Advertisement

ಲಾಸ್ಟ್ ನೈಟ್‌ ರೀಡರ್! ನಾಳೆ ಮ್ಯಾಚು, ರಾತ್ರಿ ಪ್ರಾಕ್ಟೀಸು

12:22 PM May 30, 2017 | Harsha Rao |

ವರ್ಷವಿಡೀ ಪ್ರೀತಿ, ಕ್ರಶ್‌, ಪ್ರವಾಸ ಅಂತ ಸುತ್ತಾಡುವ ಕೆಲ ವಿದ್ಯಾರ್ಥಿಗಳಿಗೆ, ಪುಸ್ತಕಗಳು ನೆನಪಾಗುವುದೇ ಎಕ್ಸಾಮ್‌ ವೇಳೆ! ಅಲ್ಲಿಯ ತನಕ ಅವುಗಳನ್ನು ಎಲ್ಲಿಟ್ಟಿರುತ್ತಾರೋ? ಅವುಗಳನ್ನು ಹುಡುಕಲು ಸಿಬಿಐ, ಇಲ್ಲವೇ ಸಿಐಡಿ ಬರಬೇಕು…

ಲಾಸ್ಟ್  ನೈಟ್‌ ರೀಡರ್! ಹೆಸರು ಕೇಳಿ ಇದ್ಯಾವುದೋ ಹೊಸ ಐಪಿಎಲ… ಟೀಮ್‌ ಎಂದುಕೊಳ್ಳಬೇಡಿ. ಇದು ಪರೀಕ್ಷೆಯ ಹಿಂದಿನ ದಿನದ ರಾತ್ರಿ ಕುಳಿತು ಓದುವವರ ತಂಡ. ಈ ತಂಡದ ಸದಸ್ಯರು ಎÇÉಾ ಕಾಲೇಜುಗಳಲ್ಲಿಯೂ ಸಿಗುತ್ತಾರೆ. ಒಂದು ರೀತಿ ಇವರು ಸರ್ವಾಂತರ್ಯಾಮಿಗಳು. ಪರೀಕ್ಷೆಯ ಹಿಂದಿನ ದಿನ ಇವರು ಮಾಡುವ ಕಸರತ್ತುಗಳು ಒಂದೆರಡಲ್ಲ. ವರ್ಷವಿಡೀ ಪ್ರೀತಿ, ಕ್ರಶ್‌, ಪ್ರವಾಸ ಅಂತ ಸುತ್ತಾಟಗಳಲ್ಲಿ ಸಮಯ ಕಳೆಯುವ ಇವರಿಗೆ ಪುಸ್ತಕಗಳು ನೆನಪಾಗುವುದೇ ಪರೀûಾ ಸಂದರ್ಭಗಳಲ್ಲಿ. ಅವುಗಳನ್ನು ಎಲ್ಲಿಟ್ಟಿರುತ್ತಾರೋ? ಅವುಗಳನ್ನು ಹುಡುಕಲು ಒಂದು ತನಿಖಾ ತಂಡವೇ ಬೇಕು. 

Advertisement

ಅಂತೂ ಯಾವುದೋ ಮೂಲೆಯಲ್ಲಿ ಅನಾಥವಾಗಿ ಬಿದ್ದುಕೊಂಡಿರುವ ಪುಸ್ತಕಗಳು ಸಿಕ್ಕಾಗ ಅವುಗಳ ಮೇಲಿನ ಧೂಳು ಕೊಡವಿ ಓದಲು ಕುಳಿತಾಗ, ಅಲ್ಲಿಂದ ಇವರ ರೋಚಕ ಕಹಾನಿಗಳು ಆರಂಭವಾಗುತ್ತವೆ. ಪುಸ್ತಕಗಳನ್ನು ನೋಡುತ್ತಿದ್ದ ಹಾಗೆ ತಲೆತಿರುಗಿದಂತಾಗಿ ಬಿಡುತ್ತದೆ. ನಂತರ ಸಿಲೆಬಸ್‌ ಏನಿದೆ ಅಂತ ಇಂಟರ್‌ನೆಟ್‌ನಲ್ಲಿ ತಡಕಾಡಿ ಅದನ್ನು ಪಡೆದುಕೊಳ್ಳಲು ಹರಸಾಹಸ ಮಾಡುತ್ತಾರೆ.  

ಫಸ್ಟ್ ಬೆಂಚಿನ ಹುಡುಗರು ನೋಟ್ಸ್‌ ಸಷ್ಟಿಸುತ್ತಾರೆ, ಕೊನೆಯ ಬೆಂಚಿನ ಹುಡುಗರು ಸವಿನೆನಪುಗಳನ್ನು ಸೃಷ್ಟಿಸುತ್ತಾರೆ ಅಂತ ಈ ಹಿಂದೆಲ್ಲಾ ಹೆಮ್ಮೆಯಿಂದ ಹೇಳಿಕೊಂಡು ಓಡಾಡುತ್ತಿದ್ದ ಲಾಸ್ಟ್‌ ಬೆಂಚ್‌ ಹುಡುಗರು, ಈಗ ಅದೇ ಫಸ್ಟ್ ಬೆಂಚಿನ ಹುಡುಗರ ಬಳಿ ನೋಟ್ಸ್‌ಗಳಿಗಾಗಿ ಅಂಗಲಾಚುತ್ತಾರೆ. ಇಷ್ಟು ದಿನ ಅಪರಿಚಿತ ಸ್ಥಳಗಳಾಗಿದ್ದ ಗ್ರಂಥಾಲಯಗಳು ಈಗ ಇವರ ಅಡ್ಡಾಗಳಾಗಿ ಬಿಡುತ್ತವೆ. ಪರೀಕ್ಷೆ ಮುಗಿಯುವವರೆಗೂ ಅÇÉೇ ಠಿಕಾಣಿ ಹೂಡುತ್ತಾರೆ. ಇದರಿಂದ, ಪ್ರತಿನಿತ್ಯ ಗ್ರಂಥಾಲಯಕ್ಕೆ ಹೋಗುವ ವಿದ್ಯಾರ್ಥಿಗಳು ಇವರನ್ನು ಅನ್ಯಗ್ರಹಜೀವಿಗಳಂತೆ ನೋಡುವುದರಲ್ಲಿ ಅಚ್ಚರಿಯೇನಿಲ್ಲ ಬಿಡಿ. 
ಇನ್ನು ಸೀನಿಯರ್‌ಗಳು ಇಲ್ಲವೇ ಫಸ್ಟ್ ಬೆಂಚಿನ ಹುಡುಗರ ಕೈಕಾಲು ಹಿಡಿದು ಅವರಿಂದ ನೋಟ್ಸ್‌ಗಳನ್ನು, ಹಳೆಯ ಪ್ರಶ್ನೆಪತ್ರಿಕೆಗಳನ್ನು ಪಡೆದು ಅವುಗಳ ಪ್ರತಿಲಿಪಿ ಪಡೆದುಕೊಳ್ಳಲು ಜೆರಾಕÕ… ಅಂಗಡಿಯ ಮುಂದೆ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತುಕೊಳ್ಳುವ ಇವರ ಪಾಡು ಯಾರಿಗೂ ಬೇಡ. ಪರೀûಾ ಸಂದರ್ಭದಲ್ಲಿ ಎÇÉಾ ಜೆರಾಕ್ಸ್‌ ಅಂಗಡಿಗಳು ಲಾÓr… ನೈಟ್‌ ರೀಡರ್ ತಂಡದ ಸದಸ್ಯರಿಂದ ಗಿಜಿಗುಡುತ್ತಿರುತ್ತವೆ.

ಫಸ್ಟ್ ಬೆಂಚಿನ ಹುಡುಗರು ಅಸೈನ್‌ಮೆಂಟ್‌ಗಳನ್ನು ತುಂಬಾ ಮುತುವರ್ಜಿ ವಹಿಸಿ, ಚಿತ್ರಸಮೇತ ಆಕರ್ಷಕವಾಗಿ ನೀಟಾಗಿ ಬರೆದು ತಂದರೆ, ಏನೋ ಒಂದು ಬರೆದುಕೊಟ್ಟರಾಯಿತು ಎಂದು ಬರೆದುಕೊಡುವ ಇವರ ಅಸೈನ್‌ಮೆಂಟ್‌ಗಳ ಪರಿಸ್ಥಿತಿ ಹೇಳತೀರದು. ಸೀನಿಯರ್‌ಗಳ ಇಲ್ಲವೇ ಜಾಣ ಹುಡುಗರ ಅಸೈನ್‌ಮೆಂಟುಗಳನ್ನು ಇದ್ದ ಹಾಗೆಯೇ ಭಟ್ಟಿ ಇಳಿಸುವ ಇವರ ಕಲಾತ್ಮಕತೆ ಯಾವುದಕ್ಕೂ ಕಡಿಮೆಯಿಲ್ಲ ಬಿಡಿ.  

ಅಷ್ಟಕ್ಕೂ ಅವರು ತಂದಿರುವ ಅಸೈನ್‌ಮೆಂಟುಗಳನ್ನು ಅವರೇ ಬರೆದಿರುತ್ತಾರೆ ಎಂಬ ಯಾವ ಗ್ಯಾರಂಟಿಯೂ ಇರುವುದಿಲ್ಲ. ಜೂನಿಯರ್‌ಗಳಿಂದಲೋ, ಇಲ್ಲವೇ ಮನೆಯಲ್ಲಿ ತಮ್ಮ ಇಲ್ಲವೇ ತಂಗಿಯಿಂದಲೋ ಒತ್ತಾಯ ಮಾಡಿ ಬರೆಸಿಕೊಂಡು ಬಂದಿರುತ್ತಾರೆ ಅಷ್ಟೆ. ಲೆಕ್ಚರರ್ ಒಂದಿಷ್ಟು ಸಹಿಷ್ಣುಗಳೂ, ಕರುಣಾಮಯಿಗಳೂ ಆಗಿದ್ದರೆ ಇವರು ಬಚಾವ್‌. ಇಲ್ಲದಿದ್ದರೆ ಇವರನ್ನು ಕಾಪಾಡಲು ದೇವರೇ ಬರಬೇಕು.

Advertisement

ವರ್ಷವಿಡೀ  ತರಗತಿಗಳಲ್ಲಿ ಪ್ರಾಧ್ಯಾಪಕರುಗಳು ಮಾಡಿದ ಪಾಠಗಳನ್ನು ಕೇವಲ  2- 3 ಗಂಟೆಗಳಲ್ಲಿ ಇವರಿಗೆ ಹೇಳಿಕೊಡಲು ಒಬ್ಬ ಫಸ್ಟ್ ರ್‍ಯಾಂಕ್‌ ರಾಜು ಬೇಕೇ ಬೇಕು. ಮುಖ್ಯವಾದ ವಿಷಯಗಳನ್ನು, ಕೊನೆಯ ಸಲದ ಪರೀಕ್ಷೆಯಲ್ಲಿ ಕೇಳಿದವುಗಳನ್ನು ಈ ಸಲದ ಪರೀಕ್ಷೆಯಲ್ಲಿ ಕೇಳುವುದಿಲ್ಲ ಎಂಬ ಭಂಡ ಧೈರ್ಯದಿಂದ ಅವುಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಓದಲು ಶುರುಮಾಡುತ್ತಾರೆ.

ಪರೀಕ್ಷೆಯ ಹಿಂದಿನ ರಾತ್ರಿ ಇವರಿಗೆ ಅದೆಂಥ ಮಹಾಶಕ್ತಿ ಬಂದಿರುತ್ತದೆಯೆಂದರೆ ರಾತ್ರಿಯೆಲ್ಲ ನಿ¨ªೆಗೆಟ್ಟು ಇಡೀ ಸಿಲೆಬಸ್‌ ಅನ್ನು ಓದಿಯೇ ಮಲಗಿಕೊಳ್ಳುತ್ತಾರೆ. ಇವರ ಪಡಿಪಾಟಲುಗಳು ಇಲ್ಲಿಗೇ ಮುಗಿಯುವುದಿಲ್ಲ. ಪರೀûಾ ಹಾಲ…ನಲ್ಲಿಯೂ ಇವರ ಗೋಳು ಮುಂದುವರಿಯುತ್ತದೆ. ಅವಸರದಲ್ಲಿ ಪೆನ್ನು, ಪೆನ್ಸಿಲ…, ಸ್ಕೇಲ… ಮರೆತು ಬರುವ ಇವರು, ಅವುಗಳಿಗಾಗಿ ಅಕ್ಕಪಕ್ಕ ಕುಳಿತುಕೊಂಡಿರುವ ಹುಡುಗರನ್ನು ಪೀಡಿಸುವುದುಂಟು. ಇವರ ಗುರಿ ಕೇವಲ ಪಾಸಾಗುವಷ್ಟು ಅಂಕಗಳನ್ನು ಸಂಪಾದಿಸುವುದು. ಆದರೂ ಮೊದಲ ಬೆಂಚಿನ ಹುಡುಗರಿಗಿಂತಲೂ ಹೆಚ್ಚಿಗೆ ಪುಟಗಳನ್ನು ತುಂಬಿಸುತ್ತಾರೆ!

ಪರೀಕ್ಷೆಯೆÇÉಾ ಮುಗಿದ ಮೇಲೆ ಅಯ್ಯೋ, ಈ ಸಾರಿ ನಾನು ಫೇಲಾಗುತ್ತೇನೆ ಎಂದು ಹೇಳಿಕೊಂಡು ಅಡ್ಡಾಡುವ ಇವರು ಫ‌ಲಿತಾಂಶ ಬಂದಾಗ… ಪಾಸಾಗಿರುತ್ತಾರೆ!

– ಹನಮಂತ ಕೊಪ್ಪದ

Advertisement

Udayavani is now on Telegram. Click here to join our channel and stay updated with the latest news.

Next