Advertisement

ಲಷ್ಕರ್‌, ತೆಹ್ರೀಕ್‌ ಅಪಾಯಕಾರಿ

08:13 AM Oct 06, 2018 | Team Udayavani |

ವಾಷಿಂಗ್ಟನ್‌: ಪಾಕಿಸ್ಥಾನದಲ್ಲಿ ನೆಲೆಯೂರಿರುವ ಲಷ್ಕರ್‌-ಎ-ತಯ್ಯಬಾ (ಎಲ್‌ಇಟಿ), ತೆಹ್ರೀಕ್‌-ಇ-ತಾಲಿಬಾನ್‌ ಪಾಕಿಸ್ಥಾನ್‌ (ಟಿಟಿಪಿ) ಹಾಗೂ ಬೋಕೋ ಹರಾಂ ಉಗ್ರ ಸಂಘಟನೆಗಳು ಅಮೆರಿಕದ ಹಿತಾಸಕ್ತಿಗೆ ಈಗಲೂ ಮಾರಣಾಂತಿಕವಾಗಿವೆ ಎಂದು ಅಮೆರಿಕ ಘೋಷಿಸಿದೆ. ಉಗ್ರ ನಿಗ್ರಹಕ್ಕಾಗಿ ತಾನು ರೂಪಿಸಿರುವ ಹೊಸ ಕಾರ್ಯಸೂಚಿಯಲ್ಲಿ ಈ ಮೂರು ಉಗ್ರ ಸಂಘಟನೆಗಳ ಹೆಸರುಗಳನ್ನು ಉಲ್ಲೇಖೀಸಲಾಗಿದೆ. 

Advertisement

ಈಗಾಗಲೇ ಅಮೆರಿಕದ ಪಾಲಿಗೆ ಅಪಾಯಕಾರಿಯಾಗಿರುವ ಐಸಿಸ್‌, ಅಲ್‌ ಖೈದಾ ಸಂಘಟನೆಗಳ ಜತೆಗೆ ಬೋಕೋ ಹರಾಂ, ಎಲ್‌ಇಟಿ, ಟಿಟಿಪಿಯಂಥ ಹಲವಾರು ಕಟ್ಟರ್‌ ಉಗ್ರವಾದಿಗಳ ಗುಂಪುಗಳು ಅಮೆರಿಕದ ಮೇಲೆ ಹಗೆ ತೀರಿಸಿಕೊಳ್ಳಲು ಕಾಯುತ್ತಿದ್ದು, ಪಾಶ್ಚಾತ್ಯ ದೇಶಗಳ ಪ್ರಭಾವವನ್ನು ಅಂತ್ಯಗೊಳಿಸಲು ಮುಂದಾಗಿವೆ ಎಂದು ಅಮೆರಿಕ ತಿಳಿಸಿದೆ. 

ಏತನ್ಮಧ್ಯೆ, ಪಾಕಿಸ್ಥಾನ ಸರಕಾರ ತಾಲಿಬಾನ್‌ ಉಗ್ರ ಸಂಘಟನೆಯ ಮೇಲೆ ತಾನು ಹೊಂದಿರುವ ಪ್ರಭಾವವನ್ನು ಬಳಸಿಕೊಂಡು, ಆ ಸಂಘಟನೆಯನ್ನು ಶಾಂತಿ ಮಾತುಕತೆಗೆ ಎಳೆಯಲು ಪ್ರಯತ್ನಿಸಬೇಕು ಹಾಗೂ ಅದರ ನಾಯಕರು ಒಂದು ದೇಶದ ಗಡಿಯಿಂದ ಮತ್ತೂಂದು ದೇಶದ ಗಡಿಯೊಳಗೆ ನುಸುಳದಂತೆ ತಾಕೀತು ಮಾಡಬೇಕೆಂದು ಅಮೆರಿಕದ ಕಮಾಂಡರ್‌ ಜನರಲ್‌ ಜೋಸೆಫ್ ವೋಟೆಲ್‌ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next