Advertisement
ಗತಕಾಲದಲ್ಲಿ ಒಬ್ಬರನ್ನೊಬ್ಬರು ದ್ವೇಷಿಸುತ್ತಿದ್ದರು ಎಂದು ಜನ ನಂಬಿದ್ದರು. ಇದಕ್ಕೆ ಮಂಗೇಶ್ಕರ್ ಕುಟುಂಬದಲ್ಲಿ ನಡೆದ ಒಂದು ಘಟನೆಯೇ ಕಾರಣ ಎಂದು ಲತಾ ಅವರು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದರು.
Related Articles
Advertisement
1949 ರಲ್ಲಿ ಆಶಾ ಅವರು 16 ವರ್ಷದವರಾಗಿದ್ದಾಗ 31 ವರ್ಷದ ಗಣಪತರಾವ್ ಭೋಂಸ್ಲೆ ಅವರೊಂದಿಗೆ ಏಕಾಏಕಿ ಮನೆ ಬಿಟ್ಟು ತೆರಳಿ ಕುಟುಂಬದ ವಿರೋಧದ ನಡುವೆ ವಿವಾಹವಾಗಿದ್ದರು. ಆದಾಗ್ಯೂ, ದಂಪತಿಗಳು 1960 ರಲ್ಲಿ ಬೇರ್ಪಟ್ಟಿದ್ದರು. . ಆಶಾ ಅವರಿಗೆ ಗಣಪತ್ರಾವ್ ಅವರೊಂದಿಗಿನ ದಾಂಪತ್ಯದಲ್ಲಿ ಮೂವರು ಮಕ್ಕಳಿದ್ದರು. ಬಳಿಕ ಆಶಾ 1980 ರಲ್ಲಿ ಸಂಗೀತಗಾರ ರಾಹುಲ್ ದೇವ್ ಬರ್ಮನ್ ಅವರನ್ನು ವಿವಾಹವಾದರು. ಆ ಬಳಿಕವೇ ಲತಾ ಮತ್ತು ಆಶಾ ಅವರ ಬಾಂಧವ್ಯ ಮತ್ತೆ ವೃದ್ಧಿಸಿತು ಎಂದು ಸಿನಿ ಲೋಕ ಹೇಳುತ್ತದೆ.
ಗಣಪತರಾವ್ ಭೋಂಸ್ಲೆ ಅವರು ಆಶಾ ಅವರಿಗೆ ಮಂಗೇಶ್ಕರ್ ಕುಟುಂಬದೊಂದಿಗೆ ಮಾತನಾಡಲೂ ಅವಕಾಶ ನೀಡುತ್ತಿರಲಿಲ್ಲವಂತೆ. ಲತಾ ಅವರ ಜೊತೆಗೆ ಹಾಡಲೂ ಅವಕಾಶ ನೀಡುತ್ತಿರಲಿಲ್ಲವಂತೆ. ಒಂದೊಮ್ಮೆ ಡುಯೆಟ್ ಸಾಂಗ್ ಹಾಡಲು ಅವಕಾಶ ಬಂದರೂ ಅಕ್ಕ-ತಂಗಿಗೆ ಮಾತನಾಡುವ ಅವಕಾಶವೂ ಇರುತ್ತಿರಲಿಲ್ಲ. ಈ ನೋವಿನ ಸಂಗತಿಯನ್ನು ಲತಾ ಅವರೇ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದರು. ನಮ್ಮಿಬ್ಬರಲ್ಲಿ ಅತೀವವಾದ ಪ್ರೀತಿ ವಾತ್ಸಲ್ಯವಿತ್ತು, ಆದರೆ ಅದಕ್ಕೆ ಗಣಪತರಾವ್ ಭೋಂಸ್ಲೆ ಅವರೇ ಅಡ್ಡಿಯಾಗಿದ್ದರು. ಜನ ಅದನ್ನು ತಪ್ಪಾಗಿ ತಿಳಿದು ನಮ್ಮಿಬ್ಬರ ನಡುವೆ ಪೈಪೋಟಿ ಇತ್ತು, ದ್ವೇಷ ಹುಟ್ಟಿಕೊಂಡಿತ್ತು ಎಂದು ಬಣ್ಣ ನೀಡಿದ್ದರು ಮತ್ತು ಜನ ಅದನ್ನೇ ನಂಬಿದ್ದರು ಎಂದು ಹೇಳಿಕೊಂಡಿದ್ದಾರೆ.
ಲತಾ ಮತ್ತು ಆಶಾ ಬಾಲ್ಯದಿಂದಲೂ ಬಹಳ ಬಲವಾದ ಬಂಧವನ್ನು ಹೊಂದಿದ್ದರು. ಎಷ್ಟರಮಟ್ಟಿಗೆ ಎಂದರೆ ಶಾಲೆಯ ಮೊದಲ ದಿನದಂದು ಲತಾ ತನ್ನ ಸಹೋದರಿ ಆಶಾರನ್ನು ತನ್ನೊಂದಿಗೆ ಕರೆತರಲು ಅನುಮತಿಸದ ಕಾರಣ ಆವರಣವನ್ನು ತೊರೆದಿದ್ದರಂತೆ.