ಹೊಸಬರ ತಂಡ “ಲಾಸ್ಟ್ ಸೀನ್’ ಎಂಬ ವಿಡಿಯೋ ಆಲ್ಬಂ ಮೂಲಕ ತಮ್ಮ ಪ್ರತಿಭೆಯನ್ನು ಪ್ರೇಕ್ಷಕರ ಮುಂದೆ ಪ್ರದರ್ಶಿಸಲು ಹೊರಟಿದೆ.
ಕನ್ನಡದಲ್ಲಿ ಹಲವು ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿರುವ, “ಮಿ. ಬೀಜಾ’ ಎನ್ನುವಕಿರುಚಿತ್ರ ನಿರ್ದೇಶಿಸಿರುವ ಎನ್. ವಿನಾಯಕ ಈ “ಲಾಸ್ಟ್ ಸೀನ್’ವಿಡಿಯೋ ಆಲ್ಬಂಗೆ ನಿರ್ದೇಶನ ಮಾಡಿದ್ದಾರೆ.
ಅತ್ಯಾಚಾರಕ್ಕೆ ಒಳಗಾದ ಹುಡುಗಿಯ ಸಾವು ಮತ್ತು ಅದರಿಂದ ಅವಳ ಪ್ರೇಮಿಯಾದವನು ಯಾವ ರೀತಿ ವೇದನೆ ಪಡುತ್ತಾನೆ ಎಂಬುದನ್ನು ಹೇಳಲಾಗಿರುವ “ಲಾಸ್ಟ್ ಸೀನ್’ ಮ್ಯೂಸಿಕ್ ವಿಡಿಯೋದಲ್ಲಿ ವಾಗೀಶ್ ಆಯುಷ್ ಮತ್ತು ಸಂಗೀತಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. “ವಿನು ಐಡಿಯಾ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ “ಲಾಸ್ಟ್ ಸೀನ್’ ಮ್ಯೂಸಿಕ್ ವಿಡಿಯೋ ಕನ್ನಡ, ತೆಲುಗು, ಹಿಂದಿ ಮತ್ತು ತಮಿಳು ಭಾಷೆಯಲ್ಲಿ ತಯಾರಾಗಿದೆ.
ಜುಬೇರ್ ಮೊಹಮದ್ ಈ ಮ್ಯೂಸಿಕ್ ವಿಡಿಯೋಗೆ ಸಂಗೀತ ಸಂಯೋಜಸಿದ್ದಾರೆ. ಮನು ಕೆ.ಬಿಛಾಯಾಗ್ರಹಣ,ಕೃಷ್ಣಸುಜಾನ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಮೋಹನ್ ಜಾಕ್ಸನ್ ಈ ಹಾಡಿಗೆ ನೃತ್ಯ ಸಂಯೋಜಿಸಿದ್ದು, ವಾಸುಕಿ ವೈಭವ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಬೆಂಗಳೂರು, ಡಾಬಸ್ಪೇಟೆ ಮತ್ತು ಮಂಗಳೂರು ಸುತ್ತಮುತ್ತ “ಲಾಸ್ಟ್ ಸೀನ್’ಮ್ಯೂಸಿಕ್ ವಿಡಿಯೋ ಆಲ್ಬಂ ಚಿತ್ರೀಕರಿಸಲಾಗಿದೆ. ಇನ್ನು “ಲಾಸ್ಟ್ ಸೀನ್’ ಮ್ಯೂಸಿಕ್ ವಿಡಿಯೋ ಆಲ್ಬಂ ನೋಡಿದ ನಟ ಶ್ರೀಮುರಳಿ ಹೊಸಬರ ಪ್ರಯತ್ನವನ್ನು ಮೆಚ್ಚಿಕೊಂಡು, ಯುವ ತಂಡಕ್ಕೆ ಶುಭ ಹಾರೈಸಿದ್ದಾರೆ.