Advertisement

ಗಡಿ ಬಂಕ್‌ಗಳಿಂದ ಭರ್ಜರಿ ಆದಾಯ

01:24 AM Nov 18, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಇಳಿಸಿದ್ದರಿಂದ ಸರಕಾರದ ಬೊಕ್ಕಸಕ್ಕೆ ನಿರೀಕ್ಷಿಸಿದಷ್ಟು ಆದಾಯ ಖೋತಾ ಆಗದು. ನೆರೆಯ ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಲ್ಲಿ ಮಾರಾಟ ತೆರಿಗೆ ಇಳಿಸದ್ದರಿಂದ ಅಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚೇ ಇದೆ. ಇದರಿಂದ ಗಡಿಯಲ್ಲಿರುವ ಕರ್ನಾಟಕದ ಬಂಕ್‌ಗಳಲ್ಲಿ ಭರ್ಜರಿ ಇಂಧನ ತೈಲ ಮಾರಾಟವಾಗುತ್ತಿರುವುದೇ ಇದಕ್ಕೆ ಕಾರಣ.

Advertisement

ಸಾಮಾನ್ಯವಾಗಿ ರಾಜ್ಯದಲ್ಲಿ ನಿತ್ಯ 60 ಲಕ್ಷ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಮಾರಾಟವಾಗುತ್ತದೆ. ದರ ಇಳಿಕೆಯ ಬಳಿಕ ಬಳಕೆ ಹೆಚ್ಚಳವಾಗಿರುವುದರ ಜತೆಗೆ ಗಡಿಯ ಬಂಕ್‌ಗಳಲ್ಲಿ ನೆರೆ ರಾಜ್ಯಗಳವರ ಖರೀದಿ ಹೆಚ್ಚಿರುವುದರಿಂದ ದೈನಿಕ ಪೆಟ್ರೋಲ್‌, ಡೀಸೆಲ್‌ ವ್ಯಾಪಾರ 80 ಲಕ್ಷ ಲೀಟರ್‌ವರೆಗೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ನಿತ್ಯ 3ರಿಂದ 6 ಸಾವಿರ ಲೀಟರ್‌ ಮಾರಾಟವಾಗುತ್ತಿದ್ದ ಗಡಿಭಾಗದ ಬಂಕ್‌ಗಳಲ್ಲಿ ಮಾರಾಟ 15 ಸಾವಿರದಿಂದ 20 ಸಾವಿರ ಲೀಟರ್‌ಗೆ ಏರಿಕೆಯಾಗಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಐಎಸ್‌ಐ ಉಗ್ರ ಸೆರೆ

ನಷ್ಟ ಕಡಿಮೆ
ರಾಜ್ಯ ಸರಕಾರಕ್ಕೆ ಪೆಟ್ರೋಲ್‌, ಡೀಸೆಲ್‌ ಮೇಲಿನ ಮಾರಾಟ ತೆರಿಗೆಯಿಂದ ಮಾಸಿಕ 1,500ರಿಂದ 1,600 ಕೋಟಿ ರೂ.ವರೆಗೆ ಆದಾಯ ಬರುತ್ತದೆ. ಅಕ್ಟೋಬರ್‌ನಲ್ಲಿ 1,739.25 ಕೋಟಿ ರೂ. ಸಂಗ್ರಹವಾಗಿದೆ. ನೆರೆ ರಾಜ್ಯಗಳು ತೆರಿಗೆ ಕಡಿತ ಮಾಡದಿದ್ದರೆ ನವೆಂಬರ್‌ನಲ್ಲಿ 1,500 ಕೋಟಿ ರೂ.ವರೆಗೆ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆರಿಗೆ ಇಳಿಕೆಯಿಂದ ವಾರ್ಷಿಕ 2,100 ಕೋಟಿ ರೂ. ನಷ್ಟವಾಗಬಹುದು ಎಂದು ಅಂದಾಜು ಮಾಡಲಾಗಿದ್ದು, ಗಡಿಯಲ್ಲಿ ಮಾರಾಟ ಹೆಚ್ಚಳವಾಗಿರುವುದರಿಂದ ನಷ್ಟ ಕಡಿಮೆಯಾಗಲಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next