Advertisement

ಬುಲೆಟ್‌ಟ್ರೈನ್‌ ಬಿಡಲು ಇದು ಲಾಸ್ಟ್‌ ಚಾನ್ಸ್‌

03:50 AM Feb 28, 2017 | Team Udayavani |

ದೇವರಿಯ/ಮೌ (ಉ.ಪ್ರ): ಐದನೇ ಹಂತದ ಮತದಾನ ನಡೆಯುತ್ತಿದ್ದಂತೆ ಉತ್ತರ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಅಖೀಲೇಶ್‌ ಯಾದವ್‌ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿದರು. ದೇವರಿಯದಲ್ಲಿ ಮಾತನಾಡಿದ ಅಖೀಲೇಶ್‌ ಬುಲೆಟ್‌ ಟ್ರೈನ್‌ ಭರವಸೆ ನೀಡುವ ಮೂಲಕ ಮೋದಿ ಅವರು ಕೇಂದ್ರದಲ್ಲಿ ಮತ್ತೂಂದು ಅವಕಾಶವನ್ನು ಗಿಟ್ಟಿಸಿಕೊಳ್ಳುವ ಕನಸು ಕಾಣುತ್ತಿದ್ದಾರೆ. ಇದು ಅಸಾಧ್ಯದ ಮಾತು ಎಂದು ಲೇವಡಿ ಮಾಡಿದ್ದಾರೆ.

Advertisement

ಮೂರು ಬಾರಿ ಗುಜರಾತ್‌ ಸಿಎಂ ಆಗಿ ಒಂದೇ ಒಂದು ಮೆಟ್ರೋ ಯೋಜನೆ ಕಾರ್ಯರೂಪಕ್ಕೆ ತರಲಿಕ್ಕಾಗಲಿಲ್ಲ. ನಾವು ಮೆಟ್ರೋ ಟ್ರೇನ್‌ ಸೇವೆಗೆ ಚಾಲನೆ ನೀಡುತ್ತಿದ್ದೇವೆ. ಆದರೆ ಎಲ್ಲಿ ನಿಮ್ಮ ಬುಲೆಟ್‌ ಟ್ರೈನ್‌ ಎಂದು ಪಶ್ನಿಸಿದರು ಅಖೀಲೇಶ್‌. ಈ ನಡುವೆ ಮೌನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೇರುವ ಸಲುವಾಗಿ ಬಿಎಸ್ಪಿ ಮತ್ತು ಎಸ್ಪಿ ಉ.ಪ್ರ.ದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗುವ ಸಂಚು ರೂಪಿಸಿವೆ ಎಂದು ಆರೋಪಿಸಿದರು. ಮಾ. 11ರಂದು ಫ‌ಲಿತಾಂಶ ಪ್ರಕಟಗೊಂಡ ಬಳಿಕ, ಉತ್ತರ ಪ್ರದೇಶದಲ್ಲಿ ನಾವು ಹೋಳಿ ಸಂಭ್ರಮವನ್ನು ಆಚರಿಸುತ್ತೇವೆ ಎಂದು ಚುಚ್ಚು ಮಾತುಗಳನ್ನಾಡಿದರು.

ಐದನೇ ಹಂತದಲ್ಲಿ ಶೇ.57.36ರಷ್ಟು ಮತ: ಈ ನಡುವೆ ಅಮೇಠಿ, ಫೈಜಾಬಾದ್‌ ಸೇರಿದಂತೆ ಉ.ಪ್ರ.ದ 11 ಜಿಲ್ಲೆಗಳಲ್ಲಿರುವ 51 ಕ್ಷೇತ್ರಗಳಲ್ಲಿ ಶಾಂತಿಯುತ ಹಕ್ಕು ಚಲಾವಣೆಯಾಗಿದೆ.  ಶೇ. 57.36ರಷ್ಟು ಮತದಾನವಾಗಿದ್ದು, ಹಿಂದಿನ ಚುನಾವಣೆಗೆ ಹೋಲಿಕೆ ಮಾಡಿದರೆ ಶೇ.0.3ರಷ್ಟು ಹೆಚ್ಚಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಮತದಾನ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next