ಕೋಲ್ಕತ : ಪ್ರವಾಸಿ ಲಂಕೆಯ ಎದುರಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ಶುಕ್ರವಾರ ಭಾರತ 74 ರನ್ ಗಳಿಸುವಷ್ಟರಲ್ಲಿ ಮತ್ತೆರಡು ವಿಕೆಟ್ ಕಳೆದುಕೊಂಡಿತಾದರೂ ಚೇತೇಶ್ವರ ಪೂಜಾರ ಅತ್ಯಂತ ಶಿಸ್ತು ಬದ್ಧ ಮತ್ತು ಸಂಯಮದಿಂದ ಕೂಡಿದ ಆಟವನ್ನಾಡಿ, ಅಜೇಯ 47 ರನ್ ಬಾರಿಸಿ, ಭಾರತವನ್ನು ತಕ್ಕಮಟ್ಟಿಗೆ ಆಧರಿಸಿದರು.
ಮಳೆಯಿಂದಾಗಿ ಬೇಗನೆ ಭೋಜನ ವಿರಾಮ ನೀಡಲಾಯಿತು. ಆದರೆ ಆ ಬಳಿಕವೂ ಮಳೆ ಮುಂದುವರಿದ ಕಾರಣ ದಿನದ ಆಟವನ್ನು ಪೂರ್ತಿಯಾಗಿ ರದ್ದು ಮಾಡಲಾಯಿತು.
ಇಂದು ಔಟಾದ ದಾಂಡಿಗರೆಂದರೆ ಅಜಿಂಕ್ಯ ರಹಾಣೆ 4 ಮತ್ತು ಆರ್ ಅಶ್ವಿನ್ 4.
ಲಂಕೆಯ ಎಸೆಗಾರ ಸುರಂಗಾ ಲಕ್ಮಲ್ ನಿನ್ನೆ ಐದು ರನ್‌ಗೆ 3 ವಿಕೆಟ್ ಕಿತ್ತಿದ್ದರು. ಇಂದು ಇನ್ನೋರ್ವ ಎಸೆಗಾರ ಶನಕ 23 ರನ್ ಗೆ ಎರಡು ವಿಕೆಟ್ ಕಿತ್ತರು.
ನಿನ್ನೆಯ ಮೊದಲ ಕೇವಲ 11.5 ಓವರ್‌ಗಳ ಆಟ ನಡೆದಿತ್ತು. ಇಂದು 21 ಓವರ್‌ಗಳ ಆಟ ಸಾಗಿತು.