Advertisement

ಮಿಸ್ಟ್‌ ಕೆನಾನ್‌ ಯಂತ್ರಕ್ಕೆ ಚಾಲನೆ

06:04 AM Jun 30, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಕೋವಿಡ್‌ 19 ಸೋಂಕು ತಡೆಯಲು ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡುವ ಮಿಸ್ಟ್‌ ಕೆನಾನ್‌ ಯಂತ್ರಕ್ಕೆ ಸೋಮವಾರ ಚಾಲನೆ ನೀಡಲಾಯಿತು. ವಿಧಾನಸೌಧ ಪೂರ್ವ ದ್ವಾರದ ಬಳಿ ಅತ್ಯಾಧುನಿಕ ಎರಡು ಯಂತ್ರಗಳ ಕಾರ್ಯಾಚರಣೆಗೆ ಕಂದಾಯ ಸಚಿವ ಆರ್‌.ಅಶೋಕ್‌ ಚಾಲನೆ ನೀಡಿದರು.

Advertisement

ಪ್ರತಿ ಯಂತ್ರವೂ 8 ಸಾವಿರ ಲೀ.ಸಾಮರ್ಥ್ಯ ಹೊಂದಿದ್ದು, 50 ಮೀಟರ್‌ ದೂರದವರೆಗೆ ಹಾಗೂ 320 ಡಿಗ್ರಿ ಸುತ್ತಳತೆಯಲ್ಲಿ ಸೋಂಕು ನಿವಾರಕ  ದ್ರಾವಣ ಸಿಂಪಡಣೆ ಮಾಡಬಲ್ಲದು. ಇದರ ನಿರ್ವಹಣೆಗೆ ಇಬ್ಬರು ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ. ರಿಮೋಟ್‌ ಕಂಟ್ರೋಲ್‌ ತಂತ್ರಜ್ಞಾನ ಬಳಸಿ ಚಾಲ ಕರೇ ಇದನ್ನು ನಿಭಾಯಿಸಬಹುದಾಗಿದೆ. ಯಂತ್ರದ ಮೂಲಕ  ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಧ್ವನಿವರ್ಧಕ ಅಳವಡಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಸಿಎಂ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌, ಮೇಯರ್‌ ಎಂ. ಗೌತಮ್‌ಕುಮಾರ್‌, ಉಪ ಮೇಯರ್‌  ರಾಮಮೋಹನ ರಾಜು, ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ, ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌, ವಿಶೇಷ ಆಯುಕ್ತ ಡಿ.ರಂದೀಪ್‌, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next