ಒತ್ತಡದ ಬದುಕಿಗೆ ಹಾಸ್ಯ ಎಂಬುದು ಟಾನಿಕ್ಕಿದ್ದಂತೆ. ಹಾಗಾದರೆ ಈ ಕಾರ್ಯಕ್ರಮಕ್ಕೆ ಹಾಜರಾಗಿ ನಕ್ಕು ಹಗುರಾಗಿ. ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಅಂತರಂಗ ತಂಡ 17ನೇ ಆವೃತ್ತಿಯ ಹಾಸ್ಯಮೇಳವನ್ನು ಆಯೋಜಿಸಿದೆ.
ಈ ಬಾರಿಯ ವಿಷಯ- “ನಗುವಿಗೇಕೆ ರೇಷನ್?’. ಹಾಸ್ಯಕಾರ್ಯಕ್ರಮ “ಹರಟೆ’ ಖ್ಯಾತಿಯ ಹಿರೇಮಗಳೂರು ಕಣ್ಣನ್, ಪ್ರೊ. ಕೃಷ್ಣೇಗೌಡ, ರಿಚರ್ಡ್ ಲೂಯಿಸ್, ವೈ.ವಿ. ಗುಂಡೂರಾವ್, ಎಂ.ಎಸ್. ನರಸಿಂಹಮೂರ್ತಿ, ಲೇಖಕರಾದ ಗುರುರಾಜ ಕರಜಗಿ, ಷಡಕ್ಷರಿ, ಅಚ್ಯುತರಾವ್ ಪದಕಿ ಮುಂತಾದ ಗಣ್ಯರು ಹಾಸ್ಯದೌತಣವನ್ನು ನೀಡಿ ಜನರ ಮನರಂಜಿಸಲಿದ್ದಾರೆ.
ರಾಧಾಕೃಷ್ಣ ಉರಾಳ ಅವರು ಯಕ್ಷಗಾನದಲ್ಲಿನ ಹಾಸ್ಯ ಪ್ರಸಂಗಗಳ ಕುರಿತು ಮಾತಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕಲಾವಿದ ರಾಘವೇಂದ್ರ ಹೆಗಡೆ ಅವರಿಂದ ಮರಳಲ್ಲಿ ಚಿತ್ರಬಿಡಿಸುವ ಕಾರ್ಯಕ್ರಮ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮ ಮೂಡಿ ಬರುತ್ತಿದೆ.
ಎಲ್ಲಿ?: ಮಂಗಳ ಮಂಟಪ, ಎನ್.ಎಂ.ಕೆ.ಆರ್.ವಿ ಕಾಲೇಜು, ಜಯನಗರ 4ನೇ ಬ್ಲಾಕ್
ಯಾವಾಗ?: ನವೆಂಬರ್ 5, ಬೆಳಗ್ಗೆ 10- ಸಂಜೆ 7