Advertisement

“ಪಠ್ಯಗೀತೆ  ಹಾಡುವುದರಿಂದ ಭಾಷಾ ಶುದ್ಧಿ’

08:00 AM Mar 20, 2018 | |

ಮರವಂತೆ:  ಪಠ್ಯಗೀತೆ ರಾಗಬದ್ಧವಾಗಿ ಹಾಡುವುದು, ಕಂಠಪಾಠ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಭಾಷಾ ಶುದ್ಧಿ, ಉಚ್ಛಾರ ಸ್ಪಷ್ಟತೆ, ವ್ಯಾಕರಣ ಅರಿವು ಮತ್ತಿತರ ಶೈಕ್ಷಣಿಕ ಪ್ರಯೋಜನಗಳಿವೆ. ಅದರೊಂದಿಗೆ ನಾಡು, ನುಡಿ, ಸಂಸ್ಕೃತಿ ಬಿಂಬಿಸುವ ವೈವಿಧ್ಯಮಯ ಗೀತೆಗಳ ಗಾಯನದಿಂದ ಮಕ್ಕಳಲ್ಲಿ ಸಂಗೀತಾಸಕ್ತಿ  ಉತ್ತೇಜಿಸಲು ಸಾಧ್ಯ ಎಂದು ಚಿತ್ತೂರು ಸ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕ ನಾರಾಯಣ ಶೆಟ್ಟಿ ಹೇಳಿದರು. 

Advertisement

ಆಯ್ದ ಪಠ್ಯಗೀತೆಗಳು ಸೇರಿದಂತೆ ಕನ್ನಡ ನಾಡು, ನುಡಿ, ಸಂಸ್ಕೃತಿಯ ಗೀತೆಗಳನ್ನಾಧರಿಸಿ  ಚಿತ್ತೂರು ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ಗಾಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು.

ಈ ಸಂದರ್ಭ ಸಹಶಿಕ್ಷಕ‌ ಗೋವಿಂದ ಶೆಟ್ಟಿ, ಗೀತಾ, ಗೌರವ ಶಿಕ್ಷಕಿಯರಾದ ರಾಜೀವಿ, ಪ್ರತಿಮಾ, ಸುಮಧುರ ಮತ್ತು ರಶ್ಮಿತಾ ಮೊದಲಾದವರು ಉಪಸ್ಥಿತರಿದ್ದರು.

ಆಕಾಶವಾಣಿ ಕಲಾವಿದ ಚಂದ್ರ ಕೆ. ಹೆಮ್ಮಾಡಿ ಪಠ್ಯಗೀತೆಗಳೊಂದಿಗೆ ನಾಡಗೀತೆ, ರಾಷ್ಟ್ರಗೀತೆ, ದೇಶಭಕ್ತಿ, ಕನ್ನಡಗೀತೆ, ಜಾನಪದ, ತತ್ವಪದ ಮತ್ತಿತರ ಹಾಡುಗಳನ್ನು ವಿದ್ಯಾರ್ಥಿಗಳಿಗೆ ರಾಗಬದ್ಧವಾಗಿ ಹೇಳಿ ಅವುಗಳ ಶೈಕ್ಷಣಿಕ,  ಸಾಂಸ್ಕೃತಿಕ ಮಹತ್ವವನ್ನು ತಿಳಿಸಿಕೊಟ್ಟರು. ದೈ.ಶಿ. ಶಿ. ಬಾಲಕೃಷ್ಣ ಶೆಟ್ಟಿ ನಿರ್ವಹಿಸಿ, ಸಹಶಿಕ್ಷಕ ಗಣಪತಿ ಕಿಣಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next