Advertisement
ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಜರುಗಿದ ಬೆಳಗಾವಿ ವಿಭಾಗ ಮಟ್ಟದ ದಸರಾ ಸಿ.ಎಂ. ಕಪ್ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Related Articles
Advertisement
ಬೆಳಗಾವಿ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಈ ಭಾಗದ 7 ಜಿಲ್ಲೆಗಳ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಗದಗ ಜಿಲ್ಲೆಯಲ್ಲಿ ವಿಭಾಗ ಮಟ್ಟದ ದಸರಾ ಸಿ.ಎಂ. ಕ್ರೀಡಾಕೂಟ ಏರ್ಪಡಿಸಿದ್ದು, ಖೋಖೋ, ಟೆಕ್ವಾಂಡೋ ಹಾಗೂ ನೆಟ್‌ಬಾಲ್ ಸ್ಪರ್ಧೆಗಳು ನಡೆಯಲಿವೆ ಎಂದರು. ನಿರ್ಣಾಯಕರಾಗಿ ಅನುಭವಿಗಳನ್ನು ನಿಯೋಜಿಸಲಾಗಿದೆ. ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿದ್ದು, ನಿರ್ಣಾಯಕರು ಪಕ್ಷಪಾತ ಮಾಡದೇ ಆರೋಗ್ಯಯುತ ಕ್ರೀಡಾ ಸ್ಫೂರ್ತಿ ಮೆರೆಯುವ ಉತ್ತಮ ನಿರ್ಣಯ ನೀಡಲಿ ದ್ದಾರೆ ಎಂಬ ವಿಶ್ವಾಸ ಹೊಂದಿದ್ದೇವೆ. ಕ್ರೀಡಾಪಟುಗಳಿಗೆ ನಿರ್ಣಾಯಕರ ತೀರ್ಮಾನದ ಕುರಿತು ಅನುಮಾನಗಳಿದ್ದಲ್ಲಿ ತಕ್ಷಣ ಲಿಖಿತವಾಗಿ ಸಲ್ಲಿಸುವ ಮೂಲಕ ಪರಿಹಾರ ಕಂಡುಕೊಳ್ಳಬೇಕು. ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಎಲ್ಲ ಸ್ಪರ್ಧಾಳುಗಳಿಗೆ ಶುಭವಾಗಲಿ ಎಂದರು. ವಾರ್ತಾಧಿ ಕಾರಿ ವಸಂತ ಮಡೂರ, ನಿರ್ಣಾಯಕರಾದ ಶ್ರೀಪಾದ ರವಿರಾವ್, ಪ್ರಭಾಕರ ಶೇಡಬಾಳ, ಪರಪ್ಪ ಕ್ಷೇತ್ರತೇಜ, ವೈ.ಎಫ್. ಕಲಕಂಬಿ, ವೈ.ಕೆ. ಚೌಡಾಪುರ, ಎಚ್.ಜಿ. ಕಾಂಬಳೇಕರ, ಎಸ್.ಬಿ. ಪೂಜಾರ, ಎಸ್.ಬಿ. ಆಲೂರ ಇದ್ದರು.