Advertisement

ಹಂಬನತೋಟ ಬಂದರು ಒಡೆತನದ ಶೇ.70 ಹಕ್ಕು ಚೀನ ಕಂಪೆನಿಗೆ ಮಾರುವ ಲಂಕಾ

05:27 PM Jul 28, 2017 | udayavani editorial |

ಕೊಲಂಬೋ : ವ್ಯೂಹಾತ್ಮಕ ಮಹತ್ವದ ತಾಣದಲ್ಲಿರುವ ಹಂಬನತೋಟ ಬಂದರಿನ ಒಡೆತನದ ಶೇ.70ರಷ್ಟು ಹಕ್ಕನ್ನು 1.12 ಶತಕೋಟಿ ಡಾಲರ್‌ಗೆ ಚೀನದ ಕಂಪೆನಿಯೊಂದಕ್ಕೆ ಮಾರುವ ವಹಿವಾಟಿಗೆ ನಾಳೆ ಶನಿವಾರ ಲಂಕಾ ಸಹಿಹಾಕಲಿದೆ ಎಂದು ಪ್ರಧಾನಿ ರಾಣಿಲ್‌ ವಿಕ್ರಮಸಿಂಘ ತಿಳಿಸಿದ್ದಾರೆ. 

Advertisement

ಚೀನದ ಮರ್ಚಂಟ್ಸ್‌ ಪೋರ್ಟ ಹೋಲ್ಡಿ,ಗ್ಸ್‌ (ಸಿಎಂ ಪೋರ್ಟ್‌) ಕಂಪೆನಿಯೊಂದಿಗೆ ಲಂಕೆಯ ಬಂದರು ಪ್ರಾಧಿಕಾರ ನಾಳೆ ಶನಿವಾರ ಸಹಿ ಹಾಕುವ ಈ ವ್ಯೂಹಾತ್ಮಕ ವಹಿವಾಟು ಭಾರತದ ಭದ್ರತೆಗೆ ಕಳವಳಕಾರಿಯಾಗಿದೆ ಎನ್ನಲಾಗಿದೆ. 

ಹಂಬನತೋಟ ಬಂದರಿನ ಒಡೆತನದ ಶೇ.70ರಷ್ಟು ಹಕ್ಕನ್ನು 99 ವರ್ಷಗಳ ಲೀಸಿಗೆ ಚೀನ ಕಂಪೆನಿಗೆ ಮಾರುವ ಮೂಲಕ ಸಿಗುವ ಹಣವನ್ನು ಚೀನ ಸಾಲಕ್ಕೆ ಹೊಂದಿಸಲಾಗುವುದು ಎಂದು ವಿಕ್ರಮಸಿಂಘ ಹೇಳಿದ್ದಾರೆ. ಹಂಬನತೋಟ ನಷ್ಟವು ಈಗಾಗಲೇ 30 ಕೋಟಿ ಅಮೆರಿಕ ಡಾಲರ್‌ ದಾಟಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next