Advertisement

ಶ್ರೀಲಂಕಾ ಸ್ಪೋಟ ಪ್ರಕರಣ: ಹೆಲ್ಪ್ ಲೈನ್‌ ತೆರೆದ ಭಾರತೀಯ ಹೈಕಮಿಷನ್‌ ಕಛೇರಿ

08:56 AM Apr 22, 2019 | Hari Prasad |

ಕೊಲಂಬೋ: ದ್ವೀಪ ರಾಷ್ಟ್ರದ ರಾಜಧಾನಿಯಲ್ಲಿ ರವಿವಾರ ಬೆಳಿಗ್ಗೆಯಿಂದ ಎಂಟು ಕಡೆಗಳಲ್ಲಿ ಸಂಭವಿಸಿರುವ ಬಾಂಬ್‌ ಸ್ಪೋಟಗಳಲ್ಲಿ 162 ಜನ ಮೃತಪಟ್ಟಿದ್ದಾರೆ ಮತ್ತು 400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಹಾಗೂ ಗಾಯಾಳುಗಳಲ್ಲಿ ಭಾರತೀಯರೂ ಸೇರಿದಂತೆ ವಿದೇಶಿ ನಾಗರಿಕರು ಇರುವ ಸಂಶಯವನ್ನು ಶ್ರೀಲಂಕಾ ಸರಕಾರ ವ್ಯಕ್ತಪಡಿಸಿದೆ.

Advertisement

ಇದೀಗ ಕೊಲಂಬೋದಲ್ಲಿರುವ ಭಾರತೀಯ ಹೈಕಮಿಷನರ್‌ ಅವರು ದ್ವೀಪರಾಷ್ಟ್ರದ ಬಾಂಬ್‌ ದಾಳಿಯಲ್ಲಿ ಸಿಲುಕಿರಬಹುದಾಗಿರುವ ಭಾರತೀಯ ಪ್ರಜೆಗಳ ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಒಟ್ಟು ಐದು ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆಗೊಳಿಸಿದ್ದು ಆ ಸಂಖ್ಯೆಗಳು ಹೀಗಿವೆ: +94777903082, +94112422788, +94112422789, +94777902082 ಮತ್ತು +94772234176

ಈ ಕುರಿತಾಗಿ ಟ್ವೀಟ್‌ ಮಾಡಿರುವ ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನರ್‌ ಅವರು ‘ಕೊಲಂಬೋ ಹಾಗೂ ಬಟ್ಟಿಕಲೋವಾಗಳಲ್ಲಿ ಬಾಂಬ್‌ ಸ್ಪೋಟ ಸಂಭವಿಸಿದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ. ಯಾವುದೇ ರೀತಿಯ ಸಹಾಯ ಮತ್ತು ಮಾಹಿತಿಗಳ ಅಪೇಕ್ಷೆಯಲ್ಲಿರುವ ಭಾರತೀಯರು ನಮ್ಮ ಈ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ’ ಎಂದವರು ತಿಳಿಸಿದ್ದಾರೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರೂ ಸಹ ಕೊಲಂಬೋದಲ್ಲಿರುವ ಭಾರತೀಯ ಹೈಕಮಿಷನರ್‌ ಜೊತೆ ನಿರಂತರ ಸಂಪರ್ಕದಲ್ಲಿದ್ದು ಅಲ್ಲಿನ ಬೆಳವಣಿಗೆಗಳ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next