Advertisement

ಜ.15ರ ಒಳಗೆ ಲ್ಯಾಪ್‌ಟಾಪ್‌ ವಿತರಣೆ: ಸಚಿವ ರಾಯರಡ್ಡಿ

07:45 AM Dec 24, 2017 | Team Udayavani |

ದಾವಣಗೆರೆ: ಉನ್ನತ ವಿದ್ಯಾಭ್ಯಾಸ ಮಾಡುವ ರಾಜ್ಯದ ಎಲ್ಲಾ ವರ್ಗದ ಒಟ್ಟು ಒಂದೂವರೆ ಲಕ್ಷ ವಿದ್ಯಾರ್ಥಿಗಳಿಗೆ ಬರುವ ಜನವರಿ 15ರ ಒಳಗೆ ಅತ್ಯಾಧುನಿಕ ಮಾದರಿಯ ಲ್ಯಾಪ್‌ಟಾಪ್‌ ವಿತರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದರು.

Advertisement

ತೋಳಹುಣಸೆ ಗ್ರಾಮದ ದಾವಣಗೆರೆ ವಿಶ್ವವಿದ್ಯಾನಿಲಯದ ಆವರಣದ ಶಿವಗಂಗೋತ್ರಿಯಲ್ಲಿ ಶನಿವಾರ ವಿವಿಯ 5ನೇ ಘಟಿಕೋತ್ಸವ, ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ರಾಜ್ಯದ 36 ಸಾವಿರ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದೀಗ ಎಲ್ಲ ವರ್ಗದವರಿಗೆ ಲ್ಯಾಪ್‌ಟಾಪ್‌ ನೀಡಲು ಟೆಂಡರ್‌ ಕರೆಯಲಾಗಿದೆ ಎಂದರು.

ಸರ್ಕಾರಿ ಕಾಲೇಜುಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಎಲ್ಲಾ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡಬೇಕೆಂಬ ಯೋಜನೆಗೆ ಸಿಎಂ ಸಿದ್ದರಾಮಯ್ಯ ಸಮ್ಮತಿಸಿದ್ದರು. ಆದರೆ, ಕೆಲವರ ಹತಾಶ ವರ್ತನೆಯಿಂದ ಕಾರ್ಯ ವಿಳಂಬ ಆಯಿತು. ಇದೀಗ ಎಲ್ಲ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಮುಂದಿನ ವರ್ಷ 2 ಲಕ್ಷ ಲ್ಯಾಪ್‌ಟಾಪ್‌ ನೀಡುವುದಕ್ಕಾಗಿ ಬಜೆಟ್‌ನಲ್ಲೇ ಹಣ ಮೀಸಲಿಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next