Advertisement

ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಚಾಲನೆ

01:51 PM Jun 15, 2018 | |

ಹುಣಸೂರು: ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಲಕ್ಷ್ಮಣತೀರ್ಥ ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಆರಂಭದಲ್ಲೇ ಏತ ನೀರಾವರಿ ಯೋಜನೆಯ ಮೂಲಕ ಕೆರೆಗಳಿಗೆ ನೀರು ತುಂಬಿಸುವುದಾಗಿ ಶಾಸಕ ಎಚ್‌.ವಿಶ್ವನಾಥ್‌ ತಿಳಿಸಿದರು.

Advertisement

ತಾಲೂಕಿನ ರಾಮಪಟ್ಟಣ ಬಳಿ ಇರುವ ಪಂಪ್‌ ಹೌಸ್‌ನಲ್ಲಿ ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಸ್ವಿಚ್‌ ಆನ್‌ ಮಾಡಿ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಜೀವನದಿ ಲಕ್ಷ್ಮಣತೀರ್ಥ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಮರದೂರು ಹಾಗೂ ಬೀಜಗನಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಕೃಷಿಗೂ ನೀರು: ಈಗಾಗಲೇ ಹನಗೋಡು ಅಣೆಕಟ್ಟೆಯಿಂದಲೂ ಮುಖ್ಯನಾಲೆಗೆ ನೀರು ಹರಿಸಲಾಗಿದೆ. ಹುಣಸೂರು ಬಳಿ ನದಿ ದಡದಲ್ಲಿ ನಿರ್ಮಿಸಿರುವ ಮರದೂರು ಮತ್ತು ಬೀಜಗನಹಳ್ಳಿ ಏತ ನೀರಾವರಿ ಘಟಕಗಳಿಂದ ಕೆರೆಗಳಿಗೆ ಹಾಗೂ ಈ ಭಾಗದ  ಕೃಷಿ ಚಟುವಟಿಕೆಗೆ ನೀರೊದಗಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. ಇದಲ್ಲದೆ ಹೊಸರಾಮನಹಳ್ಳಿ ಬಳಿ ನದಿಗೆ ನಿರ್ಮಿಸಿರುವ ಏತ ನೀರಾವರಿ ಮೂಲಕವೂ ಜೀನಹಳ್ಳಿ ಹಾಗೂ ಬಿಳಿಕೆರೆ-ಹಳೇಬೀಡು ಕೆರೆಗಳಿಗೂ ನೀರು ತುಂಬಿಸಲಾಗುತ್ತಿದೆ ಎಂದರು.

ಹಳೆ ಯೋಜನೆಗೂ ಕಾಯಕಲ್ಪ: ಇಲ್ಲಿನ ಮತ್ತೂಂದು ಹಳೆಯ ಏತನೀರಾವರಿ ಘಟಕ ದುಸ್ಥಿತಿಯಲ್ಲಿರುವ ಬಗ್ಗೆ ಮಾಹಿತಿ ಪಡೆದ ಶಾಸಕರು ಈ ಘಟಕಕ್ಕೆ ಕಾಯಕಲ್ಪ ನೀಡಿ ಈ ಭಾಗದ ಜಮೀನಿಗೂ ನೀರೊದಗಿಸಬಹುದಾಗಿದ್ದು, ಇದಕ್ಕಾಗಿ ಶೀಘ್ರ ಪುನಃಶ್ಚೇತನಗೊಳಿಸಲು ಅಂದಾಜುಪಟ್ಟಿ ಹಾಗೂ ನೀಲನಕ್ಷೆಯನ್ನು ತಯಾರಿಸಬೇಕೆಂದು ಸಣ್ಣ ನೀರಾವರಿ ಇಲಾಖೆಯ ಎಇಇ ಶ್ರೀನಿವಾಸಲುಗೆ ಸೂಚಿಸಿದರು. 

ಈ ವೇಳೆ ಮರದೂರು ಗ್ರಾಪಂ ಅಧ್ಯಕ್ಷೆ ಸುಜಾತ, ಮಾಜಿ ಅಧ್ಯಕ್ಷೆ ಶಕುಂತಲ, ಜಿಪಂಮಾಜಿ ಸದಸ್ಯ ಬಿ.ಕೆ.ಪರಮೇಶ್‌, ಯುವ ಜೆಡಿಎಸ್‌ ಅಧ್ಯಕ್ಷ ಲೋಕೇಶ್‌, ಮುಖಂಡರಾದ ಶಿವಶೇಖರ್‌, ಹೊನ್ನಯ್ಯ, ವೆಂಕಟೇಶಾಚಾರಿ, ಪ್ರಕಾಶ್‌, ಸಮಿವುಲ್ಲ, ಬಾಬು, ಸಣ್ಣ ನೀರಾವರಿ ಇಲಾಖೆಯ ಎಇಇ ಶ್ರೀನಿವಾಸ್‌, ಎಇ ಕೃಷ್ಣಮೂರ್ತಿ, ಸೆಸ್ಕ್ ಎಇಇಗಳಾದ ಮಹದೇವಯ್ಯ, ಸಿದ್ದಯ್ಯ, ಜೆಇ ಪುರುಷೋತ್ತಮ್‌ ಹಾಜರಿದ್ದರು.

Advertisement

ರೈತರಿಂದ ತರಾಟೆ: ಇದೇ ವೇಳೆ ಯೋಜನೆಯಲ್ಲಿ ಕಳಪೆ ಪೈಪ್‌, ಕಡಿಮೆ ಸಾಮರ್ಥ್ಯದ ಪಿವಿಸಿಪೈಪ್‌ ಅಳವಡಿಸಿದ್ದರಿಂದ ಅಲ್ಲಲ್ಲಿ ಪೈಪ್‌ಗ್ಳು ಒಡೆದು ಹೋಗಿದೆ. ಇದರಿಂದ ಕೆರೆಗಳು ಭರ್ತಿಯಾಗಲಿಲ್ಲ, ಅನಕೃತವಾಗಿ ಮಧ್ಯದಲ್ಲೇ ಕೆಲ ರೈತರಿಗೆ ಪೈಪ್‌ ಮೂಲಕ ನೀರು ಹರಿಸುತ್ತಿದ್ದಾರೆ. ಇದಕ್ಕೆಲ್ಲ ನೀವೇ ಹೊಣೆ ಎಂದು ಎಂಜಿನಿಯರ್‌ಗಳನ್ನು ರೈತ ಮುಖಂಡರಾದ ಶಿವಶೇಖರ್‌ ರೈತರು ತರಾಟೆ ತೆಗೆದುಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next