Advertisement

ಜನರ ದಿಕ್ಕು ತಪ್ಪಿಸುವ ನಾಮಧಾರಿಗಳು

01:17 PM Mar 28, 2017 | |

ದಾವಣಗೆರೆ: ತಾರ್ಕಿಕತೆ, ತಾತ್ವಿಕತೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಸೋಮವಾರ ಯುಬಿಡಿಟಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ತತ್ವ ತರ್ಕ ಸಂಘಟನೆ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಮಾತನಾಡಿದರು.

Advertisement

ತಾರ್ಕಿಕತೆ, ತಾತ್ವಿಕತೆ ಬೇರೆ ಬೇರೆ ಅಲ್ಲ. ಅವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ತಾರ್ಕಿಕತೆ ಇಲ್ಲದ ತಾತ್ವಿಕತೆ, ತಾತ್ವಿಕತೆಗೆ ನಿಲುಕದ ತಾರ್ಕಿಕತೆ ಇರಲಾರದು ಎಂದರು. ಯಾವುದೂ ಅತಿ ಆಗಬಾರದು. ಎಲ್ಲದಕ್ಕೂ ಚೌಕಟ್ಟು ಹಾಕಿಕೊಳ್ಳಬೇಕು. 12ನೇ ಶತಮಾನದ ಶರಣರು ಅರಿವು-ಆಚಾರ ಜೊತೆಗೆ ಜೀವನ ಸಾಗಿಸಿದರು.

ಇದೇ ಕಾರಣಕ್ಕೆ ಅವರ ಜೀವನ ಸಾರ್ಥಕ, ತಾರ್ಕಿಕ, ತಾತ್ವಿಕ ಅನ್ನಲಾಗುವುದು. ಬದುಕು ಕಟ್ಟಿಕೊಳ್ಳುವತ್ತ ಹೆಜ್ಜೆ ಇಡುವುದು ನಿಜಕ್ಕೂ ಶ್ಲಾಘನೀಯ ಎಂದು ಅವರು ಹೇಳಿದರು. ಇಂದು ತತ್ವ, ತರ್ಕ ಬೇರೆ ಬೇರೆ ಆಗುತ್ತಿವೆ. ಎರಡು ಸಮನ್ವಯಗೊಂಡಾಗ ಶಕ್ತಿ ಸೃಷ್ಟಿಯಾಗುತ್ತದೆ. ತತ್ವದ ತಳಹದಿ ಮೇಲೆ ತಾರ್ಕಿಕ ಬದುಕು ಕಟ್ಟಿಕೊಳ್ಳಲು ಈ ಶಕ್ತಿ ಶಕ್ತಿ ನೀಡುತ್ತದೆ.

ಸ್ವಾರ್ಥ ಈಡೇರಿಕೆಗೆ ತರ್ಕ, ತತ್ವ ಬಳಕೆ ಸರಿಯಲ್ಲ. ಜನರ ದಿಕ್ಕು ತಪ್ಪಿಸಿ, ತತ್ವ ಹೇಳುವ ಜನರೇ ಇಂದು ಹೆಚ್ಚಾಗಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಪ್ರತಿನಿತ್ಯ ಇಂದು ಟಿವಿ ವಾಹಿನಿಗಳಲ್ಲಿ ಬರುವ ನಾಮಧಾರಿಗಳು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ತತ್ವ, ಶಾಸ್ತ್ರದ ಹೆಸರಲ್ಲಿ ಜನರನ್ನು ವಂಚಿಸುತ್ತಾರೆ. 

ಅಂತಹ ತತ್ವ, ಶಾಸ್ತ್ರಗಳು ಜನರ ಏಳಿಗೆ ಬಯಸುವುದಿಲ್ಲ ಎಂದ ಅವರು, ತತ್ವ, ತರ್ಕ ಜನರನ್ನು ವಿಚಾರಕ್ಕೊಳಪಡಿಸುವಂತೆ ಮಾಡಬೇಕು ಎಂದು ಅವರು ಹೇಳಿದರು. ಅತಿಥಿಯಾಗಿದ್ದ ಸಾಹಿತಿ ಚಂದ್ರಶೇಖರ ಪಾಟೀಲ್‌ ಮಾತನಾಡಿ, ಸಹಜ ಸಾಮರ್ಥ್ಯವನ್ನು ಸುಳ್ಳು ಎಂದು ಹೇಳುವ ಸಲುವಾಗಿ ಪಟ್ಟಭದ್ರರು ಆಕಸ್ಮಿಕ, ದೇವರ ಅನುಗ್ರಹ, ಪೂರ್ವಜನ್ಮದ ಫಲ ಎಂಬ ಅಂತೆ ಕಂತೆಗಳನ್ನು ಕಟ್ಟುತ್ತಾರೆ.

Advertisement

ಶಾಸ್ತ್ರ, ಪುರಾಣಗಳ ಕೆಲಸವೇ ಪ್ರಶ್ನೆ ಮಾಡುವುದನ್ನು ತಾರ್ಕಿಕ ನೆಲೆಗಟ್ಟನ್ನು ಕಂಡುಕೊಳ್ಳುವ ಬಯಕೆಯನ್ನು ಇಲ್ಲವಾಗಿಸುವುದಾಗಿದೆ ಎಂದರು. ದೇವರು, ಲೋಕ, ವರ ಹೀಗೆ ಅನೇಕ ವಿಷಯಗಳನ್ನು ಬಿತ್ತುವ ಪಟ್ಟಭದ್ರರು ಸಾಮಾನ್ಯರಲ್ಲಿ ಭ್ರಮೆ ತುಂಬುವ ಕೆಲಸ ಮಾಡುತ್ತಾರೆ. ಇದು ಕೇವಲ ನಮ್ಮ ದೇಶದಲ್ಲಿ ಮಾತ್ರ ಅಲ್ಲ, ಎಲ್ಲಾ ದೇಶಗಳಲ್ಲೂ ಭ್ರಮೆ ತುಂಬುವ ಕೆಲಸ ಮಾಡೋರು ಇದ್ದಾರೆ. 

ನಮ್ಮಲ್ಲಿನ ಸಂಸ್ಕೃತ ಪಂಡಿತರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಶಂಕೆ ಪಡುವುದು ತಪ್ಪು ಎಂಬ ಭಯ ತುಂಬುತ್ತಾರೆ. ಅನುಮಾನ ಪಟ್ಟರೆ ನೀನು ನಾಶ ಆಗುತೀ¤ಯ ಎಂದು ಬೆದರಿಸುತ್ತಾರೆ ಎಂದು ಅವರು ತಿಳಿಸಿದರು. ಯಾವುದೇ ವಿಷಯವನ್ನಾಗಲಿ ಸಂಪೂರ್ಣ ತಾರ್ಕಿಕ ನೆಲೆಗಟ್ಟಲ್ಲಿ ಅರಿಯಬೇಕಾದರೆ ಒಳನೋಟ ಮುಖ್ಯ. ಇಂತಹ ಒಳನೋಟ ಇಂದಿನ ನಮ್ಮ ಶಿಕ್ಷಣದಲ್ಲಿ ಇಲ್ಲವಾಗಿದೆ. ಕೇವಲ ಕಂಠಪಾಠ ಮಾಡಿ, ಅದನ್ನು ಪರೀಕ್ಷೆಯ ವೇಳೆ ವಾಂತಿ ಮಾಡುವುದು ನಮ್ಮ ಶಿಕ್ಷಣ ಆಗಿದೆ.

ಇಲ್ಲಿ ತಾರ್ಕಿಕ, ತತ್ವದ ಪ್ರಶ್ನೆಯೇ ಮೂಡುವುದಿಲ್ಲ. ಇಂತಹ ಸಂದರ್ಭದಲ್ಲಿ ತರ್ಕ ತತ್ವದ ಮೂಲಕ ಸಾಗರ್‌ ಒಂದು ಉತ್ತಮ ಪ್ರಯತ್ನ ಮಾಡಲು ಮುಂದಾಗುತ್ತಿದ್ದಾರೆ ಎಂದು ಅವರು ಹೆಳಿದರು. ಸಂಸ್ಥೆಯ ಸಂಸ್ಥಾಪಕ ಎ.ಎಚ್‌. ಸಾಗರ್‌, ಎವಿಕೆ ಕಾಲೇಜು ಇಂಗೀಷ್‌ ವಿಭಾಗದ ಮುಖ್ಯಸ್ಥೆ ಅನುರಾಧ, ಪ್ರೊ| ಭಿಕ್ಷಾವರ್ತಿ ಮs…, ಪ್ರೊ| ಕೆ.ಎಸ್‌. ಈಶ್ವರಪ್ಪ, ಯುಬಿಡಿಟಿ ಕಾಲೇಜು ಪ್ರಾಂಶುಪಾಲ ಡಾ| ಡಿ.ಎಸ್‌. ಪ್ರಕಾಶ್‌, ಪ್ರೊ| ಬಸವರಾಜಪ್ಪ ವೇದಿಕೆಯಲ್ಲಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next