Advertisement
ವಿಧಾನಸೌಧದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಕಾರ್ಯಕ್ರಮದಲ್ಲಿ 8 ರಿಂದ 10 ಸಾವಿರ ಯುವಜನತೆ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಯುವ ಸಾಧಕರಿಗೆ ಸನ್ಮಾನ ಕೂಡ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
Related Articles
Advertisement
ಇದರಲ್ಲಿ ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲದೆ, ಆಸಕ್ತ ಯುವಜನತೆಗೆ ಉದ್ಯೋಗಾವಕಾಶ, ಉನ್ನತ ಶಿಕ್ಷಣ ಅವಕಾಶ, ವಿದ್ಯಾರ್ಥಿ ವೇತನ, ಸರ್ಕಾರದ ಯೋಜನೆಗಳು, ವಸತಿ ನಿಲಯಗಳು, ಉದ್ಯೋಗ ಸಿದ್ಧತೆಗೆ ಅಗತ್ಯ ಮಾಹಿತಿ ಸಿಗುವ ವ್ಯವಸ್ಥೆ ಕಲ್ಪಿಸಲಾಗು ವುದು ಎಂದರು. ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜಕುಮಾರ್ ಖತ್ರಿ, ಉಪಮುಖ್ಯಮಂತ್ರಿಗಳ ಕಾರ್ಯದರ್ಶಿ ಪ್ರದೀಪ್ ಇತರರು ಉಪಸ್ಥಿತರಿದ್ದರು.
ಶೇ.106 ಉದ್ಯೋಗಾವಕಾಶ ಪ್ರಮಾಣಬೆಂಗಳೂರು: ರಾಜ್ಯದಲ್ಲಿ ಉದ್ಯೋಗಾವಕಾಶ ಪ್ರಮಾಣವು ಶೇ. 106 ರಷ್ಟಿದೆ. ರಾಜ್ಯದಲ್ಲಿ ನಾನಾ ಹಂತದಲ್ಲಿ ಉತ್ತೀರ್ಣರಾಗುತ್ತಿರುವ ಸಂಖ್ಯೆಗಿಂತಲೂ ಹೆಚ್ಚು ಉದ್ಯೋಗಾವಕಾಶವಿರುವ ರಾಜ್ಯವೆಂದರೆ ಅದು ಕರ್ನಾಟಕ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು. ರಾಜ್ಯದಲ್ಲಿ ಸಂಘಟಿತ ವಲಯದಲ್ಲಿ ಉದ್ಯೋಗಾ ವಕಾಶ ಶೇ.106ರಷ್ಟಿದೆ. ಪದವೀಧರರಾಗುತ್ತಿರುವ ಸಂಖ್ಯೆ 5.50 ಲಕ್ಷ ಇದ್ದರೆ, 5.75 ಲಕ್ಷ ಉದ್ಯೋಗಾ ವಕಾಶಗಳಿವೆ. ಇದು ಸಂಘಟಿತ ವಲಯದ ಮಾಹಿತಿಯಾದರೆ ಇನ್ನು ಅಸಂಘಟಿತ ವಲಯದಲ್ಲಿ ಎಷ್ಟು ಉದ್ಯೋಗಾವಕಾಶಗಳಿರಬಹುದು. ರಾಜ್ಯದಲ್ಲಿ ಉದ್ಯೋಗ ಅವಕಾಶಕ್ಕಿಂತಲೂ ಪೂರೈಕೆ ಕಡಿಮೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದು, ಅದರ ಬಗ್ಗೆ ಮಾಹಿತಿ, ಸಂವಹನದ ಕೊರತೆ ಹೆಚ್ಚಾಗಿದೆ. ಪದವಿ ಶಿಕ್ಷಣ ಮುಗಿಸಿದ ಮೇಲೆ ಉದ್ಯೋಗ ಅರಸುವುದಕ್ಕಿಂತ ವ್ಯಾಸಂಗ ಮಾಡುವಾಗಲೇ ಉದ್ಯೋಗಾವಕಾಶ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳುವಲ್ಲಿ ಸಂವಹನದ ಕೊರತೆ ಇದೆ. ಇದು ವಿದ್ಯಾರ್ಥಿಗಳಲ್ಲಿ ಅಂಜಿಕೆಯ ಭಾವನೆ ಮೂಡಿಸಿ ಆತ್ಮವಿಶ್ವಾಸವನ್ನು ಕುಂದಿಸುತ್ತದೆ. ಇದನ್ನು ನಿವಾರಿಸಿ ಪರಿಣಾಮಕಾರಿ ಸಂವಹನ ವ್ಯವಸ್ಥೆ ಕಲ್ಪಿಸಲು ಒತ್ತು ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಕಲಿಕಾ ಹಂತದಲ್ಲಿ ಉದ್ಯೋಗಾವಕಾಶ, ಕಂಪೆನಿಗಳೊಂದಿಗೆ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಆದ್ಯತೆ ಕೊಡಲಾಗುವುದು ಎಂದು ಹೇಳಿದರು. ಸಮಗ್ರ ಮಾಹಿತಿ ವೇದಿಕೆ: ದೇಶದಲ್ಲಿ ಆರ್ಥಿಕ ಹಿಂಜರಿಕೆ ಸ್ಥಿತಿಯಿದ್ದರೂ ಹೆಚ್ಚು ಉದ್ಯೋಗಾವಕಾಶವಿದ್ದರೆ ಈ ಬಗ್ಗೆ ಆಕಾಂಕ್ಷಿಗಳಿಗೆ ಮಾಹಿತಿ ನೀಡಲು ಸೂಕ್ತ ವ್ಯವಸ್ಥೆ ಕಲ್ಪಿಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅಶ್ವತ್ಥ ನಾರಾಯಣ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನೋಡೆಲ್ ಅಧಿಕಾರಿಗಳಿದ್ದರೂ ಪರಿಣಾಮಕಾರಿ ಸಂವಹನವಿಲ್ಲದ ಕಾರಣ ಅಡೆಗಡೆಗಳಾಗುತ್ತಿದೆ. ಆ ಹಿನ್ನೆಲೆಯಲ್ಲಿ ಜ. 12ರಂದು ವಿಶೇಷ ವೇದಿಕೆಯೊಂದನ್ನು ಉದ್ಘಾಟಿಸಲಾಗುತ್ತಿದೆ. ಕೌಶಲ್ಯಾಭಿವೃದ್ಧಿ, ಉದ್ಯೋಗ ವಿನಿಮಯ, ಕ್ಷೇತ್ರವಾರು ಉದ್ಯೋಗಾವಕಾಶ ವಿವರ ಒಂದೇ ಕಡೆ ಸಾರ್ವಜನಿಕರಿಗೂ ಸಿಗುವ ವ್ಯವಸ್ಥೆ ತರಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಕಲಿಕಾ ಹಂತದಲ್ಲೇ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಸಿದ್ಧರಾಗಲು ಅನುಕೂಲವಾಗಲಿದೆ ಎಂದರು. ಕೆಲ ಬ್ಯಾಂಕ್‌ಗಳಲ್ಲಿ ಸೌಲ ಸೌಲಭ್ಯವಿದ್ದು, ಆಯ್ದ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಶೇ.90 ಸಬ್ಸಿಡಿ ಕೂಡ ಇದೆ. ಆದರೆ ಸಂವಹನ ಕೊರತೆಯಿಂದ ಬಹಳಷ್ಟು ಮಂದಿ ಬಳಸಿಕೊಳ್ಳುತ್ತಿಲ್ಲ. ಜತೆಗೆ ಸ್ಟಾಂಟ್ ಅಪ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಎಲಿವೇಟ್ 100 ಇತರೆ ಕಾರ್ಯಕ್ರಮಗಳಿಗೆ ಸಾಕಷ್ಟು ಆರ್ಥಿಕ ನೆರವು ಸಿಗುತ್ತಿದೆ. ಇದನ್ನೆಲ್ಲಾ ಬಳಸಿಕೊಂಡು ಉದ್ಯಮಶೀಲರನ್ನಾಗಿಸುವ ಪ್ರಯತ್ನ ಮಾಡಲಾಗುವುದು.
-ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ