Advertisement

ಪಾಕ್ ಪ್ರವಾಸಕ್ಕೆ ಪೂರ್ಣ ತಂಡವನ್ನೇ ಪ್ರಕಟಿಸಿದ ಲಂಕಾ

03:43 PM Nov 29, 2019 | Team Udayavani |

ಕೊಲಂಬೋ: ಸುಮಾರು ಹತ್ತು ವರ್ಷಗಳ ಬಳಿಕ ಪಾಕಿಸ್ಥಾನದ ನೆಲದಲ್ಲಿ ಟೆಸ್ಟ್ ಪಂದ್ಯಾವಳಿಯನ್ನಾಡಲಿರುವ ಶ್ರೀಲಂಕಾ ತಂಡ ತನ್ನ ತಂಡ ಪ್ರಕಟಿಸಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಪೂರ್ಣ ತಂಡವನ್ನೇ ಪ್ರಕಟಿಸಿದೆ.

Advertisement

ಇತ್ತೀಚೆಗೆ ಏಕದಿನ ಮತ್ತು ಟಿ ಟ್ವೆಂಟಿ ಸರಣಿಗೆ ಪಾಕ್ ಪ್ರವಾಸ ಕೈಗೊಂಡಿದ್ದ ಲಂಕಾ ತಂಡದಲ್ಲಿ ಪ್ರಮುಖ ಆಟಗಾರು ತಪ್ಪಿಸಿಕೊಂಡಿದ್ದರು. ಆ ಹತ್ತು ಆಟಗಾರರು ಟೆಸ್ಟ್ ಸರಣಿಗೆ ಲಭ್ಯರಾಗಿದ್ದು, ಕೆಲವರು ಆಯ್ಕೆಯಾಗಿದ್ದಾರೆ.

ತಂಡ: ದಿಮುತ್ ಕರುಣರತ್ನೆ (ನಾ), ಒಶಾಡ ಫರ್ನಾಂಡೋ, ಕುಸಲ್ ಮೆಂಡಿಸ್, ಆಂಜಲೋ ಮ್ಯಾಥ್ಯೂಸ್, ದಿನೇಶ್ ಚಂಡಿಮಾಲ್, ಕುಸಲ್ ಪೆರೆರಾ, ಲಹಿರು ತಿರಮನ್ನೇ, ಶನಂಜಯ್ ಡಿ ಸಿಲ್ವ, ನಿರೋಶನ್ ಡಿಕ್ ವೆಲ್ಲಾ, ದಿಲ್ರುವಾನ್ ಪರೆರಾ, ಲಸಿತ್ ಎಂಬುಲದೇನಿಯಾ, ಸುರಂಗ ಲಕ್ಮಲ್, ಲಹಿರು ಕುಮಾರ, ವಿಶ್ವ ಫರ್ನಾಂಡೋ, ಕಸುನ ರಜಿತಾ, ಲಕ್ಷನ್ ಸಂದಕನ್.

ಕಳೆದ ಪಾಕ್ ಸರಣಿಯಲ್ಲಿ ಯುವ ತಂಡವನ್ನು ಲಂಕಾ ಕಳುಹಿಸಿತ್ತು. ಆಟಗಾರರಿಗೆ ಭಾರಿ ಭದ್ರತೆಯನ್ನೂ ಒದಗಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next