ಚಿಕ್ಕಮಗಳೂರು : ಅಂಬೂರು ಸಮುದ್ರ ಮೀನಿಗೆ ಮುಗಿಬಿದ್ದ ಗ್ರಾಹಕರು. ಮಂಗಳೂರಿನಿಂದ ಬಂದ 340 ಕೆ.ಜಿ. ತೂಕದ ಬೃಹತ್ ಸಮುದ್ರ ಮೀನು ಕಂಡು ಸ್ಥಳೀಯರಿಗೆ ಅಚ್ಚರಿ ಮೂಡಿದೆ.
ನಗರದ ಖಾಸಗಿ ಮೀನು ಅಂಗಡಿಗೆ ಬಂದ ಅಂಬೂರು ಮೀನು ನೋಡಿ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಉಪ್ಪಳ್ಳಿ ಬಡಾವಣೆಯ ಮೀನಿನ ಅಂಗಡಿಯಲ್ಲಿ ಭಾರೀ ಗಾತ್ರದ ಮೀನು ಕಂಡು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದು, ಮೀನಿನ ಗಾತ್ರ ನೋಡಲು ಅಂಗಡಿ ಬಳಿ ಜನ ಜಾತ್ರೆ ನೆರೆದಿದೆ.
ಮೊದಲ ಬಾರಿಗೆ ಬೃಹತ್ ಗಾತ್ರದ ಅಂಬೂರು ಮೀನು ತರಿಸಿದ ಖಾಸಗಿ ಮೀನು ಅಂಗಡಿ ಮಾಲೀಕ, 1 ಕೆಜಿ ಮೀನಿಗೆ 1000 ಕೊಡ್ತಿವಿ ಅಂದ್ರು ಅಂಬೂರು ಫಿಶ್ ಸಿಗ್ತಿಲ್ಲ ಎನ್ನಲಾಗುತ್ತಿದೆ.
ಅಂಬೂರು ಮೀನಿನ ಮಾಂಸ ಕೊಳ್ಳಲು ಮೀನಿನ ಅಂಗಡಿ ಬಳಿ ಸಾಲುಗಟ್ಟಿ ನಿಂತ ಗ್ರಾಹಕರ ಉತ್ಸಾಹ ನೋಡಿ ಮೀನಿನ ದರ ಹೆಚ್ಚಿಸಿದ ಅಂಗಡಿ ಮಾಲೀಕರು.
ಸೌದಿ ಅರೇಬಿಯಾದಲ್ಲಿ ಈ ಮೀನಿಗೆ ಹೆಚ್ಚಿನ ಬೇಡಿಕೆ ಇದೆ.