Advertisement

ಪ್ರಮುಖ ಪಂದ್ಯಕ್ಕೂ ಮೊದಲು ಭಾರತ ತಂಡವನ್ನು ಹಾಡಿ ಹೊಗಳಿದ ಲಂಕಾ ನಾಯಕ

11:12 AM Sep 06, 2022 | Team Udayavani |

ದುಬೈ: ಏಷ್ಯಾ ಕಪ್ ನ ಸೂಪರ್ ಫೋರ್ ಹಂತದ ಎರಡನೇ ಪಂದ್ಯವನ್ನು ಭಾರತ ತಂಡ ಇಂದು ಆಡುತ್ತಿದೆ. ಮಂಗಳವಾರ ಸಂಜೆ ದುಬೈ ಅಂಗಳದಲ್ಲಿ ನಡೆಯುವ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾವನ್ನು ಎದುರಿಸಲಿದೆ. ಪಾಕಿಸ್ಥಾನ ವಿರುದ್ದ ಸೋಲನುಭವಿಸಿದ ಭಾರತ ತಂಡ ಕೂಟದಲ್ಲಿ ಉಳಿಯಬೇಕಾದರೆ ಇಂದು ಲಂಕಾ ವಿರುದ್ಧ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.

Advertisement

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲಂಕಾ ನಾಯಕ ದಾಸುನ್ ಶನಕಾ ಭಾರತ ತಂಡವನ್ನು ಹಾಡಿ ಹೊಗಳಿದ್ದಾರೆ.

ಭಾರತ ತಂಡದ ಆಟಗಾರರು ಅನುಭವಿಗಳು. ಬಹಳಷ್ಟು ಐಪಿಎಲ್ ಮತ್ತು ಹಲವೆಡೆ ಟಿ20 ಪಂದ್ಯಗಳನ್ನಾಡಿದ್ದಾರೆ. ಭಾರತ ತಂಡದ ಆಟಗಾರರು ಯಾವುದೇ ತಂಡದ ವಿರುದ್ಧ ಗೆಲ್ಲುವ ಮನಸ್ಥಿತಿ ಹೊಂದಿದ್ದಾರೆ. ಆದರೂ ನಮ್ಮ ತಂಡ ರೋಹಿತ್ ಶರ್ಮಾ ಪಡೆಯನ್ನು ಎದುರಿಸಲು ಸಜ್ಜಾಗಿದೆ ಎಂದು ಶನಕಾ ಹೇಳಿದ್ದಾರೆ.

“ನಮ್ಮನ್ನು ಎದುರಿಸುವಾಗ ಭಾರತ ತಂಡ ಒತ್ತಡ ಅನುಭವಿಸುವುದಿಲ್ಲ. ಅವರು ಪಾಕಿಸ್ಥಾನ ವಿರುದ್ಧ ಉತ್ತಮ ಪಂದ್ಯವಾಡಿದರು. ಅವರು ಉತ್ತಮ ಕ್ರಿಕೆಟ್ ಆಡುತ್ತಿದ್ದಾರೆ ಹೀಗಾಗಿ ಅವರು ಯಾವುದೇ ಒತ್ತಡಕ್ಕೆ ಒಳಗಾಗುವುದಿಲ್ಲ” ಎಂದು ದಾಸುನ್ ಶನಕ ಹೇಳಿದ್ದಾರೆ.

ಇದನ್ನೂ ಓದಿ:ವೈಭವದ ಮಡಿಕೇರಿ ದಸರಾ ಆಚರಣೆಗೆ ನಿರ್ಧಾರ : 1 ಕೋ.ರೂ. ಅನುದಾನ; 18 ಲಕ್ಷ ರೂ. ಜಿಎಸ್‌ಟಿ!

Advertisement

“ಭಾರತದ ವಿರುದ್ಧ ಪಂದ್ಯವನ್ನು ನಾವು ಇತರ ಪಂದ್ಯಗಳಂತೆ ಆಡುತ್ತೇವೆ. ಧನಾತ್ಮಕ ರೀತಿಯಲ್ಲಿ ಆಡುತ್ತೇವೆ” ಎಂದು ಲಂಕಾ ನಾಯಕ ಹೇಳಿದರು.

ಸೂಪರ್ ಫೋರ್ ಹಂತದ ಮೊದಲ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ಥಾನ ವಿರುದ್ಧ ಸೋಲನುಭವಿಸಿದೆ. ಇನ್ನೊಂದೆಡೆ ಶ್ರೀಲಂಕಾ ತಂಡವು ಅಫ್ಘಾನಿಸ್ಥಾನ ತಂಡದ ವಿರುದ್ಧ ಗೆಲುವು ಸಾಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next