ ಮಾಡುವುದು ಸರಿಯಲ್ಲ. ಇದನ್ನು ಜಾತಿ ರಾಜಕಾರಣಕ್ಕೆ ತಂದಿರು ವುದು ಅಕ್ಷಮ್ಯ ಅಪರಾಧ’ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಡಿಕೆಶಿ ಬಂಧನ ಖಂಡಿಸಿ ನಗರದಲ್ಲಿ ಬುಧವಾರ ನಡೆದ ಪ್ರತಿಭಟನಾ ರ್ಯಾಲಿ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅಶೋಕ್‌, ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದಾಗ ಬಿ.ಎಸ್‌. ಯಡಿಯೂರಪ್ಪ ಅವರ ಬಂಧನವಾಗಿತ್ತು. ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಅವರ ಬಂಧನವಾಗಿತ್ತು. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಬಂಧನವಾಗಿತ್ತು. ಜನಾರ್ದನರೆಡ್ಡಿ ಹಾಗೂ ಡಿ.ಕೆ.ಶಿವಕುಮಾರ್‌ ಆಗ ಸ್ನೇಹಿತರಾಗಿದ್ದರು. ಯಡಿಯೂರಪ್ಪ ಅವರ ಬಂಧನವಾಗಿತ್ತು ಎಂಬ ಕಾರಣಕ್ಕೆ ಆಗ ಕಾನೂನು ಬದಲಿಸಿರಲಿಲ್ಲ. ಅದರಂತೆ ಈಗ ಡಿ.ಕೆ.ಶಿವಕುಮಾರ್‌ ಅವರಿಗಾಗಿ ಕಾನೂನು ಬದಲಾ ಯಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರಕ್ಕೂ ಇ.ಡಿ, ಸಿಬಿಐಗೂ ಯಾವುದೇ ಸಂಬಂಧವಿಲ್ಲ ಎಂದು ಸಮರ್ಥಿಸಿಕೊಂಡರು.

ಒಕ್ಕಲಿಗರ ಸಂಘಗಳ ಸಂಸ್ಥೆಗಳ ಒಕ್ಕೂಟದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಕೆಲ ಸ್ವಾಮೀಜಿಗಳು ಪಾಲ್ಗೊಂಡಿರುವುದು ಸರಿಯೋ, ತಪ್ಪೋ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶೋಕ್‌, ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲಿ ಜಾತಿ ರಾಜಕಾರಣವಾಗಲಿ, ಜಾತಿಯವರನ್ನು ದಮನ ಮಾಡುವ ಕೆಲಸವನ್ನಾಗಲಿ ಮಾಡುತ್ತಿಲ್ಲ. ಕೇಂದ್ರ ಸರ್ಕಾರಕ್ಕೂ ಈ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ಯಾರಾದರೂ ಪಾಲ್ಗೊಂಡಿದ್ದರೆ ಅದು ವೈಯಕ್ತಿಕ. ಇಂತಹ ವಿಚಾರಗಳಿಗೆ ಹೋರಾಟ ಮಾಡುವುದು ಸರಿಯಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next