ಪಣಜಿ: ಗೋವಾದಲ್ಲಿ ಕ್ರೂಸ್ ಪ್ರವಾಸೋದ್ಯಮ ಇಂದಿನಿಂದ (ಸೆಪ್ಟೆಂಬರ್ 30) ಪ್ರಾರಂಭವಾಗಿದೆ. ಪ್ರವಾಸಿ ಋತುವಿನ ಮೊದಲ ದೇಶೀಯ ಹಡಗು ಗೋವಾವನ್ನು ಪ್ರವೇಶಿಸಿದೆ. ಮುಂಬೈನಿಂದ ಕಾರ್ಡೆಲಿಯಾ ಎಂಪ್ರೆಸ್ ಕ್ರೂಸ್‍ನಿಂದ 785 ಪ್ರವಾಸಿಗರು ಮತ್ತು 360 ಸಿಬಂದಿ ಗೋವಾಕ್ಕೆ ಆಗಮಿಸಿದ್ದಾರೆ.
ಈ ವರ್ಷ, 52 ಕ್ರೂಸ್‍ಗಳು, 36 ದೇಶೀಯ ಮತ್ತು 16 ವಿದೇಶಿಗಳು, ಕ್ರೂಸ್ ಹಡಗುಗಳು ಪ್ರವಾಸೋದ್ಯಮ ಋತುವಿನಲ್ಲಿ ಗೋವಾವನ್ನು ಪ್ರವೇಶಿಸಲಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಸಕ್ತ ವರ್ಷದ ಸಮುದ್ರ ಪ್ರವಾಸೋದ್ಯಮ ಸೀಸನ್ ಸೆಪ್ಟೆಂಬರ್ 30 ರಿಂದ ‘ಕಾರ್ಡೆಲಿಯಾ ಎಂಪ್ರೆಸ್’ ನೌಕೆಯೊಂದಿಗೆ ಪ್ರಾರಂಭವಾಗಿದೆ. ಈ ಸಮುದ್ರ ಪ್ರವಾಸೋದ್ಯಮ ಋತುವಿನಲ್ಲಿ ಒಟ್ಟು 51 ದೇಶೀಯ ಮತ್ತು ವಿದೇಶಿ ಪ್ರವಾಸಿ ಹಡಗುಗಳು ಗೋವಾದ
ಮೊರ್ಮುಗೋ ಬಂದರಿಗೆ ಆಗಮಿಸಲಿದೆ. ಇದರಲ್ಲಿ 35 ಸುತ್ತಿನ ದೇಶೀಯ ಪ್ರವಾಸಿ ಹಡಗು ಕಾರ್ಡೆಲಿಯಾ ಮತ್ತು 16 ವಿದೇಶಿ ಹಡಗುಗಳು ಇರುತ್ತವೆ. ಇದರಲ್ಲಿ ಒಟ್ಟು 7 ಲಕ್ಷದ 45 ಸಾವಿರ ದೇಶಿ ಹಾಗೂ ವಿದೇಶಿ ಪ್ರವಾಸಿಗರು ಸಮುದ್ರ ಮಾರ್ಗವಾಗಿ ಗೋವಾ ಪ್ರವೇಶಿಸಲಿದ್ದು, ಸಮುದ್ರ ಪ್ರವಾಸೋದ್ಯಮ ಆರಂಭವಾಗುವುದರಿಂದ ಪ್ರವಾಸೋದ್ಯಮ ವ್ಯಾಪಾರ ವೃದ್ಧಿಯಾಗುವ ನಿರೀಕ್ಷೆಯನ್ನು ಪ್ರವಾಸೋದ್ಯಮ ಇಲಾಖೆ ಹೊಂದಿದೆ.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ 2020 ರಿಂದ ಸಮುದ್ರ ಪ್ರವಾಸೋದ್ಯಮವನ್ನು ಬಂದ್ ಮಾಡಿದ್ದರಿಂದ ಟ್ಯಾಕ್ಸಿ, ಬಸ್ ರೆಸ್ಟೋರೆಂಟ್ ಮತ್ತು ಇತರ ಪ್ರವಾಸೋದ್ಯಮ ಸಂಬಂಧಿತ ವ್ಯವಹಾರಗಳ ಮೇಲೆ ಪರಿಣಾಮ ಬೀರಿವೆ. ಇದರಿಂದಾಗಿ ದೇಶಿ ಹಡಗುಗಳ ಜತೆಗೆ ವಿದೇಶಿ ಹಡಗುಗಳ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ನಂತರ 2021 ರಿಂದ ಸಮುದ್ರ ಪ್ರವಾಸೋದ್ಯಮ ಸೀಸನ್ ಪ್ರಾರಂಭಗೊಂಡಿದ್ದು ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆಯಿಂದಾಗಿ, ಕೇಂದ್ರ ಸರ್ಕಾರವು ದೇಶೀಯ ಸಮುದ್ರ ಪ್ರವಾಸೋದ್ಯಮವನ್ನು ಪ್ರಾರಂಭಿಸುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದೆ.
2021 ರಲ್ಲಿ, ದೇಶೀಯ ಪ್ರವಾಸಿ ಹಡಗು ಕಾರ್ಡೆಲಿಯಾ ಸೆಪ್ಟೆಂಬರ್ 27 ರಿಂದ ಡಿಸೆಂಬರ್ ವರೆಗೆ ಒಟ್ಟು 20 ಟ್ರಿಪ್‍ಗಳನ್ನು ಮಾಡಿದೆ. ನಂತರ 2022 ರಲ್ಲಿ ಜನವರಿಯಿಂದ ಮೇ ವರೆಗೆ 22 ಬಾರಿ ಗೋವಾಕ್ಕೆ ಪ್ರವಾಸಿಗರನ್ನು ಕರೆತಂದಿದೆ. 42 ಸುತ್ತುಗಳಲ್ಲಿ ಸುಮಾರು 84 ಸಾವಿರ ಪ್ರವಾಸಿಗರು ಗೋವಾ ಪ್ರವೇಶಿಸಿದ್ದಾರೆ.
ಇದೇ ವೇಳೆ ವಿದೇಶಿ ಪ್ರವಾಸಿ ಹಡಗುಗಳು ಐರೋಪ್ಯ ದೇಶಗಳಿಂದ ದುಬೈ, ಮಸ್ಕತ್, ಶ್ರೀಲಂಕಾಕ್ಕೆ ಪ್ರಯಾಣಿಸಿ ನಂತರ ಮುಂಬೈ, ನವಮಂಗಳೂರು ಸೇರಿದಂತೆ ಗೋವಾದ ಮುಗಾರ್ಂವ್ ಬಂದರಿಗೆ ಆಗಮಿಸಲಿವೆ. ಪ್ರಸ್ತುತ, ವಿದೇಶಿ ಹಡಗುಗಳು ಹೆಚ್ಚಾಗಿ ಕೆರಿಬಿಯನ್ ದೇಶದಲ್ಲಿ ಸಂಚರಿಸುತ್ತಿವೆ. ಆ ಸ್ಥಳದಲ್ಲಿ ಕರೋನಾ ಹರಡದ ಕಾರಣ, ಸಮುದ್ರ ಪ್ರವಾಸೋದ್ಯಮವು ಜೋರಾಗಿ ನಡೆಯುತ್ತಿದೆ. ಪ್ರವಾಸಿ ಹಡಗು
ಮೊರ್ಮುಗೋ ಬಂದರಿಗೆ ಪ್ರವೇಶಿಸುವುದರಿಂದ ಪ್ರವಾಸೋದ್ಯಮ ಅವಲಂಭಿತ ಉದ್ಯೋಗಿಗಳು ಸಂತಸಗೊಂಡಿದ್ದಾರೆ.