Advertisement

ರಾಜ್ಯದಲ್ಲಿ ಕುಸಿದ ಕಾನೂನು-ಸುವ್ಯವಸ್ಥೆ

12:41 PM Apr 22, 2017 | Team Udayavani |

ದಾವಣಗೆರೆ: ರಾಜ್ಯಾದ್ಯಂತ ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌(ಎಬಿವಿಪಿ) ಕಾರ್ಯಕರ್ತರು ಶುಕ್ರವಾರ ಶ್ರೀ ಜಯದೇವ ವೃತ್ತದಲ್ಲಿ ಪ್ರತಿಭಟಿಸಿದ್ದಾರೆ. 

Advertisement

ಶಾಂತಿ, ಕಾನೂನು ಸುವ್ಯವಸ್ಥೆ, ದಕ್ಷ ಆಡಳಿತಕ್ಕೆ ಕರ್ನಾಟಕ ಹೆಸರುವಾಸಿ. ಆದರೆ, ಈಚೆಗೆ ಕಾನೂನು ರಕ್ಷಣೆ ಮಾಡುವಂತಹ ಗುರುತರ ಜವಾಬ್ದಾರಿ ಹೊಂದಿರುವ ಪ್ರಾಮಾಣಿಕ ಅಧಿಕಾರಿಗಳು, ವರ್ಗದವರ ಮೇಲೆಯೇ ಹಲ್ಲೆ, ಕೊಲೆ ಪ್ರಯತ್ನ ನಡೆಯುತ್ತಿವೆ.

ದಾವಣಗೆರೆ, ಉಡುಪಿ, ಮಂಗಳೂರು ಒಳಗೊಂಡಂತೆ ಇತರೆಡೆ ನಿರಂತರವಾಗಿ ಈ ರೀತಿಯ ಪ್ರಕರಣಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಯಾವುದನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಕ್ರೊಶ ವ್ಯಕ್ತಪಡಿಸಿದರು. 

ಅಕ್ರಮ ಮರಳು ಸಾಗಾಣಿಕೆ ತಡೆಗೆ ದಾಳಿ ನಡೆಸಿದ್ದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಉಪ ವಿಭಾಗಾಧಿಕಾರಿ ಶಿಲ್ಪನಾಗ್‌ ಮೇಲೆ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ ಕೆಲವು ದಿನಗಳಲ್ಲೇ ದಾವಣಗೆರೆ ತಾಲ್ಲೂಕಲ್ಲೂ ಅಂತಹ ಘಟನೆ ನಡೆದಿದೆ.

ಹಳೆಬಾತಿ ಗ್ರಾಮದ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೋದಾಮಿನ ಮೇಲೆ ದಾಳಿ ನಡೆಸಿದ್ದ ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ತಹಸೀಲ್ದಾರ್‌ ಸಂತೋಷ್‌ಕುಮಾರ್‌ ಇತರೆ ಅಧಿಕಾರಿಗಳು, ಸಿಬ್ಬಂದಿ ಮೇಲೆ ಲಾರಿ ಹರಿಸಿ, ಕೊಲೆಗೆ ಯತ್ನಿಸಲಾಗಿದೆ.

Advertisement

ಇಂತಹ ಕೃತ್ಯಕ್ಕೆ ಮುಂದಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅತ್ಯಂತ ಜವಾಬ್ದಾರಿಯಿಂದ ವಿಶೇಷ ಒತ್ತು ನೀಡಬೇಕು. ಹಲ್ಲೆಗೆ ಒಳಗಾದ ಅಧಿಕಾರಿಗಳು, ಸಿಬ್ಬಂದಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು. 

ನಿಷ್ಪಕ್ಷಪಾತವಾಗಿ ಹಲ್ಲೆ ಪ್ರಕರಣಗಳ ತನಿಖೆ ನಡೆಸಬೇಕು. ತನಿಖೆಯ ಮೇಲೆ ಯಾವುದೇ ಕಾರಣಕ್ಕೂ ರಾಜಕೀಯ ಪ್ರಭಾವ ಬೀರದಂತೆ ನೋಡಿಕೊಳ್ಳಬೇಕು. ದಕ್ಷ, ಪ್ರಾಮಾಣಿಕ ಆಡಳಿತ ದ ಮೂಲಕ ರಾಜ್ಯದಲ್ಲಿ ಭಯಮುಕ್ತ ವಾತಾವರಣ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ನಗರ ಘಟಕ ಅಧ್ಯಕ್ಷ ಅನಿಲ್‌ಕುಮಾರ್‌, ಬಿ.ಎಸ್‌. ಪ್ರಶಾಂತ್‌, ಎಚ್‌. ವಿನಯ್‌, ರಾಮು, ವಿವೇಕ್‌, ರೋಜಾ, ಭಾರತಿ, ಯತೀಶ್‌ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next