Advertisement

ಎರಡು ದಿನಗಳ ಕುಸಿತಕ್ಕೆ ಕೊನೆಗೂ ಬ್ರೇಕ್‌: ಮುಂಬಯಿ ಶೇರು ಜಿಗಿತ

04:44 PM Aug 04, 2017 | udayavani editorial |

ಮುಂಬಯಿ : ಕೊನೇ ತಾಸಿನಲ್ಲಿ ನಡೆದ ಭರಾಟೆಯ ಶೇರು ಖರೀದಿಯ ಬಲದಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಕಳೆದ ಎರಡು ದಿನಗಳ ನಿರಂತರ ಹಿನ್ನಡೆಗೆ ತಡೆ ನೀಡಿ ದಿನದ ವಹಿವಾಟನ್ನು 87 ಅಂಕಗಳ ಏರಿಕೆಯೊಂದಿಗೆ 32,325.41 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 52.75 ಅಂಕಗಳ ಮುನ್ನಡೆಯನ್ನು ದಾಖಲಿಸಿದ ದಿನದ ವಹಿವಾಟನ್ನು 10,066.40 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು. 

ಗ್ರಾಹಕ ವಸ್ತುಗಳು, ತೈಲ ಮತ್ತು ಅನಿಲ, ಆಟೋ ರಂಗದ ಶೇರುಗಳು ದಿನಾಂತ್ಯದ ವೇಳೆಗೆ ಉತ್ತಮ ಖರೀದಿಯನ್ನು ಕಂಡು ಸೆನ್ಸೆಕ್ಸ್‌ ಮತ್ತು ನಿಫ್ಟಿಯನ್ನು ಎತ್ತಿ ಹಿಡಿದವು. 

ವಾರಂತ್ಯದ ನೆಲೆಯಲ್ಲಿ ಹೇಳುವುದಾದರೆ ಇಂದು ಶುಕ್ರವಾರ ಬಿಎಸ್‌ಇ ಶೇರು ಸೂಚ್ಯಂಕ 15.53 ಅಂಕಗಳ ಏರಿಕೆಯನ್ನು ದಾಖಲಿಸಿ ನಿರಂತರ ಐದನೇ ವಾರದಲ್ಲಿ ಲಾಭವನ್ನು ಕಂಡಿದೆ. ಎನ್‌ಎಸ್‌ಇ ಕೂಡ 51.90 ಅಂಕಗಳ ವಾರಾಂತ್ಯದ ಮುನ್ನಡೆಯನ್ನು ದಾಖಲಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next