Advertisement

ಲಂಕಾ ಕ್ರಿಕೆಟಿಗರು ಫಿಟ್‌ನೆಸ್‌ ಕಳೆದುಕೊಂಡರೆ ವೇತನ ಕಡಿತ !

12:45 PM Dec 22, 2021 | Team Udayavani |

ಕೊಲಂಬೊ: ರಾಷ್ಟ್ರೀಯ ತಂಡದ ಆಟಗಾರರ ಫಿಟ್‌ನೆಸ್‌ ವಿಚಾರದಲ್ಲಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

Advertisement

ಇದರಂತೆ ಮುಂದಿನ ವರ್ಷದಿಂದ ಆಟಗಾರರು ಕಟ್ಟುನಿಟ್ಟಿನ ಫಿಟ್‌ನೆಸ್‌ ಪರೀಕ್ಷೆಗೆ ಒಳಪಡಲಿದ್ದು, ಇಲ್ಲಿ ಅನುತ್ತೀರ್ಣರಾದ ಆಟಗಾರ ವೇತನ ಕಡಿತ ಮಾಡಲು ನಿರ್ಧರಿಸಿದೆ! ಲಂಕಾ ಕ್ರಿಕೆಟ್‌ ಮಂಡಳಿ ಕಳೆದ ವರ್ಷ ರೂಪಿಸಿದ್ದ ನಿಯಮಾನುಸಾರ ಆಟಗಾರರು 8 ನಿಮಿಷ, 55 ಸೆಕೆಂಡ್‌ಗಳಲ್ಲಿ 2 ಕಿ.ಮೀ. ಓಟವನ್ನು ಪೂರೈಸಬೇಕಿತ್ತು.

ಇದಕ್ಕೂ ಮುನ್ನ ಈ ದೂರವನ್ನು 8 ನಿಮಿಷ, 35 ಸೆಕೆಂಡ್‌ಗಳಲ್ಲಿ ಪೂರೈಸುವಂತೆ ಸೂಚಿಸಲಾಗಿತ್ತು. ಬಳಿಕ ಕ್ರಿಕೆಟ್‌ ಸಲಹಾ ಸಮಿತಿ ಮನವಿ ಮೇರೆಗೆ ಈ ಸಮಯವನ್ನು ತುಸು ಹೆಚ್ಚಿಸಲಾಗಿತ್ತು.

ನೂತನ ನಿಯಮ: ಆದರೆ ಈಗಿನ ಹೊಸ ನಿಯಮದಲ್ಲಿ 2 ಕಿ.ಮೀ ಓಟಕ್ಕೆ 8 ನಿಮಿಷ, 10 ಸೆಕೆಂಡ್‌ ಅವಧಿ ನಿಗದಿ ಪಡಿಸಲಾಗಿದೆ. ಇದರಲ್ಲಿ ತೇರ್ಗಡೆಯಾಗದ ಆಟಗಾರರ ವೇತನಕ್ಕೆ ಕತ್ತರಿ ಹಾಕುವ ದಿಟ್ಟ ನಿರ್ಧಾರ ತೆಗೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next