Advertisement

ಕ್ರೇಜಿ ಮೊಗದಲ್ಲಿ ನಗು

09:57 AM Nov 15, 2019 | Lakshmi GovindaRaju |

ಕಳೆದ ಶುಕ್ರವಾರ (ನ.8) ಕ್ರೇಜಿಸ್ಟಾರ್‌ ರವಿಚಂದ್ರನ್‌ ಅಭಿನಯದ “ಆ ದೃಶ್ಯ’ ಚಿತ್ರ ಅದ್ಧೂರಿಯಾಗಿ ತೆರೆಗೆ ಬಂದಿದೆ. ಚಿತ್ರ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಾ ಎರಡನೇ ವಾರಕ್ಕೆ ಕಾಲಿಡಲು ಅಣಿಯಾಗುತ್ತಿದೆ. ಇದರ ನಡುವೆಯೇ “ಆ ದೃಶ್ಯ’ ಚಿತ್ರದ ಬಿಡುಗಡೆಯ ನಂತರದ ಬೆಳವಣಿಗೆಗಳ ಬಗ್ಗೆ ಮಾತನಾಡಲು ಮಾಧ್ಯಮಗಳ ಮುಂದೆ ಬಂದಿದ್ದ ನಟ ರವಿಚಂದ್ರನ್‌ ಮತ್ತು ಚಿತ್ರತಂಡ, ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳ ಕುರಿತು ಮಾತನಾಡಿತು.

Advertisement

“ಆ ದೃಶ್ಯ’ ಒಂದು ಸಸ್ಪೆನ್ಸ್‌ ಚಿತ್ರ. ಚಿತ್ರದ ಕಥೆಯಲ್ಲಿ ಒಂದೊಂದೆ ಎಳೆಗಳು ಬಿಚ್ಚಿಕೊಳ್ಳುತ್ತಾ, ಕೊನೆಯಲ್ಲಿ ಸಸ್ಪೆನ್ಸ್‌ ಏನು ಅಂಥ ಗೊತ್ತಾಗುತ್ತದೆ. ಸಿನಿಮಾವನ್ನು ನೋಡಿದ ಪ್ರತಿಯೊಬ್ಬರೂ, ಸಿನಿಮಾವನ್ನ ಎಂಜಾಯ್‌ ಮಾಡ್ತಿದ್ದಾರೆ. ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಸಾಮಾನ್ಯವಾಗಿ ಇಂಥ ಸಸ್ಪೆನ್ಸ್‌ ಸಿನಿಮಾಗಳಿಗೆ ಆರಂಭದಲ್ಲೇ ಬಿಗ್‌ ಓಪನಿಂಗ್‌ ಅಂಥ ಸಿಗೋದಿಲ್ಲ. ಕೆಲ ದಿನಗಳು ಕಳೆಯುತ್ತಿದ್ದಂತೆ, ಆಡಿಯನ್ಸ್‌ ಕೊಡುವ ಮೌಥ್‌ ಪಬ್ಲಿಸಿಟಿ ಮೇಲೆ ಈ ಥರದ ಸಿನಿಮಾಗಳು ನಿಂತು ಕೊಳ್ಳುತ್ತವೆ.

“ದೃಶ್ಯ’ ಸಿನಿಮಾದ ರಿಲೀಸ್‌ ಸಮಯದಲ್ಲೂ ಹೀಗೇ ಆಗಿತ್ತು. ಒಂದೆರಡು ವಾರ ಕಳೆದ ನಂತರ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗೋದಕ್ಕೆ ಶುರುವಾಗಿ ಸಿನಿಮಾ ಸೂಪರ್‌ ಹಿಟ್‌ ಆಯ್ತು. ಈ ಗ್ಯಾಪಲ್ಲಿ ಬೇರೆ ಬೇರೆ ಸಿನಿಮಾಗಳು ರಿಲೀಸ್‌ ಆಗೋದು, ಅವುಗಳ ಜೊತೆ ಗುದ್ದಾಟ ಎಲ್ಲಾ ಇದ್ದೇ ಇರುತ್ತೆ’ ಅನ್ನೋದು ರವಿಚಂದ್ರನ್‌ ಮಾತು. ಇನ್ನು “ಆ ದೃಶ್ಯ’ವನ್ನು ನೋಡುಗರು ಹೇಗೆ ಅರ್ಥ ಮಾಡಿಕೊಳ್ಳುತ್ತಾರೋ, ಹಾಗೆ ಅರ್ಥವಾಗುತ್ತೆ’ ಅನ್ನೋದು ರವಿಚಂದ್ರನ್‌ ಅವರ ಮಾತು.

ಚಿತ್ರದಲ್ಲಿ ರವಿಚಂದ್ರನ್‌ ಅವರ ಪಾತ್ರಕ್ಕೆ ಒಂದು ಪೊಲೀಸ್‌ ಅಧಿಕಾರಿಯಾಗಿ, ಮತ್ತೊಂದು ಒಬ್ಬ ತಂದೆಯಾಗಿ ಎರಡು ಶೇಡ್‌ ಇದೆ. “ಒಬ್ಬ ವ್ಯಕ್ತಿಯೊಳಗೆ ಎರಡು ವ್ಯಕ್ತಿತ್ವಗಳು ಇದ್ದಾಗ ನೋಡುಗರು ಯಾವ ಪಾತ್ರದ ಮೂಲಕ ಕಥೆಯನ್ನು ನೋಡುತ್ತಾರೋ ಅವರಿಗೆ ಸಿನಿಮಾ ಹಾಗೆ ಕಾಣುತ್ತದೆ. ಸಿನಿಮಾವನ್ನು ಅವರು ಹಾಗೆ ಅರ್ಥ ಮಾಡಿಕೊಳ್ಳುತ್ತಾರೆ’ ಎನ್ನುತ್ತಾರೆ ರವಿಚಂದ್ರನ್‌. ಇದೇ ವೇಳೆ ವೇದಿಕೆ ಮೇಲೆ ಹಾಜರಿದ್ದ ನಿರ್ಮಾಪಕ ಕೆ.ಮಂಜು, “ಚಿತ್ರ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲಿ ಒಳ್ಳೆಯ ಓಪನಿಂಗ್‌ ಪಡೆದುಕೊಂಡಿದೆ.

ಚಿತ್ರದ ಗಳಿಕೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದರೂ, ನಿಧಾನವಾಗಿ ಏರಿಕೆಯಾಗುತ್ತಿದೆ. ಸುಮಾರು 150ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ನಿಧಾನವಾಗಿ ಹಿಟ್‌ ಆಗುತ್ತದೆ’ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ನಿರ್ದೇಶಕ ಶಿವ ಗಣೇಶ್‌, ನಟಿ ಚೈತ್ರಾ ಆಚಾರ್‌, ನಟ ಯಶ್‌ ಶೆಟ್ಟಿ, ಅಜಿತ್‌ ಜಯರಾಜ್‌, ಸಂಗೀತ ನಿರ್ದೇಶಕ ಗೌತಮ್‌ ಶ್ರೀವತ್ಸ, ಸೇರಿದಂತೆ ವೇದಿಕೆ ಮೇಲಿದ್ದ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಚಿತ್ರದ ಬಿಡುಗಡೆಯ ನಂತರ ಸಿಕ್ಕ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next